ETV Bharat / sports

ಆಲ್​ ಇಂಗ್ಲೆಂಡ್​ ಓಪನ್​ ಬ್ಯಾಡ್ಮಿಂಟನ್​ ಟೂರ್ನಿ ಕ್ವಾರ್ಟರ್ ಫೈನಲ್​ಗೆ ಸಿಂಧು ಲಗ್ಗೆ

author img

By

Published : Mar 13, 2020, 10:01 AM IST

ಭಾರತದ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಆಲ್​ ಇಂಗ್ಲೆಂಡ್​ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯ ಕ್ವಾರ್ಟರ್ ಫೈನಲ್​ ತಲುಪಿದ್ದಾರೆ.

All England Open: PV Sindhu progresses to quarters
ಆಲ್​ ಇಂಗ್ಲೆಂಡ್​ ಓಪನ್​ ಬ್ಯಾಡ್ಮಿಂಟನ್​ ಟೂರ್ನಿ ಕ್ವಾರ್ಟರ್ ಫೈನಲ್​ಗೆ ಸಿಂಧು

ಲಂಡನ್​: ಕೊರಿಯಾದ ಸಂಗ್​ ಜಿ ಹ್ಯುನ್​ರನ್ನು ಮಣಿಸುವ ಮೂಲಕ ಭಾರತದ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಆಲ್​ ಇಂಗ್ಲೆಂಡ್​ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯ ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವಚಾಂಪಿಯನ್​ ಸಿಂಧು, 21-09, 21-15ರಿಂದ ಹ್ಯುನ್​ರಿಗೆ ಸೋಲುಣಿಸಿದರು. ಮೊದಲ ಗೇಮ್​ನಲ್ಲಿ ತೀವ್ರ ಪೈಪೋಟಿ ನೀಡಿದ ಹ್ಯುನ್ 2ನೇ ಗೇಮ್​ನಲ್ಲಿ ಪುಟಿದೇಳುವಲ್ಲಿ ವಿಫಲರಾದರು. ಸಿಂಧು ಮುಂದಿನ ಪಂದ್ಯದಲ್ಲಿ ಜಪಾನ್​ನ 4ನೇ ಶ್ರೇಯಾಂಕದ ಆಟಗಾರ್ತಿ ನೊಜೊಮಿ ಒಕುಹಾರಾ ಇಲ್ಲವೆ ಡೆನ್ಮಾರ್ಕ್​​ನ ಲಿನ್​​ ಹೊಜ್ಮಾರ್ಕ್​​ ಜೆರ್ಸ್​ಫೆಲ್ಡ್ಟ್​ ವಿರುದ್ಧ ಸೆಣೆಸಾಡಲಿದ್ದಾರೆ.

ಇನ್ನು ಇನ್ನೊಂದು ಪಂದ್ಯದಲ್ಲಿ 18ರ ಹರೆಯದ ಲಕ್ಷ್ಯ ಸೇನ್ ಅವರು ಡೆನ್ಮಾರ್ಕ್​​ನ​ ವಿಶ್ವ ನಂಬರ್​ ಒನ್​ ಆಟಗಾರ ವಿಕ್ಟ್​ ಆಕ್ಷೆಲ್ಸೆನ್​​ ವಿರುದ್ಧ ಸೋಲುಂಡಿದ್ದಾರೆ. 17-21, 18-21ರ ಅಂತರದಲ್ಲಿನ ಲಕ್ಷ್ಯ ಸೋಲು ಅನುಭವಿಸಿದರು.

ಅಲ್ಲದೆ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಕೂಡ ಜಪಾನ್​ನ ಒಲಿಂಪಿಕ್​ ಚಾಂಪಿಯನ್ಸ್​​ ಮಿಸಾಕಿ ಮಾತ್ಸುಟೊಮೊ ಹಾಗೂ ಅಯಾಕಾ ತಕಹಾಶಿ ವಿರುದ್ಧ 13-21, 14-21ರ ಅಂತರದಿಂದ ನಿರಾಸೆ ಅನುಭವಿಸಿದ್ದಾರೆ. ಇದಕ್ಕೂ ಮುನ್ನ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಮತ್​ ಹಾಘೂ ಸಾಯಿ ಪ್ರಣೀತ್​​ ಕೂಡ ಪರಾಜಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.