ETV Bharat / sitara

ಪಾರುವಾಗಿ ವೀಕ್ಷಕರನ್ನು ಮೋಡಿ ಮಾಡುತ್ತಿರುವ ಮಂಗಳೂರು ಚೆಲುವೆ ಮೋಕ್ಷಿತಾ

author img

By

Published : Sep 13, 2019, 7:53 PM IST

Updated : Sep 13, 2019, 8:03 PM IST

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಪಾರು' ಧಾರಾವಾಹಿಯಲ್ಲಿ ಪಾರು ಆಗಿ ಮಿಂಚುತ್ತಿರುವ ಚೆಂದುಳ್ಳಿ ಚೆಲುವೆ ಕಡಲನಗರಿ ಮಂಗಳೂರಿನವರು. ಈ ದುಂಡುಮುಖದ ಸುಂದರಿ ಹೆಸರು ಮೋಕ್ಷಿತಾ.

ಮೋಕ್ಷಿತಾ

ಮಂಗಳೂರಿನಲ್ಲೇ ವಿದ್ಯಾಭ್ಯಾಸ ಮುಗಿಸಿದ ಮೋಕ್ಷಿತಾಗೆ ಫ್ಯಾಷನ್​​​​ನತ್ತ ಏನೋ ಒಂದು ರೀತಿಯ ಸೆಳೆತ. ಅಂತೆಯೇ ಫ್ಯಾಷನ್ ಡಿಸೈನ್ ಕೋರ್ಸ್ ಕಲಿಯುವ ನಿರ್ಧಾರವನ್ನು ಕೂಡ ಮಾಡಿದ್ದರು. ಇದರ ನಡುವೆ ಫೇಸ್​​​​​​​ಬುಕ್​​​​​​​​​​​​​​​​​​​ನಲ್ಲಿ ಮೋಕ್ಷಿತಾ ಅವರ ಫೋಟೋಗಳನ್ನು ನೋಡಿದ ಪಾರು ಧಾರಾವಾಹಿ ತಂಡ ಆಡಿಶನ್​​​​​​​​​​ನಲ್ಲಿ ಭಾಗವಹಿಸಲು ಆಫರ್ ನೀಡಿದೆ. ನಟನೆಯ ರೀತಿ ನೀತಿಗಳೇ ತಿಳಿಯದ ಕರಾವಳಿ ಕುವರಿ ಆಡಿಶನ್​​​​​​​​​​​​​​​​​​​​​​​​​​​​​​​​​​​​ನಲ್ಲೇನೋ ಭಾಗವಹಿಸಿದ್ದಾಯಿತು. ಆದರೆ ಅಲ್ಲೊಂದು ಅಚ್ಚರಿಯ ಸಂಗತಿ ನಡೆಯಿತು‌. ಮೋಕ್ಷಿತಾ ಸೆಲೆಕ್ಟ್ ಆಗಿದ್ದರು, ಅದು ಕೂಡಾ ಮುಖ್ಯ ಪಾತ್ರಧಾರಿಯಾಗಿ.

Mokshita
ಮಂಗಳೂರು ಚೆಲುವೆ ಮೋಕ್ಷಿತಾ

ಆಡಿಷನ್‌ ಮುಗಿದ ಮೇಲೆ ಮೊದಲ ಬಾರಿಗೆ ಮೇಕಪ್‌ ಹಾಕಿ, ಕ್ಯಾಮರಾ ಎದುರಿಸಿದಾಗ ಮಂಗಳೂರು ಚೆಲುವೆ ಬಹಳ ಸುಸ್ತಾಗಿದ್ದರಂತೆ. ಆಗ ಕಣ್ಣೀರಿಡುತ್ತಾ ಈ ಆ್ಯಕ್ಟಿಂಗ್‌ ಎಲ್ಲಾ ನನಗೆ ಬೇಡ ಎಂದು ತೀರ್ಮಾನಿಸಿದ್ದರು. ಆದರೆ ಧಾರಾವಾಹಿ ತಂಡ ಮೋಕ್ಷಿತ ಅವರನ್ನು ಹುರಿದುಂಬಿಸಿ ಅವರನ್ನು ಧಾರಾವಾಹಿಯಲ್ಲಿ ಉಳಿಸಿಕೊಂಡರು. ನಟನೆ ಜೊತೆಗೆ ಮೋಕ್ಷಿತಾ ಅವರಿಗೆ ಮಾಡೆಲಿಂಗ್​​​​​​​​​​​​​​​​​​​​​​​​​​​​​ನತ್ತ ವಿಶೇಷ ಒಲವು. ಫ್ಯಾಷನ್ ಪ್ರಿಯೆಯಾಗಿರುವ ಮೋಕ್ಷಿತಾ ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದರು. ಮಾತ್ರವಲ್ಲ ಕೆಲವು ಜಾಹೀರಾತುಗಳಲ್ಲೂ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ.

mokshita
ಮೋಕ್ಷಿತಾ ಫೋಟೋಶೂಟ್​​​

ಇದೀಗ ಸದ್ಯಕ್ಕೆ ಪಾರು ಪಾತ್ರಕ್ಕೆ ಜೀವ ತುಂಬುವುದರಲ್ಲಿ ಬ್ಯುಸಿಯಾಗಿರುವ ಮೋಕ್ಷಿತಾ ಇಂದು ಪಾರು ಎಂದೇ ಚಿರಪರಿಚಿತ. ತಾವು ಬಣ್ಣ ಹಚ್ಚಿರುವ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಜನರು ತಮ್ಮನ್ನು ಇಷ್ಟೊಂದು ಇಷ್ಟಪಡುತ್ತಾರೆಂದು ಮೋಕ್ಷಿತಾ ಎಂದಿಗೂ ಭಾವಿಸಿರಲಿಲ್ಲ. ಇಂದು ಅವರು ಎಲ್ಲೇ ಹೋದರೂ ಜನ ಅವರನ್ನು ಪಾರು ಎಂದೇ ಕರೆದು ಮಾತನಾಡಿಸುತ್ತಾರಂತೆ. ಸಿನಿಮಾಗಳಿಂದ ಕೂಡಾ ಮೋಕ್ಷಿತಾಗೆ ಸಾಕಷ್ಟು ಅವಕಾಶಗಳು ಬರುತ್ತಿದೆಯಂತೆ. ಒಳ್ಳೆ ಅವಕಾಶಗಳು ಲಭಿಸಿದರೆ ಖಂಡಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಮೋಕ್ಷಿತಾ.

mokshita
ಮೋಕ್ಷಿತಾ
Intro:Body:ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪಾರು ವಿನ ಪಾರುವಾಗಿ ಮಿಂಚುತ್ತಿರುವ ಚೆಂದುಳ್ಳಿ ಚೆಲುವೆ ಕಡಲನಗರಿ ಮಂಗಳೂರಿನವರು. ಮಂಗಳೂರಿನಲ್ಲೇ ವಿದ್ಯಾಭ್ಯಾಸ ಮುಗಿಸಿದ ಮುದ್ದು ಮುಖದ ಸುಂದರಿ ಮೋಕ್ಷಿತಾಗೆ ಫ್ಯಾಷನ್ ನತ್ತ ಏನೋ ಒಂದು ರೀತಿಯ ಸೆಳೆತ. ಅಂತೆಯೇ ಫ್ಯಾಷನ್ ಡಿಸೈನ್ ಕೋರ್ಸ್ ಕಲಿಯುವ ನಿರ್ಧಾರವನ್ನು ಕೂಡ ಮಾಡಿದ್ದಾಯಿತು‌‌.

ಇದರ ನಡುವೆ ಫೇಸ್ ಬುಕ್ ನಲ್ಲಿ ಮೋಕ್ಷಿತಾ ಅವರ ಫೋಟೋಗಳನ್ನು ನೋಡಿದ ಪಾರು ಧಾರಾವಾಹಿಯ ತಂಡ ದಿಂದ ಆಡಿಶನ್ ನಲ್ಲಿ ಭಾಗಬಹಿಸುವಂತೆ ಕರೆ ಬಂತು. ನಟನೆಯ ರೀತಿ ನೀತಿಗಳೇ ತಿಳಿಯದ ಕರಾವಳಿ ಕುವರಿ ಆಡಿಶನ್ ನಲ್ಲೇನೋ ಭಾಗವಹಿಸಿದ್ದಾಯಿತು. ಆದರೆ ಅಲ್ಲೊಂದು ಅಚ್ಚರಿಯ ಸಂಗತಿ ನಡೆಯಿತು‌. ಮೋಕ್ಷಿತಾ ಸೆಲೆಕ್ಟ್ ಆಗಿದ್ದರು! ಅದು ಕೂಡಾ ಮುಖ್ಯ ಪಾತ್ರಧಾರಿಯಾಗಿ.

ಆಡಿಷನ್‌ ಮುಗಿದ ಮೇಲೆ ಮೊದಲ ಬಾರಿಗೆ ಮೇಕಪ್‌ ಹಾಕಿ, ಕ್ಯಾಮೆರಾ ಎದುರಿಸಿದಾಗ ಮಂಗಳೂರು ಚೆಲುವೆ ತುಂಬಾ ಸುಸ್ತಾಗಿದ್ದರು. ಆಗ ಕಣ್ಣೀರಿಡುತ್ತಾ ಈ ಆ್ಯಕ್ಟಿಂಗ್‌ ಎಲ್ಲ ನನಗೆ ಬೇಡ ಎಂದೂ ಕೂಡಾ ಅವರು ತೀರ್ಮಾನಿಸಿಯಾಗಿತ್ತು. ಆಸರೆ ಆಗ ಸೀರಿಯಲ್‌ ತಂಡ ಅವರ ಕೈ ಬಿಡಲಿಲ್ಲ. ಬದಲಿಗೆ ನೀನು ಚೆನ್ನಾಗಿ ನಟಿಸುತ್ತೀಯಾ ನಟಿಸುವ ಎಂದು ಹುರಿದುಂಬಿಸಿದರು. ಹೀಗೆ ಮೋಕ್ಷಿತಾ ನಟನಾ ಪಯಣ ಮುಂದುವರಿಯಿತು.

ನಟನೆಯ ಹೊರತಾಗಿ ಮೋಕ್ಷಿತಾ ಅವರಿಗೆ ಮಾಡೆಲಿಂಗ್ ನತ್ತ ವಿಶೇಷ ಒಲವು. ಫ್ಯಾಷನ್ ಪ್ರಿಯೆಯಾಗಿರುವ ಮೋಕ್ಷಿತಾ ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದರು. ಮಾತ್ರವಲ್ಲ ಕೆಲವು ಜಾಹೀರಾತುಗಳಲ್ಲೂ ರೂಪದರ್ಶಿಯಾಗಿ ಕಾಣಿಸಿಕೊಂಡರು.

ಇದೀಗ ಸದ್ಯಕ್ಕೆ ಪಾರು ಪಾತ್ರಕ್ಕೆ ಜೀವ ತುಂಬುವುದರಲ್ಲಿ ಬ್ಯುಸಿಯಾಗಿರುವ ಮೋಕ್ಷಿತಾ ಅವರು ಇಂದು ಪಾರು ಎಂದೇ ಚಿರಪರಿಚಿತ. ತಾವು ಬಣ್ಣ ಹಚ್ಚಿರುವ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಮೋಕ್ಷಿತಾ ಯಶಸ್ವಿಯಾಗಿದ್ದಾರೆ. ಜನರು ತಮ್ಮನ್ನು ಇಷ್ಟೊಂದು ಇಷ್ಟಪಡುತ್ತಾರೆಂದು ಮೋಕ್ಷಿತಾ ಎಂದಿಗೂ ಭಾವಿಸಿರಲಿಲ್ಲ. ಇಂದು ಅವರು ಎಲ್ಲೇ ಹೋದರೂ ಜನ ಅವರನ್ನಯ ಪಾರು ಎಂದೇ ಕರೆದು, ಗುರುತಿಸಿ ಮಾತನಾಡುತ್ತಾರೆ.

ಈಗಾಗಲೇ ಸಿನಿಮಾಗಳಿಂದ ಸಾಕಷ್ಟು ಅವಕಾಶಗಳು ಇವರನ್ನು ಅರಸಿ ಬರುತ್ತಿದೆ. ಒಳ್ಳೆಯ ಕಥೆಯೊಂದಿಗೆ ಬೆಳ್ಳಿತೆರೆಗೆ ಕಾಲಿಡಲು ಮೋಕ್ಷಿತಾ ಕಾಯುತ್ತಿದ್ದಾರೆ.Conclusion:
Last Updated : Sep 13, 2019, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.