ETV Bharat / sitara

'ನಾರಪ್ಪ' ನಂತ್ರ ಟಾಲಿವುಡ್​ನಲ್ಲಿ ಫುಲ್​ ಬ್ಯುಸಿಯಾದ ವಸಿಷ್ಠ ಸಿಂಹ

author img

By

Published : Oct 20, 2021, 8:47 AM IST

ವಸಿಷ್ಠ ಸಿಂಹ ಅವರು 'ಸಿಂಬ' ಎಂಬ ಚಿತ್ರದಲ್ಲಿ ಎಸಿಪಿಯಾಗಿ ನಟಿಸುತ್ತಿದ್ದಾರಂತೆ. ಜಗಪತಿ ಬಾಬು, ಗೌತಮಿ ಮುಂತಾದವರು ತೆರೆಹಂಚಿಕೊಂಡಿರುವ ಈ ಚಿತ್ರದ ಚಿತ್ರೀಕರಣ ಈಗ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಇದಲ್ಲದೆ 'ಸೋಲ್' ಮತ್ತು 'ನಯೀಮ್ ಡೈರೀಸ್' ಎಂಬ ಚಿತ್ರಗಳಲ್ಲೂ ಅವರು ಅಭಿನಯಿಸುತ್ತಿದ್ದಾರೆ.

vasishta-simha-busy-in-tollywood
'ನಾರಪ್ಪ' ನಂತ್ರ ಟಾಲಿವುಡ್​ನಲ್ಲಿ ಫುಲ್​ ಬ್ಯುಸಿಯಾದ ವಸಿಷ್ಠ ಸಿಂಹ

ಕನ್ನಡದ ವಸಿಷ್ಠ ಸಿಂಹ ಈಗ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಅಲ್ಲಿ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಅದಕ್ಕೆ ಕಾರಣವಾಗಿದ್ದೇನು ಗೊತ್ತಾ? ವೆಂಕಟೇಶ್ ಅಭಿನಯದ 'ನಾರಪ್ಪ'. ಈ ಚಿತ್ರದಲ್ಲಿ ವಸಿಷ್ಠ ನೆಗೆಟಿವ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ಮಿಂಚಿದ್ದೇ ಮಿಂಚಿದ್ದು, ಅವರನ್ನು ಹಲವರು ಚಿತ್ರಗಳು ಹುಡುಕಿಕೊಂಡು ಬರುತ್ತಿವೆ.

ಹಾಗೆ ನೋಡಿದರೆ, ಅದಕ್ಕಿಂತ ಮುಂಚೆಯೇ ಅವರು 'ಓದೆಲ್ಲ ರೈಲ್ವೇ ಸ್ಟೇಶನ್' ಎಂಬ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಮಧ್ಯೆ, 'ನಾರಪ್ಪ' ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಅದನ್ನು ಅದ್ಭುತವಾಗಿ ಬಳಸಿಕೊಂಡ ವಸಿಷ್ಠ, ಚಿತ್ರದಲ್ಲಿ ತಮ್ಮ ಅಭಿನಯದಿಂದ ಗಮನಸೆಳೆದರು. ಇದರಿಂದಾಗಿ ಅವರಿಗೆ ಹಲವು ಅವಕಾಶಗಳು ಸಿಗುತ್ತಿವೆ.

ಪ್ರಮುಖವಾಗಿ, ಅವರು 'ಸಿಂಬ' ಎಂಬ ಚಿತ್ರದಲ್ಲಿ ಎಸಿಪಿಯಾಗಿ ನಟಿಸುತ್ತಿದ್ದಾರಂತೆ. ಜಗಪತಿ ಬಾಬು, ಗೌತಮಿ ಮುಂತಾದವರು ತೆರೆಹಂಚಿಕೊಂಡಿರುವ ಈ ಚಿತ್ರದ ಚಿತ್ರೀಕರಣ ಈಗ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಇದಲ್ಲದೆ 'ಸೋಲ್' ಮತ್ತು 'ನಯೀಮ್ ಡೈರೀಸ್' ಎಂಬ ಚಿತ್ರಗಳಲ್ಲೂ ಅವರು ನಟಿಸುತ್ತಿದ್ದಾರೆ. ಈ ಪೈಕಿ 'ಸೋಲ್' ಅರಣ್ಯ ರಕ್ಷಣೆಯ ಕುರಿತಾದ ಚಿತ್ರವಾದರೆ, 'ನಯೀಮ್ ಡೈರೀಸ್' ಚಿತ್ರವು ಗ್ಯಾಂಗ್​ಸ್ಟರ್​​ ಒಬ್ಬನ ಬಯೋಪಿಕ್ ಅಂತೆ. ಈ ಎಲ್ಲ ಚಿತ್ರಗಳಲ್ಲೂ ವಸಿಷ್ಠಗೆ ವಿಭಿನ್ನವಾದ ಪಾತ್ರಗಳಿದ್ದು, ಸಿನಿಮಾಗಳ ಬಗ್ಗೆ ಅವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಅಲ್ಲದೆ ಕನ್ನಡದಲ್ಲೂ ವಸಿಷ್ಠ ಕೈಯಲ್ಲಿ ಒಂದಿಷ್ಟು ಚಿತ್ರಗಳಿದ್ದು, ಈ ಪೈಕಿ ಕಾಲಚಕ್ರ ಬಿಡುಗಡೆಗೆ ಸಿದ್ಧವಾಗಿದೆ. ಮಿಕ್ಕಂತೆ 'ಹೆಡ್​ಬುಷ್', 'ತಲ್ವಾರ್​ಪೇಟೆ', 'ಎವರು' ಚಿತ್ರದ ರೀಮೇಕ್ ಮುಂತಾದ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದು, ಅವು ಚಿತ್ರೀಕರಣದ ಬೇರೆಬೇರೆ ಹಂತಗಳಲ್ಲಿವೆ.

ಅಂದಹಾಗೆ, ಮಂಗಳವಾರ ವಸಿಷ್ಠ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮತ್ತು ಅವರು ನಟಿಸುತ್ತಿರುವ ಚಿತ್ರತಂಡಗಳು, ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ನಟ ವಿಕ್ಕಿ ಕೌಶಲ್​ಗೆ ಆ ಹುಡುಗಿಯ ಅಭಿಪ್ರಾಯ ಅಂದ್ರೆ ಪ್ರಪಂಚವಂತೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.