ETV Bharat / sitara

ಅಭಿನಯ ಚಕ್ರವರ್ತಿ ಸುದೀಪ್​ ಬರ್ತಡೇಗೆ ರಿವೀಲ್ ಆಯ್ತು ಡೆಡ್ ಮ್ಯಾನ್ ಲುಕ್

author img

By

Published : Sep 2, 2021, 12:15 PM IST

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಕಿಚ್ಚು ಸುದೀಪ್​ಗೆ ವಿಕ್ರಾಂತ್ ರೋಣ ಚಿತ್ರತಂಡ ಭರ್ಜರಿ ಗಿಫ್ಟ್​ವೊಂದನ್ನು ನೀಡಿದೆ.

ಕಿಚ್ಚನ ಡೆಡ್ ಮ್ಯಾನ್ ಲುಕ್
ಕಿಚ್ಚನ ಡೆಡ್ ಮ್ಯಾನ್ ಲುಕ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿನಯ ಚಕ್ರವರ್ತಿಯಾಗಿರುವ ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ 50 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಬರ್ತಡೇ ಮೂಡ್​ನಲ್ಲಿರುವ ಕಿಚ್ಚನಿಗೆ ವಿಕ್ರಾಂತ್​ ರೋಣ ಚಿತ್ರತಂಡ ಸ್ಪೆಷಲ್​ ಗಿಫ್ಟ್​​ ನೀಡಿದೆ. ಡೆಡ್​ಮ್ಯಾನ್​ ಆಂಥೆಮ್​ ಟೀಸರ್​​ ಬಿಡುಗಡೆ ಮಾಡುವ ಮೂಲಕ ಸುದೀಪ್​ಗೆ ಶುಭಾಶಯ ಕೋರಿದೆ. ಡೈರೆಕ್ಟರ್​ ಅನೂಪ್ ಭಂಡಾರಿ ಆ್ಯಕ್ಷನ್​ ಕಟ್ ಹೇಳಿರುವ ಈ ಚಿತ್ರದಲ್ಲಿ ಸುದೀಪ್​ ಸಖತ್​ ಸ್ಟೈಲಿಷ್​ ಆಗಿ ಕಾಣಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಒಂದಾನೊಂದು ಕಾಲದಲ್ಲಿ ಅಂತಾ ಶುರುವಾಗುವ, ಡೆಡ್ ಮ್ಯಾನ್ ಅಂಥೆಮ್ ಟೀಸರ್​​ನಲ್ಲಿ, ಸುದೀಪ್ ಎಂಟ್ರಿ, ಪಂಚಿಂಗ್ ಡೈಲಾಗ್​​ಗಳು ನೋಡುಗರನ್ನು ನಿಬ್ಬೆರಗಾಗಿಸುತ್ತವೆ. ಈಗಾಗಲೇ ಪೋಸ್ಟರ್ ಹಾಗೂ ಮೇಕಿಂಗ್​​ನಿಂದಲೇೇ ವಿಶ್ವದ ಗಮನ ಸೆಳೆದಿರುವ, ವಿಕ್ರಾಂತ್ ರೋಣ ಚಿತ್ರವನ್ನು, ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನ‌ ಮಾಡಿದ್ದಾರೆ.

  • " class="align-text-top noRightClick twitterSection" data="">

ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯಿಸಿರುವ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ವಿಕ್ರಾಂತ್​ ರೋಣ ಚಿತ್ರವು ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಸೇರಿದಂತೆ ದೊಡ್ಡ ತಾರಾ ಬಳಗವನ್ನೇ ಹೊಂದಿದೆ. ಈ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. 14 ಭಾಷೆಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗುತ್ತಿದ್ದು, ತ್ರಿಡಿಯಲ್ಲಿ ಮೂಡಿ ಬರಲಿದೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ'ಅಭಿನಯ ಚಕ್ರವರ್ತಿ'... 50ನೇ ವಸಂತಕ್ಕೆ ಕಾಲಿಟ್ಟ ನಟ 'ಕಿಚ್ಚ' ಸುದೀಪ್​​

ಸದ್ಯ ವಿಕ್ರಾಂತ್ ರೋಣ ಡೆಡ್ ಮ್ಯಾನ್ ಅಂಥೆಮ್ ಟೀಸರ್ ನೋಡ್ತಿದ್ರೆ, ಹಾಲಿವುಡ್ ಸಿನಿಮಾದ ಕ್ವಾಲಿಟಿಯನ್ನ ಹೊಂದಿದೆ. ಈ ಟೀಸರ್​ ಕಿಚ್ಚನ ಅಭಿಮಾನಿಗಳಲ್ಲಿ ವಿಕ್ರಾಂತ್ ರೋಣ ಸಿನಿಮಾದ ಮೇಲಿನ‌ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗುವಂತೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.