ETV Bharat / sitara

ಬಿಡುಗಡೆಗೆ ರೆಡಿಯಾದ 'ಕಲಾವಿದ'...ಹೊಸ ತಂಡಕ್ಕೆ ರೋರಿಂಗ್ ಸ್ಟಾರ್ ಸಾಥ್​

author img

By

Published : Jun 30, 2020, 5:57 PM IST

ಹಳೆಯ ಸಿನಿಮಾಗಳ ಟೈಟಲ್​​ಗಳನ್ನು ಇಟ್ಟುಕೊಂಡು ಅನೇಕ ಹೊಸ ಚಿತ್ರಗಳು ತಯಾರಾಗಿವೆ. 1997 ರಲ್ಲಿ ಬಿಡುಗಡೆಯಾಗಿದ್ದ ರವಿಚಂದ್ರನ್ ಅಭಿನಯದ ಕಲಾವಿದ ಹೆಸರಿನಲ್ಲೇ ಹೊಸ ಸಿನಿಮಾ ತಯಾರಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Srimurali wished to Kalavida movie team
'ಕಲಾವಿದ'

ಕ್ರೇಜಿಸ್ಟಾರ್ ರವಿಚಂದ್ರನ್, ರೋಜಾ, ಹೀರಾ ಅಭಿನಯದ ಸೂಪರ್ ಹಿಟ್ ಚಿತ್ರ 'ಕಲಾವಿದ'. 1997 ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಮ್ಯೂಸಿಕಲ್ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಆಗಿತ್ತು. ನಾದಬ್ರಹ್ಮ ಹಂಸಲೇಖ ರವಿಮಾಮನ ಜುಗಲ್​​​ಬಂಧಿ 'ಕಲಾವಿದ' ಚಿತ್ರದಲ್ಲೂ ಸಖತ್ ಹಿಟ್ ಆಗಿತ್ತು.

ಹೊಸತಂಡದ 'ಕಲಾವಿದ ' ಚಿತ್ರ

ಅಲ್ಲದೆ ಇಂದಿಗೂ ಈ ಚಿತ್ರದ ಹಾಡುಗಳು ಎವರ್ ಗ್ರೀನ್ ಸಾಂಗ್ ಲಿಸ್ಟ್​​​​ನಲ್ಲಿವೆ. ಈಗೇಕೆ ಈ ಚಿತ್ರದ ವಿಚಾರ ಅಂತೀರಾ. ಬರೋಬ್ಬರಿ 23 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಇದೇ ಹೆಸರಿನ ಹೊಸ ಚಿತ್ರವೊಂದು ಸ್ಯಾಂಡಲ್​​ವುಡ್​​​ನಲ್ಲಿ ಬಿಡುಗಡೆಗೆ ರೆಡಿಯಾಗಿದೆ. 'ಕಲಾವಿದ' ಹೆಸರಿನಲ್ಲೇ ಹೊಸ ಚಿತ್ರವೊಂದು ತಯಾರಾಗಿದೆ. ಆದರೆ ರವಿಮಾಮನ ಕಲಾವಿದನಿಗೂ ಈ ಕಲಾವಿದನಿಗೂ ಯಾವುದೇ ಸಂಬಂಧವಿಲ್ಲ.

ಪದ್ಮರಾಜ್ ಫಿಲಮ್ಸ್​ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ 'ಕಲಾವಿದ' ಚಿತ್ರವನ್ನು ನವ ನಿರ್ದೇಶಕ ಶಿವಾನಂದ ಹೆಚ್.ಡಿ. ನಿರ್ದೇಶನ ಮಾಡಿದ್ದಾರೆ. ಹಾಸನ ಮೂಲದ ಪ್ರದೀಪ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರ ಬಹುತೇಕ ಎಲ್ಲಾ ಕೆಲಸಗಳನ್ನು ಮುಗಿಸಿ ರಿಲೀಸ್​​​ಗೆ ರೆಡಿಯಾಗಿದೆ. ಚಿತ್ರದ ಪೊಸ್ಟರನ್ನು ರೋರಿಂಗ್ ಸ್ಟಾರ್ ಶ್ರೀ ಮುರಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು ದಸರಾ ವೇಳೆಗೆ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್​​ ಮಾಡಿದೆ.

ಚಿತ್ರದಲ್ಲಿ ನಾಯಕಿಯಾಗಿ ಕಿರುತೆರೆ ನಟಿ ಸಂಭ್ರಮ ಪ್ರದೀಪ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇನ್ನುಳಿದ ತಾರಾಗಣದಲ್ಲಿ ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಸುರೇಶ್, ವರ್ಷ, ಮಲ್ಲೇಶ್, ಗೀತ, ಶ್ರೀಧರ್, ಜಗದೀಶ್, ಲೋಕೇಶ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರದ ಹಾಡುಗಳಿಗೆ ವಿವೇಕ್ ಚಕ್ರವರ್ತಿ ಹಾಗೂ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.