ETV Bharat / sitara

'ಕಬ್ಜ' ಚಿತ್ರದ ವಿಶೇಷ ಪೋಸ್ಟರ್​ ರಿಲೀಸ್​.. ಹಾಲಿವುಡ್ ಸ್ಟೈಲ್​ನಲ್ಲಿ ಉಪ್ಪಿ-ಕಿಚ್ಚ ಮಿಂಚಿಂಗ್​

author img

By

Published : Jun 27, 2021, 9:16 AM IST

ರಿಯಲ್​ ಸ್ಟಾರ್​ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಜೊತೆ ಇರುವ 'ಕಬ್ಜ' ಸಿನಿಮಾದ ಹಾಲಿವುಡ್ ಶೈಲಿಯ ಪೋಸ್ಟರ್ ಬಿಡುಗಡೆಯಾಗಿದೆ.

Kabza
ಕಬ್ಜ

ಬೆಂಗಳೂರು: ಎರಡು ತಿಂಗಳುಗಳಿಂದ ಸದ್ದಿಲ್ಲದೆ ಇದ್ದ ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಈಗ ಮತ್ತೆ ಸುದ್ದಿಯಲ್ಲಿದೆ. ಲಾಕ್​ಡೌನ್​ ಹಂತಹಂತವಾಗಿ ತೆರವಾಗಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಚಿತ್ರೀಕರಣ​ ಶುರುವಾಗಿದ್ದು, ಇದೀಗ ಚಿತ್ರದ ವಿಶೇಷ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಲಾಗಿದೆ.

ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಬ್ಜ ಚಿತ್ರದಲ್ಲಿ ರಿಯಲ್​ ಸ್ಟಾರ್​ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಜತೆಯಾಗಿ ನಟಿಸುತ್ತಿದ್ದು, ಇದಕ್ಕೂ ಮೊದಲು ಇಬ್ಬರು ಇರುವ ಪೋಸ್ಟರ್​ಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿತ್ತು. ಇಂದು ಬೆಳಗ್ಗೆ 6 ಗಂಟೆಗೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆ ಇರುವ ಹಾಲಿವುಡ್ ಶೈಲಿಯ ಪೋಸ್ಟರ್ ರಿಲೀಸ್​ ಆಗಿದೆ. ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲಿಷ್​ ಭಾಷೆಯಲ್ಲಿ 'ಕಬ್ಜ' ಎಂದು ಬರೆದಿರುವ ಪೋಸ್ಟರ್​​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈಗಾಗಲೇ ಕಬ್ಜ ಚಿತ್ರದ ಶೇ. 70ರಷ್ಟು ಚಿತ್ರೀಕರಣ ಸಂಪೂರ್ಣವಾಗಿದ್ದು, ಬಾಕಿ ಇರುವ ಚಿತ್ರೀಕರಣವನ್ನು ಮುಂದಿನ ಕೆಲವು ದಿನಗಳಲ್ಲಿ ಮುಗಿಸುವುದಕ್ಕೆ ಪ್ಲಾನ್ ಹಾಕಿಕೊಂಡಿದ್ದಾರೆ ನಿರ್ದೇಶಕ ಚಂದ್ರು. ಈ ಹಂತದಲ್ಲಿ ಉಪೇಂದ್ರ ಅವರ ಜೊತೆಗೆ ಸುದೀಪ್ ಸಹ ಸೇರಿಕೊಳ್ಳಲಿದ್ದು, ಇಬ್ಬರ ಅಭಿನಯದ ಕೆಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆಯಂತೆ.

ಕಬ್ಜ ಚಿತ್ರದಲ್ಲಿ ಉಪೇಂದ್ರ ಹಾಗೂ ಸುದೀಪ್ ಜೊತೆಗೆ ಕಾಮರಾಜನ್ (ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ ರಾವ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದು, ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.