ETV Bharat / sitara

ವಿವಿಧ ಭಾಷೆಗಳ 'ಕಬ್ಜ' ವೆಬ್​​​ಸೈಟ್ ಬಿಡುಗಡೆ ಮಾಡಲಿರುವ ಸೆಂಚುರಿಸ್ಟಾರ್​​​​​

author img

By

Published : Aug 29, 2020, 9:58 AM IST

ರಿಯಲ್ ಸ್ಟಾರ್​ ಉಪೇಂದ್ರ ಅಭಿನಯದ 'ಕಬ್ಜ' ಚಿತ್ರದ ಮುಹೂರ್ತದ ವೇಳೆ ಚಿತ್ರಕ್ಕೆ ಕ್ಲಾಪ್ ಮಾಡಿದ್ದ ಶಿವರಾಜ್​ಕುಮಾರ್ ಇಂದು ವಿವಿಧ ಭಾಷೆಗಳಲ್ಲಿ ತಯಾರಾಗಿರುವ ಚಿತ್ರದ ವೆಬ್​​​​ಸೈಟ್ ಬಿಡುಗಡೆ ಮಾಡುತ್ತಿದ್ದಾರೆ.

Kabza website
'ಕಬ್ಜ'

ಆರ್. ಚಂದ್ರು ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'. ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಚಂದ್ರು ಈ ಚಿತ್ರಕ್ಕಾಗಿ ದೊಡ್ಡ ಮಟ್ಟದಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕೊರೊನಾ ಕಾರಣದಿಂದ ಕಳೆದ 5 ತಿಂಗಳಿಂದ ಸಿನಿಮಾ ಚಿತ್ರೀಕರಣ ಸಾಧ್ಯವಾಗಿರಲಿಲ್ಲ. ಈಗ ಸರ್ಕಾರದಿಂದ ಚಿತ್ರೀಕರಣಕ್ಕೆ ಅನುಮತಿ ದೊರೆತಿರುವುದರಿಂದ ಚಂದ್ರು ಮತ್ತಷ್ಟು ಉತ್ತಮ ಗುಣಮಟ್ಟದಲ್ಲಿ ಸಿನಿಮಾವನ್ನು ಚಿತ್ರೀಕರಿಸಲು ಚಿಂತಿಸಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಶೇಕಡಾ 50 ರಷ್ಟು ಚಿತ್ರೀಕರಣ ಕೂಡಾ ಪೂರ್ಣಗೊಂಡಿದೆ.

Kabza website
ಜಗಪತಿ ಬಾಬು, ಆರ್​​. ಚಂದ್ರು

ಇದೇ ಸಮಯದಲ್ಲಿ 'ಕಬ್ಜ' ಚಿತ್ರದ ವಿವಿಧ ಭಾಷೆಗಳ ವೆಬ್​​​ಸೈಟ್ ಬಿಡುಗಡೆ ಆಗುತ್ತಿದೆ. ಉಪೇಂದ್ರ ಅವರ ಮೆಚ್ಚಿನ ನಟ ಶಿವರಾಜ್​ಕುಮಾರ್​​​ ಇಂದು ಬೆಂಗಳೂರಿನ ಖಾಸಗಿ ಹೋಟೆಲ್​​​ನಲ್ಲಿ 'ಕಬ್ಜ' ವೆಬ್​ಸೈಟ್ ಬಿಡುಗಡೆ ಮಾಡುತ್ತಿದ್ದಾರೆ. ಕಬ್ಜ ಚಿತ್ರದ ಮುಹೂರ್ತದ ವೇಳೆ ಶಿವಣ್ಣ ಈ ಚಿತ್ರಕ್ಕೆ ಕ್ಲಾಪ್ ಕೂಡಾ ಮಾಡಿದ್ದರು. ಈ ವೆಬ್​ಸೈಟ್ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರಾದ ಎಂಟಿಬಿ ನಾಗರಾಜ್ ಕೂಡಾ ಹಾಜರಿರಲಿದ್ದಾರೆ. ಮೂಲಗಳ ಪ್ರಕಾರ ಈ ಚಿತ್ರಕ್ಕೆ ನಾಗರಾಜ್ ಕೂಡಾ ಹಣದ ಸಹಾಯ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ 7 ಭಾಷೆಗಳಲ್ಲಿ 'ಕಬ್ಜ' ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಬೆಂಗಳೂರಿನ ಮಿನರ್ವ ಮಿಲ್ ಹಾಗೂ ಹೈದರಾಬಾದ್​​ನ ಕೆಲವೆಡೆ ಚಿತ್ರೀಕರಣಕ್ಕಾಗಿ ಸೆಟ್ ಕೂಡಾ ಹಾಕಿ ಹಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಉಳಿದ ಭಾಗದ ಚಿತ್ರೀಕರಣವನ್ನು ಸೆಪ್ಟೆಂಬರ್ ಮೊದಲ ವಾರದಿಂದ ಆರಂಭಿಸಲಾಗುವುದು ಎನ್ನಲಾಗಿದೆ.

Kabza website
'ಕಬ್ಜ' ಚಿತ್ರತಂಡ

ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಈ ಚಿತ್ರ ಶ್ರೀ ಸಿದ್ದೆಶ್ವರ ಎಂಟರ್​​​​ಪ್ರೈಸಸ್ ಅಡಿಯಲ್ಲಿ ತಯಾರಾಗುತ್ತಿದೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ, ಮುನೀಂದ್ರ ಕೆ.ಪುರ. ಹಾಗೂ ಆರ್​​​​. ರಾಜಶೇಖರ ಮೂರ್ತಿ ಕಾರ್ಯಕಾರಿ ನಿರ್ಮಾಪಕರು. ಎ.ಜೆ. ಶೆಟ್ಟಿ ಛಾಯಾಗ್ರಹಣ, ಮಹೇಶ್ ಎಸ್​​​. ಸಂಕಲನ, ರಾಜು ಸುಂದರಂ, ಗಣೇಶ್ ಆಚಾರ್ಯ, ಶೇಖರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಅವರೊಂದಿಗೆ ಜಗಪತಿ ಬಾಬು, ರಾಹುಲ್ ಜಗಪತ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್ ಹಾಗೂ ಇತರರು ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.