ETV Bharat / sitara

ನಮಗೆ ಹಾಲು-ತುಪ್ಪ ಕಾರ್ಯ ಮಾಡಬೇಕಿತ್ತು.. ಆದ್ರೆ, ನಾವು ಅವನಿಗೆ ಮಾಡುವ ಪರಿಸ್ಥಿತಿ ಬಂದಿದೆ : ಶಿವಣ್ಣ

author img

By

Published : Nov 1, 2021, 6:12 PM IST

Updated : Nov 1, 2021, 7:08 PM IST

ಕನ್ನಡ ಚಿತ್ರರಂಗದಲ್ಲಿ ಶಿವ ರಾಜ್​ ಕುಮಾರ್​​ ಹಾಗೂ ಪುನೀತ್ ರಾಮ-ಲಕ್ಷ್ಮಣರಂತಿದ್ದರು. ಆದರೆ, ಅಪ್ಪು ಅಕಾಲಿಕ ನಿಧನದಿಂದ ಶಿವಣ್ಣ ಅತೀವ ನೋವಿನಲ್ಲಿದ್ದಾರೆ. ಪುನೀತ್‌ ಅವರ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ..

Shivarajkumar
ಶಿವರಾಜ್ ಕುಮಾರ್

ಕನ್ನಡ ಚಿತ್ರರಂಗ, ರಾಜ್​​​ ಕುಟುಂಬ ಸೇರಿದಂತೆ ಇಡೀ ರಾಜ್ಯದ ಜನತೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನದಿಂದ ನಲುಗಿ ಹೋಗಿದೆ. ಲಕ್ಷ್ಮಣನಂತೆ ಇದ್ದ ತಮ್ಮನನ್ನು ಕಳೆದುಕೊಂಡು ಶಿವಣ್ಣ ಅತೀವ​ ನೋವಿನಲ್ಲಿದ್ದಾರೆ.

ಪುನೀತ್​ ಬಗ್ಗೆ ಭಾವುಕರಾದ ಶಿವಣ್ಣ

ಇಂದು ಸಹೋದರನ ಅಗಲಿಕೆಯ ನೋವಿನಿಂದ ಹೊರ ಬರಲು ಶಿವಣ್ಣ ಪ್ರಯತ್ನಿಸುತ್ತಿದ್ದು, ಮನೆ ಪಕ್ಕದಲ್ಲಿರುವ ಉದ್ಯಾನದಲ್ಲಿ ವಾಕಿಂಗ್ ಮಾಡಿ ಸ್ನೇಹಿತರೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಈ ವೇಳೆ ಅಪ್ಪು ನಿಧನದಿಂದ ಕೆಲ ಭಾವುಕ ಮಾತುಗಳನ್ನಾಡಿದ್ದಾರೆ.

ಪುನೀತ್​​​ ನನಗಿಂತ 13 ವರ್ಷ ಚಿಕ್ಕವನು. ನಾನು ಎತ್ತಿ ಆಡಿಸಿದ ಮಗು,ಇವತ್ತು ನಮ್ಮಿಂದ ದೂರವಾಗಿದ್ದಾನೆ ಅಂದರೆ ನಂಬಲು ಆಗುತ್ತಿಲ್ಲ. ನಮಗೆ ಅಪ್ಪು ಹಾಲು-ತುಪ್ಪ ಬಿಡುವ ಕಾರ್ಯ ಮಾಡಬೇಕಿತ್ತು. ಆದರೆ,ದೊಡ್ಡವರು ಚಿಕ್ಕವನಿಗೆ ಹಾಲು-ತುಪ್ಪ ಕಾರ್ಯ ಮಾಡುವ ಪರಿಸ್ಥಿತಿ ಬಂದಿದೆ ಎಂದು ಭಾವುಕರಾದರು.

Shivarajkumar
ಸ್ನೇಹಿತರೊಂದಿಗೆ ಶಿವಣ್ಣ

ನಾಳೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‍ಕುಮಾರ್ ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನಡೆಯಲಿದೆ. ಅಪ್ಪು ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ, ನಟ ಶಿವರಾಜ್ ಕುಮಾರ್ ಕುಟುಂಬ, ರಾಘವೇಂದ್ರ ರಾಜ್ ಕುಮಾರ್, ಬಂಧು ಮಿತ್ರರು ಮತ್ತು ಸಿನಿಮಾರಂಗದ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: 'ಅಪ್ಪು ಪ್ರೀತಿಯ ರಾಯಭಾರಿ' : ಪುನೀತ್ ಕುಟುಂಬಕ್ಕೆ ತಮಿಳು ನಟ ಪ್ರಭು ಗಣೇಶನ್ ಸಾಂತ್ವನ

Last Updated :Nov 1, 2021, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.