ETV Bharat / sitara

ಪವರ್ ಸ್ಟಾರ್ ಪುಣ್ಯಸ್ಮರಣೆ: ಅಭಿಮಾನಿಗಳಿಗೆ 'ಅನ್ನದಾನ' ಮಾಡಿದ ಶಿವಣ್ಣ

author img

By

Published : Nov 8, 2021, 12:39 PM IST

ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಶಿವಣ್ಣ ಬಳಿಕ ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ಅನ್ನದಾನ ಮಾಡಿದರು.

shiva rajkumar
ಅಭಿಮಾನಿಗಳಿಗೆ ಅನ್ನದಾನ ಮಾಡಿದ ಶಿವಣ್ಣ

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆ ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​​ಕುಮಾರ್, ಪುನೀತ್ ಪತ್ನಿ ಅಶ್ವಿನಿ ಹಾಗು ಮಕ್ಕಳಾದ ಧೃತಿ ಹಾಗು ವಂದಿತಾ ಪೂಜೆ ಸಲ್ಲಿಸಿದ್ದಾರೆ.

ಅಭಿಮಾನಿಗಳಿಗೆ ಅನ್ನದಾನ ಮಾಡಿದ ಶಿವಣ್ಣ..

ಸಹೋದರನ ಅಗಲಿಕೆಯ ನೋವಿನಲ್ಲಿಯೂ ನಟ ಶಿವರಾಜ್ ಕುಮಾರ್, ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ಅನ್ನದಾನ ಮಾಡಿದರು. ಈ ವೇಳೆ ಶಿವರಾಜ್ ಕುಮಾರ್ ಅವರಿಗೆ​​ ರಾಘವೇಂದ್ರ ರಾಜ್​​ಕುಮಾರ್ ಮಕ್ಕಳಾದ ವಿನಯ್ ರಾಜ್​​​ಕುಮಾರ್, ಯುವರಾಜ್​​ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಾಥ್​ ನೀಡಿದರು.

ಸದಾಶಿವನಗರ, ಪುನೀತ್ ರಾಜ್‍ಕುಮಾರ್ ನಿವಾಸದಲ್ಲಿ, ಅಪ್ಪು ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಲಾಗುತ್ತಿದೆ‌. ಈ ಕಾರ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ಆತ್ಮೀಯ ರಾಜಕಾರಣಿಗಳು ಹಾಗು ಚಿತ್ರೋದ್ಯಮದ‌ ತಾರೆಯರು, ಸ್ನೇಹಿತರು ಸೇರಿದಂತೆ ರಾಜ್ ಕುಟುಂಬದ ಆಪ್ತರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪುನೀತ್ ಪುಣ್ಯ ಸ್ಮರಣೆ: ಕುಟುಂಬಸ್ಥರಿಂದ ಅಪ್ಪು ಸಮಾಧಿಗೆ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.