ETV Bharat / sitara

ವಿಷ್ಣುವರ್ಧನ್​ಗೆ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಇತ್ತು: ಭಾರತಿ ವಿಷ್ಣುವರ್ಧನ್

author img

By

Published : Feb 2, 2022, 12:06 PM IST

ವಿಸ್ತಾಸ್​ ಲರ್ನಿಂಗ್​ ಆ್ಯಪ್​ನ ರಾಯಭಾರಿಯಾಗಿರುವ ಭಾರತಿ ವಿಷ್ಣುವರ್ಧನ್ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ್ಯಪ್​ನ ಲೋಗೋ ಅನಾವರಣಗೊಳಿಸಿ ಮಾತನಾಡಿದರು.

senior-actress-bharati
ಭಾರತಿ ವಿಷ್ಣುವರ್ಧನ್

ಕೋವಿಡ್ ಕಾಲದಲ್ಲಿ ಮಕ್ಕಳಿಗೆ ಆನ್​ಲೈನ್ ವಿದ್ಯಾಭ್ಯಾಸ ಅತ್ಯಗತ್ಯವಾಗಿದೆ. ಇದೇ ವೇಳೆ ಚಿಕ್ಕಮಗಳೂರು ‌ಮೂಲದ ಅರ್ಜುನ್ ಸಾಮ್ರಾಟ್ ಎಂಬುವವರು 'ವಿಸ್ತಾಸ್ ಲರ್ನಿಂಗ್ ಆ್ಯಪ್' ಅಭಿವೃದ್ಧಿಪಡಿಸಿದ್ದಾರೆ. ಈ ಆ್ಯಪ್​ 99 ರೂ. ಹಾಗೂ 222 ರೂ.ಗಳ ದರದಲ್ಲಿ ಮಕ್ಕಳಿಗೆ ಲಭ್ಯವಿದೆ. ಈ ಆ್ಯಪ್​ಗೆ ಸಾಹಸಸಿಂಹ ವಿಷ್ಣುವರ್ಧನ್​​ ಅವರ ಪತ್ನಿ, ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್​ ರಾಯಭಾರಿಯಾಗಿದ್ದಾರೆ.

ವಿಸ್ತಾಸ್​ ಲರ್ನಿಂಗ್​ ಆ್ಯಪ್​ನ ರಾಯಭಾರಿಯಾಗಿರುವ ಭಾರತಿ ವಿಷ್ಣುವರ್ಧನ್ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ್ಯಪ್​ನ ಲೋಗೋ ಅನಾವರಣಗೊಳಿಸಿ ಮಾತನಾಡಿದರು.

ನನ್ನನ್ನು ಮೊದಲು ಆಕರ್ಷಿಸಿದ್ದು 'ವಿ' ಎನ್ನುವ ಪದ. ಅದರಲ್ಲಿ ತುಂಬಾ ಅರ್ಥಗಳಿವೆ. ವಿಷ್ಣುವರ್ಧನ್ ಅವರಿಗೆ ಎಜುಕೇಷನ್ ಬಗ್ಗೆ ತುಂಬಾ ಕಾಳಜಿಯಿತ್ತು. ತುಂಬಾ ಜನರಿಗೆ ಫೀಸ್ ಕಟ್ಟಲು ಸಹಾಯ ಮಾಡಿದ್ದರು. ನಾನು ಕೂಡ ಡಿಗ್ರಿ ಮಾಡಬೇಕು ಎಂದುಕೊಂಡಿದ್ದೆ, ಆಗಿರಲಿಲ್ಲ. ಮಧ್ಯಮ ವರ್ಗದ ಜನರಿಗೆ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿರುತ್ತದೆ. ದುಬಾರಿ ಶಿಕ್ಷಣದ ಕಾರಣದಿಂದ ಸಾಧ್ಯವಾಗಿರುವುದಿಲ್ಲ ಎಂದರು.

ಓದಿ: ರಜಿನಿಕಾಂತ್​ ಪುತ್ರಿ ಐಶ್ವರ್ಯಾಗೆ ಕೋವಿಡ್​ ಪಾಸಿಟಿವ್​

ಇದೀಗ ಅರ್ಜುನ್ ಅವರು ಮಕ್ಕಳಿಗೆ ಆನ್​ಲೈನ್​ ಶಿಕ್ಷಣ ಸುಲಭ ಮಾಡಿಕೊಡಲು ಹೊರಟಿದ್ದಾರೆ. ಈ ಆ್ಯಪ್ ಬಗ್ಗೆ ನನ್ನಲ್ಲೂ ನೂರಾರು ಪ್ರಶ್ನೆಗಳಿದ್ದವು. ಅದಕ್ಕೆಲ್ಲ ಇವರು ಉತ್ತರಿಸಿದ್ದಾರೆ. ನಮ್ಮಿಂದ ಒಂದಷ್ಟು ಜನರಿಗೆ ಪ್ರೇರಣೆಯಾಗುತ್ತೆ ಎಂದರೆ ಆ ಸಂತೋಷಕ್ಕಿಂತ ಬೇರೇನು ಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗಲಿ ಎಂದು ಆಶಿಸಿದರು.

ಇನ್ನು 2018 ರಿಂದ 1800 ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂದಿದ್ದಾರೆ. 1 ರಿಂದ 12ನೇ ತರಗತಿವರೆಗೆ ಅನಿಮೇಷನ್ ವಿಡಿಯೋ ಸಹಿತ ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಈ ಆ್ಯಪ್​ ಲಭ್ಯವಿದೆ. ಕಾರ್ಯಕ್ರಮದಲ್ಲಿ ಸಿ.ಎಸ್.ಅರವಿಂದ್, ಅಶೋಕ್ ಜೈನ್, ಭಾರ್ಗವಿ ಗೋಪಿನಾಥ್ ಹಾಜರಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.