ETV Bharat / sitara

ವೇದಾಂತದ ಮಾತುಗಳನ್ನಾಡಿದ ಸ್ಯಾಂಡಲ್​​ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ

author img

By

Published : Aug 7, 2020, 5:37 PM IST

ಮದುವೆಯಾದಾಗಿನಿಂದ ತಮ್ಮ ಹಾಗೂ ಪತ್ನಿ ರೇವತಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ನಿಖಿಲ್, ಇದೀಗ ಕೆಲವೊಂದು ವೇದಾಂತದ ಮಾತುಗಳನ್ನು ಕೂಡಾ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣರಾಗಿದ್ದಾರೆ.

Sandalwood Yuvaraja
ನಿಖಿಲ್ ಕುಮಾರಸ್ವಾಮಿ

ಲಾಕ್​​​ ಡೌನ್​​ ಸಮಯದಲ್ಲಿ ರೇವತಿ ಜೊತೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್​​ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ, ಶೂಟಿಂಗ್ ಇಲ್ಲದ ಕಾರಣ ಪತ್ನಿ ಹಾಗೂ ಕುಟುಂಬದೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ.

Sandalwood Yuvaraja
ನಿಖಿಲ್ ಕುಮಾರಸ್ವಾಮಿ ಫೇಸ್​​ಬುಕ್ ಪೋಸ್ಟ್

ಮದುವೆಯಾದಾಗಿನಿಂದ ಪತ್ನಿ ರೇವತಿ ಜೊತೆ ಇರುವ ಸುಂದರ ಫೋಟೋಗಳನ್ನು ನಿಖಿಲ್​​ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಮದುವೆಯಾಗಿ 4 ತಿಂಗಳಲ್ಲೇ ವೇದಾಂತಿಯಾಗಿದ್ದಾರೆ. ಮುದ್ದಾದ ಮೇಕೆ ಮರಿಯನ್ನು ಹಿಡಿದಿರುವ ಫೋಟೋವೊಂದನ್ನು ಹಂಚಿಕೊಂಡಿರುವ ನಿಖಿಲ್​​​​​, "ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಚಿಂತೆ ಇಲ್ಲದಿರೋ ವ್ಯಕ್ತಿನೇ ಇಲ್ಲ. ಜೀವನದಲ್ಲಿ ಸವಾಲುಗಳು ಏನೇ ಇರಲಿ ನಾವು ಎದೆಗುಂದದೆ ಎದುರಿಸಬೇಕು" ಎಂಬ ಪದಗಳನ್ನು ಬರೆದುಕೊಂಡಿದ್ದಾರೆ.

Sandalwood Yuvaraja
ಪತ್ನಿ ರೇವತಿ ಜೊತೆ ನಿಖಿಲ್

ನಿಖಿಲ್ ಇದಕ್ಕೂ ಮುನ್ನ ಹೀಗೆ ಬರೆದುಕೊಂಡಿರಲಿಲ್ಲ. ಆದರೆ ಈಗ ವೇದಾಂತದ ಮಾತುಗಳನ್ನು ಬರೆದಿರುವುದು ನೋಡಿ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಬಹುಶ: ಕೊರೊನಾದಿಂದ ಕಷ್ಟ ಎದುರಿಸುತ್ತಿರುವವರಿಗೆ ಧೈರ್ಯ ತುಂಬಲು ನಿಖಿಲ್ ಈ ರೀತಿ ಬರೆದುಕೊಂಡಿರಬಹುದು ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.