ETV Bharat / sitara

ಅತ್ತ ಸ್ವಿಟ್ಜರ್ಲೆಂಡ್‌ನಲ್ಲಿ ಸಮಂತಾ ಸ್ಕೀಯಿಂಗ್‌.. ಇತ್ತ ಡಿವೋರ್ಸ್ ಕುರಿತ ಪೋಸ್ಟ್​ ಡಿಲೀಟ್​​..

author img

By

Published : Jan 21, 2022, 6:06 PM IST

2021ರ ಅಕ್ಟೋಬರ್​ನಲ್ಲಿ ತಾವು ಬೇರೆಯಾಗುವುದಾಗಿ ಸೋಷಿಯಲ್​ ಮೀಡಿಯಾದಲ್ಲಿ ಘೋಷಿಸಿಕೊಂಡಿದ್ದರು. ಆದರೆ, ಈಗ ಸ್ಯಾಮ್​​, ವಿಚ್ಛೇದನದ ಕುರಿತು ಮಾಡಿದ್ದ ಪೋಸ್ಟ್ ಅನ್ನು ಡಿಲೀಟ್​ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಮಾಜಿ ದಂಪತಿ ಮತ್ತೆ ಒಂದಾಗಬಹುದೇ ಎಂಬ ಕುತೂಹಲ ಮೂಡಿಸಿದೆ..

Samantha goes skiing in Switzerland, deletes separation post from social media
ಅತ್ತ ಸ್ವಿಟ್ಜರ್ಲೆಂಡ್‌ನಲ್ಲಿ ಸಮಂತಾ ಸ್ಕೀಯಿಂಗ್‌

ಟಾಲಿವುಡ್​ ನಟ ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ನಟಿ ಸಮಂತಾ ರುತ್ ಪ್ರಭುಗೆ ಅನೇಕ ಸಿನಿಮಾ ಆಫರ್​ಗಳು ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ನಟಿ ಸಾಕಷ್ಟು ಆ್ಯಕ್ಟೀವ್​ ಆಗಿದ್ದಾರೆ. 'ಪುಷ್ಪ' ಸಿನಿಮಾದಲ್ಲಿ 'ಹೂ ಅಂಟಾವಾ ಮಾಮ' ಐಟಂ ಸಾಂಗ್​​ಗೆ ಹೆಜ್ಜೆ ಹಾಕಿದ್ದ ಸ್ಯಾಮ್​ ಇದೀಗ ಸ್ವಿಟ್ಜರ್ಲೆಂಡ್‌ನಲ್ಲಿ ಜಾಲಿ ಮಾಡುತ್ತಿರುವ ಫೋಟೋ ಹರಿಬಿಟ್ಟಿದ್ದಾರೆ.

ಚಳಿಗಾಲದಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ಸ್ಕೀಯಿಂಗ್‌ ಮಾಡುವವರ ಸಂಖ್ಯೆ ಹೆಚ್ಚು. ಹಿಮದಿಂದ ಆವೃತವಾದ ಪರ್ವತಗಳಲ್ಲಿ ಸಮಂತಾ ಹಳದಿ ಜಾಕೆಟ್ ಮತ್ತು ಬಿಳಿ ಡೆನಿಮ್, ಹೆಲ್ಮೆಟ್, ಸ್ಕೀ ಕನ್ನಡಕ ಧರಿಸಿರುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ನಾಲ್ಕನೇ ದಿನ ಮ್ಯಾಜಿಕ್ ನಡೆದಾಗ' ಎಂದು ಬರೆದುಕೊಂಡಿರುವ ನಟಿ 'ಸ್ಕೀಯಿಂಗ್ ಸುಲಭವಲ್ಲ. ಆದರೆ, ಮೋಜು' ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ: ಶಾಕಿಂಗ್​..ನಟಿ ಸಮಂತಾ ಗರ್ಭಿಣಿ! 'ಯಶೋದೆ'ಗಾಗಿ!!

ಡಿವೋರ್ಸ್ ಕುರಿತ ಪೋಸ್ಟ್​ ಡಿಲೀಟ್​​ : 2021ರ ಅಕ್ಟೋಬರ್​ನಲ್ಲಿ ತಾವು ಬೇರೆಯಾಗುವುದಾಗಿ ಸೋಷಿಯಲ್​ ಮೀಡಿಯಾದಲ್ಲಿ ಘೋಷಿಸಿಕೊಂಡಿದ್ದರು. ಆದರೆ, ಈಗ ಸ್ಯಾಮ್​​, ವಿಚ್ಛೇದನದ ಕುರಿತು ಮಾಡಿದ್ದ ಪೋಸ್ಟ್ ಅನ್ನು ಡಿಲೀಟ್​ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಮಾಜಿ ದಂಪತಿ ಮತ್ತೆ ಒಂದಾಗಬಹುದೇ ಎಂಬ ಕುತೂಹಲ ಮೂಡಿಸಿದೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.