ETV Bharat / sitara

ಗಣೇಶ್​ ಅಭಿನಯದ 'ಸಖತ್'​ ಚಿತ್ರದ ಯಶಸ್ಸು​... ಚಿತ್ರತಂಡದಿಂದ ಸಕ್ಸಸ್​ ಮೀಟ್​​

author img

By

Published : Dec 18, 2021, 3:32 AM IST

ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದಂತೆ ಚಿತ್ರ ತಂಡ ಸಕ್ಸಸ್​ ಮೀಟ್​​​​ ನಡೆಸಿತು. ಸಖತ್ ಸಿನಿಮಾ ಬಗ್ಗೆ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ ಎಂದರು.

Sakath movie success meet
Sakath movie success meet

ಚಮಕ್ ಸಿನಿಮಾ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ ಸಖತ್ ಸಿನಿಮಾ ಮೂಲಕ ಮತ್ತೆ ಮ್ಯಾಜಿಕ್ ಮಾಡಿದೆ. ಮೂರು ವಾರದ ಹಿಂದೆ ರಿಲೀಸ್ ಆಗಿರುವ ಸಖತ್ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಜೊತೆಗೆ ಸಿನಿಮಾ 25ನೇ ದಿನದತ್ತ ದಾಪುಗಾಲಿಟ್ಟಿದೆ. ಇಲ್ಲಿ ಮತ್ತೊಮ್ಮೆ ಗಣಿ-ಸುನಿ ಕಾಂಬೋ ವರ್ಕ್ ಆಗಿದೆ.

ಸಖತ್​ ಚಿತ್ರದಿಂದ ಸಕ್ಸಸ್ ಮೀಟ್​​

ಸಖತ್ ಬಳಗ ಸಕ್ಸಸ್ ಮೀಟ್: ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದಂತೆ ಚಿತ್ರ ತಂಡ ಸಕ್ಸಸ್​ ಮೀಟ್​​​​ ನಡೆಸಿತು. ಸಖತ್ ಸಿನಿಮಾ ಬಗ್ಗೆ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಫ್ಯಾಮಿಲಿ ಆಡಿಯನ್ಸ್ ಸಿನಿಮಾ ಎಂಜಾಯ್ ಮಾಡ್ತಿದ್ದಾರೆ. ಕೋವಿಡ್ ಭಯದಿಂದ ನಮಗೆ ತುಸು ಹೊಡೆತ ಬಿದ್ದಿದ್ದು ನಿಜವಾದರೂ, ಸಿನಿಮಾದ ಬಗ್ಗೆ ಬಂದ ಒಳ್ಳೆಯ ಪ್ರಚಾರದಿಂದಾಗಿ ಸಿನಿಮಾ ಮೂರು ವಾರಗಳಾದರೂ ಚೆನ್ನಾಗಿ ಓಡುತ್ತಿದೆ ಎಂದರು.

ಇದನ್ನೂ ಓದಿರಿ: ಖಾಕಿ ಪಡೆ ನೋಡಿ ಪರಾರಿಯಾಗಲು ಯತ್ನಿಸಿದವರ ಬ್ಯಾಗ್​ನಲ್ಲಿ ರಾಶಿ ರಾಶಿ ಮೊಬೈಲ್​!

ಇನ್ನು ನಿರ್ದೇಶಕ ಸಿಂಪಲ್ ಸುನಿ, ಕೊರೊನಾ ಹಾಗೂ ಬೇರೆ ಸಿನಿಮಾಗಳ ನಡುವೆಯೂ ಸಖತ್ ಸಿನಿಮಾ ಗೆದ್ದಿದೆ. 2ನೇ ವಾರಕ್ಕೆ ನಾವು ಹಾಕಿದ ಬಂಡವಾಳ ವಾಪಸ್ ಬಂದಿದ್ದು, 3 ವಾರ ಬರುವುದೆಲ್ಲವೂ ಲಾಭವಾಗಲಿದೆ ಎಂದರು. ಹಾಗೇನೇ ಇನ್ನೊಂದು ಮುಖ್ಯ ವಿಷಯವೇನೆಂದರೆ ಸಖತ್ ಸಿನಿಮಾ ನೆಟ್ ಫ್ಲಿಕ್ಸ್​​ಗೆ ಮಾರಾಟವಾಗಿದ್ದು, OTT ಯಲ್ಲಿ ಪ್ರದರ್ಶನಗೊಳ್ಳಲಿದೆ. ಟಿವಿ ಪ್ರಸಾರದ ಹಕ್ಕನ್ನು ಉದಯ ಟಿವಿ ಖರೀದಿಸಿದ್ದಾರೆ ಎಂದರು.

ಕೊರೊನಾ ಹಾಗೂ ಬೇರೆ ಸಿನಿಮಾಗಳ ನಡುವೆಯೂ ಸಖತ್ ಸಿನಿಮಾ ಸಕ್ಸಸ್ ಖುಷಿಯಲ್ಲಿದೆ. ಪರಭಾಷಾ ಸಿನಿಮಾಗಳಿಗೆ ಸೆಡ್ಡು ಹೊಡೆದು 25ನೇ ದಿನದತ್ತ ಮುನ್ನುಗುತ್ತಿರುವುದು ಸಖತ್ ಬಳಗಕ್ಕೆ ಖುಷಿಕೊಟ್ಟಿದೆ.

ಚಿತ್ರದಲ್ಲಿ ಗಣಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದು, ಚಿತ್ರಕ್ಕೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದು, ನಿಶಾ ವೆಂಕಟ್ ಕೊಂಕಣಿ, ಸುಪ್ರಿತ್ ನಿರ್ಮಾಣ ಮಾಡಿದ್ದರು. ಉಳಿದಂತೆ ರಂಗಾಯಣ ರಘು, ರವಿಶಂಕರ್ ಗೌಡ, ಸಾಧು ಕೋಕಿಲ, ಧರ್ಮಣ್ಣ ಇನ್ನೂ ಹಲವರು ನಟನೆ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ ಸಖತ್ ಸಿನಿಮಾ ಬಿಸಿನೆಸ್, ವಿಚಾರದಲ್ಲಿ ತಮಗೆ ತೃಪ್ತಿ ತಂದಿದೆ. ನಾವು ಖುಷಿಯಾಗಿದ್ದೇವೆ ಅಂತಾ ಕೆವಿಎನ್ ಸಂಸ್ಥೆಯ ಸುಪ್ರಿತ್ ಅಭಿಪ್ರಾಯ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.