ETV Bharat / sitara

ಗಣೇಶ್​ ನಟಿಸಿದ ಸಖತ್​ ಸಿನಿಮಾದ ಟೈಟಲ್​ ಸಾಂಗ್​ ರಿಲೀಸ್​, ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ಹವಾ

author img

By

Published : Nov 15, 2021, 4:47 PM IST

ಗೋಲ್ಡನ್ ಸ್ಟಾರ್ ಗಣೇಶ್​(Golden star Ganesh)ಅಭಿನಯದ 'ಸಖತ್​' ಸಿನಿಮಾ (Sakat movie) ಪೋಸ್ಟರ್ ಹಾಗೂ ಟೀಸರ್​ನಿಂದಲೇ ಸೆನ್ಸೇಷನ್​ ಕ್ರಿಯೇಟ್ ಮಾಡಿದೆ. ಇದರ ಮಧ್ಯೆಯೇ ಟೈಟಲ್ ಹಾಡೊಂದನ್ನು ಬಿಡುಗಡೆ(Title song released) ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ..

sakat movie title song release
ಸಖತ್​ ಸಿನಿಮಾದ ಟೈಟಲ್​ ಸಾಂಗ್​ ರಿಲೀಸ್​

ಪ್ರತಿ ಸಿನಿಮಾದಲ್ಲಿ ಲವರ್ ಬಾಯ್ ಇಮೇಜ್​ನಿಂದಲೇ ಹೆಂಗಳೆಯರ ಮನಸ್ಸು ಕದ್ದ ಗೋಲ್ಡನ್ ಸ್ಟಾರ್ ಗಣೇಶ್ (Golden star Ganesh) ಅವರು ಮುಂಬರುವ 'ಸಖತ್' ಸಿನಿಮಾದಲ್ಲಿ (Sakat movie) ಚಾಲೆಂಜಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.‌ ಅದುವೇ ಅಂಧನ ಪಾತ್ರ!

ಈಗಾಗಲೇ ಪೋಸ್ಟರ್ ಹಾಗೂ ಟೀಸರ್​ನಿಂದಲೇ ಸೆನ್ಸೇಷನ್​ ಕ್ರಿಯೇಟ್ ಮಾಡ್ತಿರೋ ಸಖತ್ ಸಿನಿಮಾ, ಇದೀಗ ಟೈಟಲ್ ಹಾಡೊಂದನ್ನು ಬಿಡುಗಡೆ (Title song released) ಮಾಡಿದೆ.

ಸದ್ಯ ಸಖತ್ ಸಿನಿಮಾದ ಇಂಟ್ರುಡಕ್ಷನ್ ಸಾಂಗ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಗಣೇಶ್ ಮತ್ತಷ್ಟು ಲವ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಪಾರ್ಟಿ ಸಾಂಗ್​ನಂತಿರುವ ಈ ಹಾಡಿನಲ್ಲಿ ಪಾರ್ಟಿ ಕಾಸ್ಟ್ಯೂಮ್​ನಲ್ಲಿ ಗಣೇಶ್ ಮಿಂಚಿದ್ದಾರೆ.

ಹಾಡು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಉಂಟು ಮಾಡಿದೆ. ನಿರ್ದೇಶಕ ಸಿಂಪಲ್ ಸುನಿ‌ ಮನಸ್ಸಲ್ಲೇ ಹೆಜ್ಜೆ ಹಾಕುವಂತ ಸಾಹಿತ್ಯ ಬರೆದಿದ್ದು, ಈ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ಹಾರ್ಟ್​ ಟಚ್ಚಿಂಗ್​ ಮ್ಯೂಸಿಕ್ ನೀಡಿದ್ದಾರೆ.

ಸಾಂಗ್‌ ಗಂಡ್ ಹೈಕ್ಳು, ಹೆಣ್ ಹೈಕ್ಳು ಹುಚ್ಚೆದ್ದು ಕುಣಿಯುವಂತೆ ಮಾಡಲಿದೆ. ಪಂಚಮ್ ಜೀವಾ, ಜೂಡಾ ಸ್ಯಾಂಡಿ, ರ್ಯಾಪರ್ ಸಿದ್​ರ ಧ್ವನಿ ಈ ಹಾಡಿಗಿದೆ. ಅದ್ಧೂರಿ ಸೆಟ್​ನಲ್ಲಿ 25 ಜನ ಡ್ಯಾನ್ಸರ್ ನಡುವೆ ಗೋಲ್ಡನ್ ಸ್ಟಾರ್ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ.

ಗಣೇಶ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್​ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ಇದಾಗಿದೆ. 'ಚಮಕ್' ಬಳಿಕ 'ಸಖತ್' ಸಿನಿಮಾದ ಮೂಲಕ ಈ ಜೋಡಿ ಮತ್ತೆ ಒಂದಾಗಿದೆ. ಕಾಮಿಡಿ ಜೊತೆಗೆ ಗಂಭೀರ ಕತೆಯ ಸುತ್ತ ಹೆಣೆದಿರುವ ಸಿನಿಮಾ ಇದಾಗಿದೆ. ಈ ಕಥೆಯಲ್ಲಿ ಗಣೇಶ್​ಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್​ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರೀತ್ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ಗಣೇಶ್ ಹಾಗೂ ನಿಶ್ವಿಕಾ ನಾಯ್ಡು ಅಲ್ಲದೇ, ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ತಾರಾಗಣದಲ್ಲಿದ್ದಾರೆ. ಸಖತ್ ಸಿನಿಮಾ ನವೆಂಬರ್​ 26ರಂದು ಬೆಳ್ಳಿಪರದೆ ಮೇಲೆ ರಾರಾಜಿಸೋಕೆ, ಪ್ರೇಕ್ಷಕರನ್ನು ನಕ್ಕು ನಲಿಸೋಕೆ ರೆಡಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.