ETV Bharat / sitara

ಕೆ ಮಾದೇಶ್‌ ನಿರ್ದೇಶನದಲ್ಲಿ ಭ್ರಷ್ಟಾಚಾರಕ್ಕೆ 'ಲಗಾಮ್​' ಹಾಕ್ತಾರಂತೆ ರಿಯಲ್​ ಸ್ಟಾರ್​ ಉಪೇಂದ್ರ..

author img

By

Published : Jul 14, 2021, 8:53 PM IST

ಬಹಳ ಡಿಫರೆಂಟ್‌ ಆದ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಗಜ, ರಾಮ್, ಹುಡುಗರು ಅಂತಹ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ನಿರ್ದೇಶಕ ಕೆ.ಮಾದೇಶ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಮೈಸೂರು, ಬೆಂಗಳೂರಿನಲ್ಲಿ ಈ ಸಿನಿಮಾವನ್ನ ಚಿತ್ರೀಕರಣ ಮಾಡಿದ್ದೇವೆ..

real-star-upendra
ಸಾಹಸ ನಿರ್ದೇಶಕ ರವಿವರ್ಮ ಜತೆ ರಿಯಲ್​ ಸ್ಟಾರ್​ ಉಪೇಂದ್ರ

ಲಾಕ್​ಡೌನ್​ ಸಡಿಲಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹರಿಪ್ರಿಯಾ ಒಟ್ಟಿಗೆ ನಟಿಸ್ತಿರೋ ಲಗಾಮ್ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ. ಈ ಚಿತ್ರದ ಭರ್ಜರಿ ಆ್ಯಕ್ಷನ್ ಸಿಕ್ವೆನ್ಸ್ ಚಿತ್ರೀಕರಣ ಮಾಡೋದ್ರಲ್ಲಿ ನಿರ್ದೇಶಕ ಕೆ ಮಾದೇಶ್ ಬ್ಯುಸಿಯಾಗಿದ್ದಾರೆ.

ಕಳೆದ ಹತ್ತು ದಿನಗಳಿಂದ ಬೆಂಗಳೂರಿನ ವೈಟ್‌ಹೌಸ್ ಎಂಬ ಮನೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ರಾಜಕೀಯ ವಿಡಂಬನೆ ಹಾಗೂ ಹಣ ವರ್ಗಾವಣೆಯ ಸುತ್ತ ನಡೆಯುವ ಕಥೆ ಇದಾಗಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟ ಉಪೇಂದ್ರ, ಸಮಾಜದಲ್ಲಿ ನಡೆಯುವ ಭ್ರಷ್ಟಚಾರದ ಬಗ್ಗೆ ಲಗಾಮು ಹಾಕಲು ಹೊರಡುವವನ ಕಥೆ ಇದಾಗಿದೆ.

ಬಹಳ ಡಿಫರೆಂಟ್‌ ಆದ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಗಜ, ರಾಮ್, ಹುಡುಗರು ಅಂತಹ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ನಿರ್ದೇಶಕ ಕೆ.ಮಾದೇಶ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಮೈಸೂರು, ಬೆಂಗಳೂರಿನಲ್ಲಿ ಈ ಸಿನಿಮಾವನ್ನ ಚಿತ್ರೀಕರಣ ಮಾಡಿದ್ದೇವೆ ಎಂದರು.

ಸದ್ಯ ಟಾಕೀ ಪೋಷನ್ ಚಿತ್ರೀಕರಣ ಮಾಡ್ತಿರೋ ನಿರ್ದೇಶಕರು, ಅನುಮತಿ ಸಿಕ್ಕರೆ ಸಾಂಗ್​ ಶೂಟಿಂಗ್​ಗೆ ವಿದೇಶಕ್ಕೆ ಹೋಗುವ ಪ್ಲಾನ್ ಹಾಕಿಕೊಂಡಿದ್ದಾರೆ. ಚಿತ್ರದಲ್ಲಿ ನಾಲ್ಕು ಭರ್ಜರಿ ಫೈಟ್​ಗಳಿವೆ. ಸಾಹಸ ನಿರ್ದೇಶಕ ರವಿವರ್ಮ ಈ ಸ್ಟಂಟ್ ಕಂಪೋಸ್ ಮಾಡುತ್ತಿದ್ದಾರೆ. ಲಗಾಮ್ ಚಿತ್ರಕ್ಕೆ ಎಂ. ಎಸ್. ರಮೇಶ್ ಸಂಭಾಷಣೆ ಬರೆಯುತ್ತಿದ್ದಾರೆ. ರಾಜೇಶ್ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಈ ಚಿತ್ರಕ್ಕೆ ಸಾಧು ಕೋಕಿಲ ಮಗ ಸುರಾಗ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆಯಂತೆ. ಉಪೇಂದ್ರ, ಹರಿಪ್ರಿಯಾ ಅಲ್ಲದೇ ಸಾಧು ಕೋಕಿಲ, ಶೋಭರಾಜ್‌, ರಂಗಾಯಣ ರಘು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎಂ. ಆರ್. ಗೌಡ ಎಂಬ ನಿರ್ಮಾಪಕ ಈ ಸಿನಿಮಾವನ್ನ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಲಗಾಮ್ ಪ್ಯಾನ್ ಇಂಡಿಯಾ ಸಿನಿಮಾ ಆಗುವ ಸಾಧ್ಯತೆ ಇದೆ ಎಂದು ಉಪೇಂದ್ರ ತಿಳಿಸಿದ್ದಾರೆ.

ಓದಿ: 'ಮಾಸ್ತಿಗುಡಿ' ಸಿನಿಮಾದ ದುರಂತ ನನ್ನನ್ನು ಕಾಡುತ್ತಿದೆ: ರವಿವರ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.