ETV Bharat / sitara

ಕ್ರೇಜಿಸ್ಟಾರ್ ಮಗಳ ಮದುವೆ: ಗಣ್ಯರಿಂದ ಶುಭಾಶಯಗಳ ಸುರಿಮಳೆ!

author img

By

Published : May 29, 2019, 10:46 AM IST

ಸ್ಯಾಂಡಲ್​ವುಡ್​ನ 'ಕನಸುಗಾರ' ರವಿಚಂದ್ರನ್​​ ಮಗಳ ಮದುವೆ ಕಾರ್ಯಕ್ರಮ‌ವು ಅದ್ಧೂರಿಯಾಗಿ ನಡೆಯುತ್ತಿದ್ದು ಭಾರತೀಯ ಚಿತ್ರರಂಗವೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ.

ಆರತಕ್ಷತೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಸೂಪರ್ ಸ್ಟಾರ್ಸ್

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗು ಉದ್ಯಮಿ ಅಜಯ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಸಮಾಗಮವಿತ್ತು. ಅರಮನೆ ಮೈದಾನದ ವೈಟ್ ಪೆಟಲ್ಸ್ ಆವರಣದಲ್ಲಿ ಹಾಕಲಾಗಿರುವ ಗಾಜಿನ ‘ರಾಜಹಂಸದ ವೇದಿಕೆ’ಯಲ್ಲಿ ಆರತಕ್ಷತೆ ಅದ್ದೂರಿಯಾಗಿ ನಡೆಯಿತು.

Ravichandran daughter geethanjali and Ajay wedding reception
ಗೀತಾಂಜಲಿ ಕೈ ಹಿಡಿದ ಯುವ ಉದ್ಯಮಿ ಅಜಯ್​​

ಅದ್ಧೂರಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ, ಸೂಪರ್ ಸ್ಟಾರ್ ರಜನಿಕಾಂತ್, ಸ್ಯಾಂಡಲ್​​ವುಡ್​ ರೋರಿಂಗ್ ಸ್ಟಾರ್ ಶ್ರೀಮುರಳಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ, ನವಜೋಡಿಗೆ ಶುಭಹಾರೈಸಿದರು.

ರವಿಚಂದ್ರನ್​​ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಅದ್ಭುತ ವೇದಿಕೆಯಲ್ಲಿ ಆರತಕ್ಷತೆ ಕಾರ್ಯಕ್ರಮ ಕಳೆಗಟ್ಟಿತ್ತು.

Ravichandran daughter geethanjali and Ajay wedding reception
ನವಜೋಡಿಗೆ ಶುಭ ಹಾರೈಸಿದ ರಾಜಕೀಯ ಧುರೀಣರು

ಮದುವೆಯ ಮನೆಯಲ್ಲಿ ನಾದಬ್ರಹ್ಮ ಹಂಸಲೇಖ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮವನ್ನು ಕೂಡ ಏರ್ಪಾಡು ಮಾಡಲಾಗಿದೆ. ರವಿಚಂದ್ರನ್​ ನಟಿಸಿರುವ ಕೆಲವು ಸಿನಿಮಾದ ಹಾಡುಗಳ ರಸದೌತಣ ಸವಿಯುವ ಅವಕಾಶ ಗಣ್ಯರಿಗೆ ಸಿಗಲಿದೆ.

Ravichandran daughter geethanjali and Ajay wedding reception
ರವಿಚಂದ್ರನ್​​ ಮಗಳ ಮದುವೆ ಆರತಕ್ಷತೆ ಕಾರ್ಯಕ್ರಮ‌ದಲ್ಲಿ ಭಾಗಿಯಾದ ನಟ ಶ್ರೀಮುರಳಿ
Intro:ಕ್ರೇಜಿ ಸ್ಟಾರ್ ಮಗಳಿಗೆ ಶುಭಾ ಹಾರೈಯಿಸಿದ ಸೂಪರ್ ಸ್ಟಾರ್ ರಜನಿಕಾಂತ್!!

ಕನಸುಗಾರ ರವಿಚಂದ್ರನ್ ಮಗಳ ಮದುವೆಯ ಆರತಕ್ಷತೆಯ ಅದ್ದೂರಿ ಕಾರ್ಯಕ್ರಮ‌ ಬೆಂಗಳೂರಿ ನಲ್ಲಿ ಅದ್ಧೂ ನಡೆಯುತ್ತಿದೆ. ಅರಮನೆ ಮೈದಾನ ವೈಟ್ ಪೆಟಲ್ಸ್ ಆವರಣದಲ್ಲಿ ಹಾಕಲಾಗಿರುವ ಗಾಜಿನ ‘ರಾಜಹಂಸದ ವೇದಿಕೆ’ಯಲ್ಲಿ ನವಜೋಡಿ ಗೀತಾಂಜಲಿ-ಅಜಯ್ ಕಂಗೊಳಿಸ್ತಿದ್ದಾರೆ. ಕಡು ಹಸಿರು ಬಣ್ಣದ ಗೌನ್​ನಲ್ಲಿ ಗೀತಾಂಜಲಿ, ಕಪ್ಪು ಬಣ್ಣದ ಶೂಟ್ ತೊಟ್ಟ ವರ ಅಜಯ್ ಮಿಂಚುತ್ತಿದ್ದಾರೆ.ವಿಶೇಷ ಅಂದ್ರೆ ಅದ್ಭುತ ವೇದಿಕೆಯನ್ನ ರವಿಚಂದ್ರನ್ ಅವರೇ ಡಿಸೈನ್ ಮಾಡಿದ್ದಾರೆ. ಇನ್ನು, ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ಶ್ರೀಮುರಳಿ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿದ್ದು, ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಇನ್ನು, ಎಲ್ಲಾ ವ್ಯವಸ್ಥೆಗಳನ್ನೂ ಖುದ್ದು ರವಿಚಂದ್ರನ್ ಅವರೇ ನೋಡಿಕೊಳ್ಳುತ್ತಿದ್ದಾರೆ.Body:ಗಣ್ಯರನ್ನ ರಂಜಿಸಲು ನಾದಬ್ರಹ್ಮ ಹಂಸಲೇಖ ಅವರ ಟೀಂ ಸಂಗೀತಗೋಷ್ಠಿ ನಡೆಸುತ್ತಿದೆ. ಇಲ್ಲಿ ರವಿಚಂದ್ರನ್ ಸಿನಿಮಾದ ಹಾಡುಗಳ ಸಂಗೀತ ಸುಧೆ ಮೂಡಿಬರುತ್ತಿದೆ. ಇನ್ನು ನಾಳೆ ಬೆಳಗ್ಗೆ 9 ರಿಂದ10.30ರ ಒಳಗೆ ಕಟಕ ಶುಭಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಲಿದೆ.Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.