ETV Bharat / sitara

Viral video: ಧಾರವಾಡದಲ್ಲಿ ಅಪ್ಪು ಹಾಡಿದ್ದ ಹಿಂದಿ ಹಾಡು ಈಗ ವೈರಲ್

author img

By

Published : Nov 17, 2021, 9:30 AM IST

Updated : Nov 17, 2021, 10:27 AM IST

ಧಾರವಾಡದಲ್ಲಿ ಅಪ್ಪು ಹಾಡಿದ್ದ ಹಾಡೊಂದು ಇದೀಗ ವೈರಲ್ (puneet song viral) ಆಗಿದ್ದು, ಇದೇ ಹಾಡನ್ನು ಪುನೀತ ನಮನ ಕಾರ್ಯಕ್ರಮದಲ್ಲಿ ಶಿವರಾಜ್​ಕುಮಾರ್ ಹಾಡಿದ್ದರು.

ಧಾರವಾಡದಲ್ಲಿ ಅಪ್ಪು ಹಾಡಿದ್ದ ಹಾಡು ವೈರಲ್
ಧಾರವಾಡದಲ್ಲಿ ಅಪ್ಪು ಹಾಡಿದ್ದ ಹಾಡು ವೈರಲ್

ಧಾರವಾಡ: ನಟ ಪುನೀತ್ ರಾಜಕುಮಾರ್​ ಅವರ ಅಕಾಲಿಕ ನಿಧನ ಕರುನಾಡು ಮತ್ತು ಇಡೀ ಚಿತ್ರರಂಗವನ್ನೇ ದಿಗ್ಭ್ರಮೆಗೊಳಿಸಿದೆ. ಅಪ್ಪು ನೆನಪು ಕಾಡುತ್ತಲೇ ಇದೆ. ಅವರು ಹಾಡಿದ್ದ ಹಾಡುಗಳು ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಇದೀಗ ಧಾರವಾಡದಲ್ಲಿ ಅಪ್ಪು ಹಾಡಿದ್ದ ಹಾಡೊಂದು ಇದೀಗ ವೈರಲ್ (puneet song viral) ಆಗಿದೆ. ಇದೇ ಹಾಡನ್ನು ಶಿವರಾಜ್ ಕುಮಾರ್ 'ಅಪ್ಪು ನಮನ' ಕಾರ್ಯಕ್ರಮದಲ್ಲಿ ಬುಧವಾರ ಹಾಡಿ, ಅಪ್ಪು ಅವರನ್ನು ನೆನೆದರು.

ಮನೆಯಲ್ಲಿ ಪಾರ್ಟಿ ಮಾಡಿದಾಗ ಯಾವಾಗಲೂ ಕರೋಕೆ ಹಾಡುತ್ತಿದ್ದೆವು. ಅಪ್ಪು ಮೈ ಶಾಯರ್ ತೋ ನಹೀ (Mein shayar to nahin song) ಹಾಡು ತುಂಬಾ ಇಷ್ಟ ಪಡುತ್ತಿದ್ದರು ಎಂದು ಪುನೀತ ನಮನ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡ ಶಿವರಾಜ್ ಕುಮಾರ್​ ಇದೇ ಹಾಡನ್ನು ಹಾಡಿ ನಮನ ಸಲ್ಲಿಸಿದ್ದರು. ಹಾಡು ಹಾಡುವ ವೇಳೆ ಶಿವರಾಜ್​ಕುಮಾರ್ (Shiva Rajkumar) ತುಂಬಾ ಭಾವುಕರಾಗಿದ್ದರು.

ಅಪ್ಪು ಹಾಡಿದ್ದ ಹಿಂದಿ ಹಾಡು

'ಮೈ ಶಾಯರ್ ತೋ ನಹೀ' ಹಾಡು ಬಾಲಿವುಡ್​​ನ "ಬಾಬಿ" ಚಿತ್ರದ್ದಾಗಿದ್ದು, ಯುವರತ್ನ ಸಿನಿಮಾದ (Yuvaratna Movie) ಶೂಟಿಂಗ್ ವೇಳೆ ಧಾರವಾಡಕ್ಕೆ ಬಂದಿದ್ದ ಪುನೀತ್​, ಮಯೂರ ಆದಿತ್ಯ ಹೋಟೆಲ್‌ನಲ್ಲಿ ತಂಗಿದ್ದ ವೇಳೆಯಲ್ಲಿ ಸ್ನೇಹಿತರ ಮಧ್ಯೆ ಈ ಹಾಡು ಹಾಡಿ, ಖುಷಿಪಟ್ಟಿದ್ದರು.

ಅಪ್ಪು ನಮನ ಕಾರ್ಯಕ್ರಮದಲ್ಲಿ ಶಿವಣ್ಣ ಹಾಡಿದ್ದ ಹಾಡು

ಇದನ್ನೂ ಓದಿ: Video: ಪ್ಯಾರಾಚೂಟ್‌ ಹಗ್ಗ ತುಂಡಾಗಿ ಮೇಲೆಕ್ಕೆ ಹಾರಿದ್ದ ದಂಪತಿ ಸಮುದ್ರಕ್ಕೆ ಬಿದ್ರು

Last Updated :Nov 17, 2021, 10:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.