ETV Bharat / sitara

ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು ?​​​: ಟೀಕಾಕಾರರಿಗೆ ಪ್ರಣೀತಾ ಪ್ರಶ್ನೆ

author img

By

Published : Oct 1, 2020, 7:16 PM IST

ನಟಿ ಪ್ರಣೀತಾ ಸುಭಾಷ್ ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​​ ನೀಡಿರುವ ತೀರ್ಪು ಹಾಗೂ ಆ ಬಳಿಕ ಬಂದ ಆಕ್ಷೇಪಗಳ ಬಗ್ಗೆ ಮಾತನಾಡಿದ್ದಾರೆ. ಪೊಲೀಸ್ ಪಡೆಗಳು ಕರಸೇವಕರಿಗೆ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು ಎಂದು ಟ್ಟೀಟ್ ಮಾಡುವ ಮ‌ೂಲಕ ತೀರ್ಪಿನ ಪ್ರಶ್ನಾಕಾರರನ್ನ ಪ್ರಶ್ನಿಸಿದ್ದಾರೆ.

Pranita Subhash questions Babri Masjid verdict
ಬಾಬ್ರಿ ಮಸೀದಿ ತೀರ್ಪಿನ ಬಗ್ಗೆ ಪ್ರಣೀತಾ ಸುಭಾಷ್ ಪ್ರಶ್ನೆ : ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು ಎಂದು ಟ್ವೀಟ್​​​

ಕಳೆದ 28 ವರ್ಷಗಳಿಂದ ನಡೆಯುತ್ತಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುಧೀರ್ಘ ವಿಚಾರಣೆಯ ಬಳಿಕ ಮಹತ್ವದ ತೀರ್ಪು ನೀಡಲಾಯಿತು. ಈ ತೀರ್ಪಿನ ಬಗ್ಗೆ ಪರ ವಿರೋಧಗಳು ಚರ್ಚೆಯಾಗುತ್ತಿವೆ.

Pranita Subhash questions Babri Masjid verdict
ಪ್ರಣೀತಾ ಸುಭಾಷ್

ಈಗ ಸ್ಯಾಂಡಲ್​​ವುಡ್ ಬ್ಯೂಟಿಫುಲ್‌ ನಟಿ ಪ್ರಣೀತಾ ಸುಭಾಷ್, ಪೊಲೀಸ್ ಪಡೆಗಳು ಕರಸೇವಕರಿಗೆ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು ಎಂದು ಟ್ಟೀಟ್ ಮಾಡುವ ಮ‌ೂಲಕ ಪ್ರಶ್ನೆ ಮಾಡಿದ್ದಾರೆ‌. ಈ ಪ್ರಕರಣದ 32 ಮಂದಿ ಆರೋಪಿಗಳನ್ನ ಕೋರ್ಟ್ ಖುಲಾಸೆ ಮಾಡಿದೆ. ಈ ಮೂಲಕ ಬಾಬ್ರಿ ಮಸೀದಿಯನ್ನ ಯಾರೂ ಬೇಕು ಎಂದೇ ಧ್ವಂಸ ಮಾಡಿಲ್ಲ ಆಚಾನಾಕ್ಕಾಗಿ ನಡೆದಿರುವ ಘಟನೆ ಎಂದು ಕೋರ್ಟ್ ತೀರ್ಪು ನೀಡಿದೆ.

Pranita Subhash questions Babri Masjid verdict
ಪ್ರಣೀತಾ ಸುಭಾಷ್ ಪೋಸ್ಟ್​​​

ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಪ್ರಣೀತಾ ಸುಭಾಷ್ ರಾಜಕೀಯ ನಾಯಕರನ್ನ ಬಂಧಿಸಿದಾಗ ಕಾನೂನಿನ ನಿಯಮ ಎಲ್ಲಿತ್ತು? ಪೊಲೀಸರು ಅಂದು ಕರ ಸೇವಕರ ಮೇಲೆ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು. ಕ್ಷಮಿಸಿ ಆದರೆ ಮರೆಯಬೇಡಿ ಎಂದು ಪ್ರಣೀತಾ ಟ್ಟೀಟ್ ಮಾಡಿದ್ದಾರೆ. ಜೊತೆಗೆ ಮಸೀದಿ ಧ್ವಂಸ ಎಂಬ ಹ್ಯಾಷ್ ಟ್ಯಾಗ್ ಕೂಡ ಮಾಡಿದ್ದಾರೆ. ಈ ಟ್ವೀಟ್​​​ ನೋಡಿದ ಹಲವರು ಪ್ರಣೀತಾರನ್ನು ಬಾಲಿವುಡ್​ನ ಕಂಗನಾ ರಣಾವತ್​ಗೆ​ ಹೋಲಿಸಿದ್ದಾರೆ.

Pranita Subhash questions Babri Masjid verdict
ಪ್ರಣೀತಾ ಸುಭಾಷ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.