ETV Bharat / sitara

67 ನೇ ಜನ್ಮದಿನ ಆಚರಿಸುತ್ತಿರುವ ಅನುಪಮ್ ಖೇರ್: ದೇಹದ ಫಿಟ್ನೆಸ್​​​​ಗೆ ಒತ್ತು

author img

By

Published : Mar 7, 2022, 10:53 AM IST

ಬಹುಮುಖ ನಟ ಅನುಪಮ್ ಖೇರ್ ಇಂದು ತಮ್ಮ 67 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಜನ್ಮದಿನದಂದು ತಮ್ಮ ದೇಹದ ಫಿಟ್ನೆಸ್ ಕುರಿತ ಫೋಟೋಗಳನ್ನು ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಒಂದು ದಿನ ಫಿಟ್ ದೇಹವನ್ನು ಸಾಧಿಸುವುದಾಗಿ ಬರೆದಿದ್ದಾರೆ.

on-67th-birthday-anupam-kher-focuses-on-fitness-shares-pics-of-toned-body
67 ನೇ ಜನ್ಮದಿನವನ್ನು ಆಚರಿಸುತ್ತಿರುವ ಅನುಪಮ್ ಖೇರ್ : ದೇಹದ ಫಿಟ್ನೆಸ್ ಗೆ ಒತ್ತು

ಮುಂಬೈ ( ಮಹಾರಾಷ್ಟ್ರ) : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ತಮ್ಮ 67ರ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ 67 ವಯಸ್ಸಾದರೂ ಇನ್ನೂ ಉತ್ಸಾಹ ಮತ್ತು ಶಕ್ತಿ ಒಂಚೂರು ಕಡಿಮೆಯಾಗಿಲ್ಲ. ಇಂದಿಗೂ ಯುವನಟರನ್ನೂ ಮೀರಿಸುವ ನಟನೆ ಎಲ್ಲರನ್ನು ಆಕರ್ಷಿಸುತ್ತದೆ. ಜನ್ಮದಿನದ ಪ್ರಯುಕ್ತ ಇನ್​​​ಸ್ಟಾಗ್ರಾಂನಲ್ಲಿ ಕೆಲವು ಫೋಟೋ ಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರಗಳ ಜೊತೆಗೆ, ನನಗೆ ಜನ್ಮದಿನದ ಶುಭಾಶಯಗಳು! ಇಂದು ನಾನು ನನ್ನ 67 ನೇ ವಸಂತವನ್ನು ಪ್ರಾರಂಭಿಸುತ್ತಿರುವಾಗ, ನಾನು ನನ್ನ ಬಗ್ಗೆ ಹೊಂದಿರುವ ಹೊಸ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಉತ್ಸುಕನಾಗಿದ್ದೇನೆ. ಕಳೆದೆರಡು ವರ್ಷಗಳಲ್ಲಿ ನಾನು ಮಾಡಿದ ನಿಧಾನಗತಿಯ ಪ್ರಗತಿಗೆ ಈ ಚಿತ್ರಗಳು ಉದಾಹರಣೆಯಾಗಿವೆ. ನನ್ನ ವೃತ್ತಿಜೀವನದುದ್ದಕ್ಕೂ ನಾನು ಒಬ್ಬ ಪ್ರದರ್ಶಕನಾಗಿ ಪ್ರತಿಯೊಂದು ಮಾರ್ಗವನ್ನು ಅನ್ವೇಷಿಸಲು ಪ್ರಯತ್ನಿಸಿದೆ. ಆದರೆ ನನ್ನೊಳಗೆ ಯಾವಾಗಲೂ ಒಂದು ಕನಸು ಇತ್ತು. ಆದರೆ ಅದನ್ನು ನನಸಾಗಿಸಲು ಎಂದಿಗೂ ಪ್ರಯತ್ನಿಸಲಿಲ್ಲ" ಎಂದು ಖೇರ್ ಬರೆದಿದ್ದಾರೆ.

on-67th-birthday-anupam-kher-focuses-on-fitness-shares-pics-of-toned-body
ಹಿರಿಯ ನಟ ಅನುಪಮ್ ಖೇರ್

ನನ್ನ ಫಿಟ್ನೆಸ್ ಅನ್ನು ಗಂಭೀರವಾಗಿ ಪರಿಗಣಿಸುವುದು ಮತ್ತು ನನ್ನ ಅತ್ಯುತ್ತಮ ಆವೃತ್ತಿಯನ್ನು ಹೊಂದುವುದು ಮತ್ತು ಅನುಭವಿಸುವುದು ನನ್ನ ಕನಸಾಗಿತ್ತು. ನಂತರ ನಾನು ಈ ಹಾದಿಯಲ್ಲಿ ನಡೆಯಲು ಪ್ರಾರಂಭಿಸಿದೆ ಮತ್ತು ಈ ಮೂಲಕ ನನ್ನ ಈ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಾನು ನನ್ನ ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ, ಮತ್ತು ಒಂದು ವರ್ಷದ ನಂತರ ನಾವು ಹೊಸದನ್ನು ಸಂಭ್ರಮಿಸೋಣ. ನನಗೆ ಶುಭ ಹಾರೈಸಿ ಎಂದು ಇದೇ ವೇಳೆ ಬರೆದುಕೊಂಡಿದ್ದಾರೆ. ಅನುಪಮ್ ಕೇರ್ ಅವರ ಫಿಟ್ನೆಸ್ ಫೋಟೋಗಳನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.

ಜೊತೆಗೆ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತಾದ ಇವರ ಅಭಿನಯದ ಸಿನೆಮಾ ದಿ ಕಾಶ್ಮೀರ್ ಫೈಲ್ಸ್ ಇದೇ ಬರುವ ಮಾರ್ಚ್​ 11ರಂದು ಬಿಡುಗಡೆಯಾಗಲಿದೆ.

ಓದಿ : ಮತ್ತೆ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಯೋಗಿ ಆದಿತ್ಯನಾಥ್​ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.