ETV Bharat / sitara

'ಚೋರಿ' ಟ್ರೇಲರ್ ಬಿಡುಗಡೆ: ಅಲೌಕಿಕ ಶಕ್ತಿ ಕುರಿತು ನಟಿ ನುಶ್ರತ್ ಭರುಚಾ ಹೇಳಿದ್ದೇನು?

author img

By

Published : Nov 18, 2021, 9:31 AM IST

ನಟಿ ನುಶ್ರತ್ ಭರುಚಾ ಅಭಿನಯದ ಬಹು ನಿರೀಕ್ಷಿತ 'ಚೋರಿ' ಚಿತ್ರದ ಟ್ರೇಲರ್ ಮಂಗಳವಾರ (ನ.16 ರಂದು) ಮುಂಬೈನಲ್ಲಿ ಬಿಡುಗಡೆ ಮಾಡಲಾಗಿದ್ದು, ನವೆಂಬರ್ 26 ರಂದು OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ನುಶ್ರತ್ ಭರುಚಾ
ನುಶ್ರತ್ ಭರುಚಾ

ಮುಂಬೈ: ಬಾಲಿವುಡ್ ನಟಿ ನುಶ್ರತ್ ಭರುಚಾ ( Nushrratt Bharuccha) ಮತ್ತು ಸೌರಭ್ ಗೋಯಲ್ ಅಭಿನಯದ 'ಚೋರಿ' ಚಿತ್ರದ ಟ್ರೇಲರ್ ಮಂಗಳವಾರ (ನ.16 ರಂದು) ಬಿಡುಗಡೆ ಮಾಡಲಾಗಿದ್ದು, ಅಭಿಮಾನಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

'ಚೋರಿ' ಹಾರರ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನುಶ್ರತ್ ಭರುಚಾ, 'ಚೋರಿ' (Chhorii) ಸಿನಿಮಾ, ಪ್ರೇಕ್ಷಕರಿಗೆ ಹಾರರ್ ಕಥೆಯನ್ನು ಕಟ್ಟಿಕೊಡುತ್ತದೆ. ನಾನು ಸಹ ಅಲೌಕಿಕ ಶಕ್ತಿ (Supernatural power) ಯನ್ನು ನಂಬುತ್ತೇನೆ. ಸಿನಿಮಾ ಬಹಳ ಸೊಗಸಾಗಿ ಮೂಡಿ ಬಂದಿದೆ. ಎಲ್ಲರೂ ನೋಡಿ ಎಂದು ಮನವಿ ಮಾಡಿದರು.

'ಚೋರಿ' ಸಿನಿಮಾದ ಟ್ರೇಲರ್ ಬಿಡುಗಡೆ

ಇನ್ನು ಚಿತ್ರವನ್ನು ನವೆಂಬರ್ 26 ರಂದು OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಿ, ಹಿಟ್ ಮಾಡಲು ಚಿತ್ರತಂಡ ಸಿದ್ಧವಾಗಿದೆ. ವಿಶಾಲ್ ಫುರಿಯಾ ಚಿತ್ರ ನಿರ್ದೇಶನ ಮಾಡಿದ್ದು, ಟಿ-ಸೀರೀಸ್, ವಿಕ್ರಮ್ ಮಲ್ಹೋತ್ರಾ ಮತ್ತು ಜಾಕ್ ಡೇವಿಸ್ ನಿರ್ಮಿಸಿದ್ದಾರೆ. ಜೊತೆಗೆ 'ಚೋರಿ' ಯಲ್ಲಿ ಮೀತಾ ವಶಿಷ್ಠ, ರಾಜೇಶ್ ಜೈಸ್ ಸೇರಿದಂತೆ ಪ್ರಮುಖರು ಅಭಿನಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.