ETV Bharat / sitara

ನಾನು ಹೀರೋಯಿನ್ ಆಗೋದಕ್ಕೆ ಕಾರಣ ನಿರ್ದೇಶಕ ನಾಗಾಭರಣ : ನೀಲಾ ಖ್ಯಾತಿಯ ಗಾಯತ್ರಿ

author img

By

Published : Sep 8, 2021, 7:57 PM IST

Updated : Sep 8, 2021, 8:05 PM IST

ಟಿ.ಎಸ್. ನಾಗಾಭರಣ ನಿರ್ದೇಶನದ ನೀಲಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದ ನಟಿ ಗಾಯತ್ರಿ ಜಯರಾಮನ್‌ ಅವರು ತಮ್ಮ ಸಿನಿ ಜರ್ನಿಯ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Neela movie actress Gayatri
ನೀಲಾ ಖ್ಯಾತಿಯ ಗಾಯತ್ರಿ

ಟಿ.ಎಸ್.ನಾಗಾಭರಣ ನಿರ್ದೇಶನದ ನೀಲಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿ ಗಾಯತ್ರಿ ಜಯರಾಮನ್‌ ಎಂಟ್ರಿ ನೀಡಿದ್ದರು. ಈ ಚಿತ್ರದ ಬಳಿಕ ಸ್ವಾಮಿ ಸಿನಿಮಾದಲ್ಲಿ ದರ್ಶನ್ ಜೊತೆ ರೋಮ್ಯಾನ್ಸ್ ಮಾಡಿದ್ದ ಗಾಯತ್ರಿ, ಇದೀಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

ನೀಲಾ ಖ್ಯಾತಿಯ ಗಾಯತ್ರಿ ಜಯರಾಮನ್

ಲೂಸ್ ಮಾದ ಯೋಗಿ ಅಭಿನಯದ ಲಂಕೆ ಚಿತ್ರದಲ್ಲಿ ಬೋಲ್ಡ್ ಆಗಿ ಆ್ಯಕ್ಟ್ ಮಾಡಿದ್ದಾರೆ. ತಮ್ಮ ಸಿನಿ ಜರ್ನಿಯ ಬಗ್ಗೆ ಗಾಯತ್ರಿ ಜಯರಾಮನ್ ಅವರು 'ಈಟಿವಿ ಭಾರತ'ದೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅಭಿನಯದ ಬಗ್ಗೆ ತಿಳಿಯದೆ ನಟಿ ಗಾಯತ್ರಿ ಜಯರಾಮನ್ ಸಿನಿಮಾರಂಗಕ್ಕೆ ಕಾಲಿಟ್ಟರು. ಇವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ತಮಿಳಿನ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಮೊದಲ ಬಾರಿಗೆ ಸೀರಿಸ್​ನಲ್ಲಿ ನಟಿಸಲು ಆಫರ್​ ನೀಡಿದ್ರಂತೆ. ಆದರೆ ನನಗೆ ನಟನೆ ಬರುವುದಿಲ್ಲ ಎಂದು ರಿಜೆಕ್ಟ್​ ಮಾಡಿದ್ದರು. ಆಗ ನನ್ನ ತಾಯಿ ಬೈದು ನಟಿಸುವಂತೆ ಹೇಳಿದ್ದರು. ಹೀಗೆ ಗಾಯತ್ರಿಯವರು ಚಿತ್ರರಂಗವನ್ನು ಪ್ರವೇಶಿಸಿದರು.

ನೀಲಾ ಖ್ಯಾತಿಯ ಗಾಯತ್ರಿ ಜಯರಾಮನ್

ಬಳಿಕ ನಿರ್ದೇಶಕ ಬಾಲಚಂದರ್ ಅವರು ಸ್ನೇಹಿತರಾಗಿದ್ದ ಟಿ.ಎಸ್. ನಾಗಾಭರಣ ಅವರು ಗಾಯತ್ರಿ ಅವರನ್ನು ನೋಡಿ ನೀಲಾ ಸಿನಿಮಾಗೆ ಆಯ್ಕೆ ಮಾಡಿದ್ದರು. ಅಭಿನಯ ಹೇಳಿ ಕೊಟ್ಟು ಸಿನಿಮಾದಲ್ಲಿ ನಟಿಸಲು ಪ್ರೇರೇಪಿಸಿದರಂತೆ.

ನೀಲಾ‌ ಸಿನಿಮಾ ರಿಲೀಸ್ ಆಗಿ 21 ವರ್ಷವಾದರೂ ಇವತ್ತಿಗೂ ಜನ‌ ನನ್ನನ್ನು ಗುರುತಿಸುತ್ತಾರೆ. ಇನ್ನು ನಟಿ ಖೂಷ್ಬೂ, ಮೀನಾ ಅವರ ರೀತಿ 20 ವರ್ಷಗಳ ಕಾಲ ಹೀರೋಯಿನ್ ಆಗಿ ನಟಿಸಲು ಆಗೋಲ್ಲ. ಇವತ್ತು ಒಂದು ಸಿನಿಮಾ ಆದಮೇಲೆ ಆ ನಟಿಯ ಬಗ್ಗೆ ಸುದ್ದಿನೇ ಇರೋಲ್ಲ. ಇವತ್ತು ನಟಿಯಾಗಿದ್ದೇನೆ ಅಂದರೆ ಇದರ ಸಂಪೂರ್ಣ ಕ್ರೆಡಿಟ್ ನಾಗಾಭರಣ ಸರ್​ಗೆ ಸಲ್ಲುತ್ತದೆ. ನೀಲಾ ಸಿನಿಮಾದಲ್ಲಿ ಅನಂತ್ ನಾಗ್ ಸಾರ್ ಸ್ಕ್ರೀನ್ ಹಂಚಿಕೊಂಡಿದ್ದು ಮರೆಯೋದಿಕ್ಕೆ ಆಗೋಲ್ಲ. ನಾನು ಅಭಿನಯಿಸಿರುವ 21 ಸಿನಿಮಾಗಳಲ್ಲಿ ನೀಲಾ ದಿ ಬೆಸ್ಟ್ ಸಿನಿಮಾ ಅಂತಾರೆ ನಟಿ ಗಾಯತ್ರಿ.

ನೀಲಾ ಖ್ಯಾತಿಯ ಗಾಯತ್ರಿ ಜಯರಾಮನ್

ನಟ- ನಟಿಯರು ವಿದೇಶದ ರಸ್ತೆಗಳಲ್ಲಿ ಡ್ಯಾನ್ಸ್ ಮಾಡೋದನ್ನು ನೋಡಿ ನಾನು ನಕ್ಕು ನಕ್ಕು ಸುಸ್ತಾಗಿದ್ದೆ. ಆದರೆ ಸ್ವಾಮಿ ಸಿನಿಮಾಕ್ಕಾಗಿ ಟರ್ಕಿ ರಸ್ತೆಯಲ್ಲಿ ದರ್ಶನ್ ಜೊತೆ ನಾನು ಡ್ಯಾನ್ಸ್ ಮಾಡಿದ ಕ್ಷಣ ಮಾತ್ರ ಮರೆಯೋದಿಕ್ಕೆ ಆಗೋಲ್ಲ ಎಂದು ಸ್ವಾಮಿ ಚಿತ್ರದ ಅನುಭವವನ್ನು ಗಾಯತ್ರಿ ಬಿಚ್ಚಿಟ್ಟರು.

ನಾನು ತಮಿಳಿನಲ್ಲಿ ಮೂರು ಸಿನಿಮಾ ಒಪ್ಪಿಕೊಂಡಿದ್ದೆ, ಹಾಗಾಗಿ ಸ್ವಾಮಿ ಸಿನಿಮಾ‌ ಟೈಮ್​​ನಲ್ಲೇ ನಾನು ಬ್ರೇಕ್ ತೆಗೆದುಕೊಂಡೆ. ಕನ್ನಡದಲ್ಲಿ ನಟಿಸೋಕ್ಕೆ ಆಗಿಲಿಲ್ಲ. ಆಗ ನಾನು ಸಿನಿಮಾ ಸಾಕು ಎಂದೇಳಿ ನನಗೆ ಇಷ್ಟವಾದ ಸ್ಕೂಬಾ ಡೈವಿಂಗ್ ಟ್ರೈನರ್ ಆಗಿ‌ ಕೆಲಸ ಮಾಡಿದೆ. ಅದು ನನಗೆ ಇಷ್ಟವಾದ ಕೆಲಸವಾಗಿದೆ ಎಂದರು.

ಈಗ ನನಗೆ‌ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನಾನು ಬೆಂಗಳೂರಿನಲ್ಲಿ 6 ವರ್ಷ ಜಕ್ಕೂರುನಲ್ಲಿದ್ದೆ, ಯಾರಿಗೂ ಗೊತ್ತಿರಲಿಲ್ಲ. ನನ್ನ ಪತಿ ಉದ್ಯಮಿ. ಈಗ ನಾವು ಚೆನ್ನೈನಲ್ಲಿ ವಾಸವಾಗಿದ್ದೇವೆ ಎಂದು ತಮ್ಮ ಕುಟುಂಬ ಜೀವನದ ಬಗ್ಗೆಯೂ ಗಾಯತ್ರಿ ಮಾಹಿತಿ ಹಂಚಿಕೊಂಡರು.

Neela movie actress Gayatri
ನೀಲಾ ಖ್ಯಾತಿಯ ಗಾಯತ್ರಿ ಜಯರಾಮನ್

ಈಗ ಲೂಸ್ ಮಾದ ಯೋಗಿ ಅಭಿನಯದ ಲಂಕೆ ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾ ಬಳಿಕ ಕನ್ನಡದಲ್ಲಿ ಮತ್ತೆ ಅವಕಾಶಗಳು ಬಂದರೆ ನಾನು ಮಾಡುತ್ತೀನಿ. ಆದರೆ ನನಗೆ ನಟಿಯಾಗಿದ್ದ ಸಮಯದಲ್ಲಿ ವರ್ಸಟೈಲ್ ಪಾತ್ರ ಮಾಡೋದಕ್ಕೆ ಇಷ್ಟ ಇತ್ತು. ಆದರೆ ಸಾಧ್ಯವಾಗಿರಲಿಲ್ಲ. ಈಗ ಆ ರೀತಿಯ ಪಾತ್ರಗಳನ್ನು ಮಾಡುವ ಹಂಬಲ ಇದೆ ಎಂದು ಗಾಯತ್ರಿ ಅವರು ಈಟಿವಿ ಭಾರತದೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿದರು.

ಓದಿ: ಸತೀಶ್​ ನೀನಾಸಂ ತಮಿಳು ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿದ ಮೋಹಕ ತಾರೆ!!

Last Updated : Sep 8, 2021, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.