ಅಂಬಿ ನಮ್ಮೊಂದಿಗಿಲ್ಲ ಎಂಬ ನೋವು ಶಾಶ್ವತ, ಅವರ ಜೀವನವೇ ನಮಗೆ ಶಕ್ತಿ: ಸುಮಲತಾ

author img

By

Published : Nov 24, 2021, 12:12 PM IST

Updated : Nov 24, 2021, 12:58 PM IST

mp-sumalata-reactin-on-actor-ambareesh-death-anniversary

ಅಂಬರೀಶ್ ಯಾವುದೇ ಸ್ಥಾನ, ಪ್ರಶಸ್ತಿಯನ್ನು ಲಾಬಿ ಮಾಡಿ ಪಡೆದುಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಹೋರಾಟ ಎಂಬ ಪದ ಉಪಯೋಗಿಸಬಾರದು ಎಂದು ಸುಮಲತಾ ಹೇಳಿದರು.

ಬೆಂಗಳೂರು: ಇಂದು ಅಂಬರೀಶ್​ ಅವರ ಮೂರನೇ ಪುಣ್ಯ ಸ್ಮರಣೆ ಅವರು ನಮ್ಮೊಂದಿಗಿಲ್ಲ ಎಂಬ ನೋವು ಶಾಶ್ವತ. ಅವರು ಜೀವನದಲ್ಲಿ ನಡೆದುಕೊಂಡು ಬಂದಿರುವ ಹಾದಿ ನಮಗೆ ಶಕ್ತಿ ಎಂದು ಸಂಸದೆ ಸುಮಲತಾ ಅಂಬರೀಶ್ ​ಹೇಳಿದರು.

ಅಂಬರೀಶ್​ ಪುಣ್ಯಸ್ಮರಣೆ ವೇಳೆ ಮಾತನಾಡಿದ ಅವರು, ಅಂಬಿ ಅಂಥವರನ್ನು ಕಳೆದುಕೊಂಡ ಮೇಲೆ ಧೈರ್ಯ ಬೇಕಾಗುತ್ತದೆ, ಅವರೊಂದಿಗೆ ಕಳೆದ ಸಮಯ ನೆನಪಿಸಿಕೊಂಡ್ರೆ ಆ ಧೈರ್ಯ ಬರುತ್ತೆ ಎಂದರು.

ಅಂಬರೀಶ್ ಅವರು ಸಮಾಜಮುಖಿ ಕೆಲಸಗಳನ್ನು ತೋರಿಕೆಗಾಗಿ ಮಾಡದೇ, ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸಿದ್ದರು. ಅಂತಹ ಕಾರ್ಯಗಳನ್ನು ಮುಂದುವರಿಸಲು ಡಾ.ಅಂಬರೀಶ್ ಚಾರಿಟಬಲ್ ಟ್ರಸ್ಟ್ ಮಾಡಿದ್ದೇವೆ. ಅಂಬಿ ಕನಸು ಈ ಟ್ರಸ್ಟ್ ಮೂಲಕ ಮುಂದುವರೆಸುತ್ತಿದ್ದೇವೆ ಎಂದು ಹೇಳಿದರು.

ನಮ್ಮೊಂದಿಗಿಲ್ಲ ಎಂಬ ನೋವು ಶಾಶ್ವತ, ಅವರ ಜೀವನವೇ ನಮಗೆ ಶಕ್ತಿ: ಸುಮಲತಾ

ಈ ಫೌಂಡೇಶನ್ ಮೂಲಕ ಕ್ರೀಡೆ, ಕಲಾವಿದರನ್ನು ಪ್ರೋತ್ಸಾಹಿಸುತ್ತೇವೆ. ಗ್ರಾಮೀಣ ಪ್ರತಿಭೆಗಳನ್ನು ಹೊರತರುವ ಕೆಲಸ ಮಾಡುತ್ತೇವೆ. ಕೋವಿಡ್ ಸಂದರ್ಭದಲ್ಲಿ ಏನೂ ಮಾಡಲು ಆಗಿಲ್ಲ. ಈ ಫೌಂಡೇಶನ್ ಮೂಲಕ ಅಂಬರೀಶ್ ಮಾಡುವ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಅಂಬರೀಶ್ ಯಾವುದೇ ಸ್ಥಾನ, ಪ್ರಶಸ್ತಿಯನ್ನು ಲಾಬಿ ಮಾಡಿ ಪಡೆದುಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಹೋರಾಟ ಎಂಬ ಪದ ಉಪಯೋಗಿಸಬಾರದು ಎಂದರು.

ಒಳ್ಳೆಯ ಅಭ್ಯರ್ಥಿಗೆ ಬೆಂಬಲ:

ಮಂಡ್ಯ ವಿಧಾನಪರಿಷತ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮದು ಯಾರ ಪರವಾಗಿ ಬೆಂಬಲ ಅಂತಾ ಹೇಳುವುದಿಲ್ಲ. ಮಂಡ್ಯ ಜಿಲ್ಲೆಗೆ ಯಾರು ಒಳ್ಳೆಯ ಅಭ್ಯರ್ಥಿಯೋ ಅವರಿಗೆ ಬೆಂಬಲಿಸುತ್ತೇನೆ ಎಂದ ಸುಮಲತಾ ಇದೇ ವೇಳೆ, ಕೆಆರ್​​ಎಸ್ ಭಾಗದಲ್ಲಿನ ಗಣಿಗಾರಿಕೆ ವಿಚಾರದಲ್ಲಿ ನನ್ನ ಹೋರಾಟ ನಿಲ್ಲಿಸಲ್ಲ ಎಂದು ಹೇಳಿದರು.

ಇದನ್ನೂ ಓದಿ: ಅಂಬಿ 3ನೇ ವರ್ಷದ ಪುಣ್ಯಸ್ಮರಣೆ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

Last Updated :Nov 24, 2021, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.