ETV Bharat / sitara

ಸಿಕ್ಕಿಂನಲ್ಲಿ ಜೊತೆಯಾಗಿ ಕಾಲ ಕಳೆಯುತ್ತಿರುವ ಬಿಲ್ಲಾ ರಂಗಾ

author img

By

Published : Mar 15, 2021, 6:51 PM IST

ಆಚಾರ್ಯ ಸಿನಿಮಾದಲ್ಲಿ ಬ್ಯುಸಿ ಇರುವ ಚಿರಂಜೀವಿ, ಸನ್ ಆಫ್ ಇಂಡಿಯಾ ಚಿತ್ರದಲ್ಲಿ ಬ್ಯುಸಿ ಇರುವ ಮೋಹನ್ ಬಾಬು ಚಿತ್ರೀಕರಣದಿಂದ ಬಿಡುವು ಪಡೆದು ಸಿಕ್ಕಿಂಗೆ ತೆರಳಿ ಜೊತೆಯಾಗಿ ಕಾಲ ಕಳೆಯುತ್ತಿದ್ದಾರೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Mohan babu and Chiranjeevi
ಬಿಲ್ಲಾ ರಂಗಾ

ಟಾಲಿವುಡ್​ ನಟರಾದ ಚಿರಂಜೀವಿ ಹಾಗೂ ಮೋಹನ್ ಬಾಬು ಆಪ್ತ ಸ್ನೇಹಿತರು ಎಂಬುದು ತಿಳಿದ ವಿಚಾರ. ತಮ್ಮ ತಮ್ಮ ಕರಿಯರ್​​​ನಲ್ಲಿ ಬ್ಯುಸಿ ಇರುವ ಇಬ್ಬರೂ ಆಗಾಗ್ಗೆ ಬಿಡುವು ಮಾಡಿಕೊಂಡು ಭೇಟಿಯಾಗುತ್ತಿರುತ್ತಾರೆ. ಇದೀಗ ಬಹಳ ದಿನಗಳ ನಂತರ ಒಟ್ಟಿಗೆ ಭೇಟಿ ಆಗಿರುವ ಇವರು ಸಿಕ್ಕಿಂಗೆ ತೆರಳಿದ್ದಾರೆ.

ಈ ಇಬ್ಬರೂ ನಟರು ಸಿಕ್ಕಿಂಗೆ ತೆರಳಿರುವ ವಿಚಾರವನ್ನು ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಸಿಕ್ಕಿಂನಲ್ಲಿ ಬಿಲ್ಲಾ ರಂಗ. ನಿಮ್ಮಲ್ಲಿ ಎಷ್ಟು ಮಂದಿ ಈ ಜೋಡಿಯನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದಿರಿ..? ಚಿರಂಜೀವಿ ಅಂಕಲ್ ಹಾಗೂ ನನ್ನ ತಂದೆ ಜೊತೆ ಸೇರಿ ಸಮಯ ಕಳೆಯುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ಮುಂದೊಂದು ದಿನ ನಾವೆಲ್ಲರೂ ನಿಮ್ಮೊಂದಿಗೆ ಬಂದು ಹೀಗೆ ಸಮಯ ಕಳೆಯುತ್ತೇವೆ" ಎಂದು ಲಕ್ಷ್ಮಿ ಮಂಚು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಾಲ್ಕು ದಿನಕ್ಕೆ 'ರಾಬರ್ಟ್' ಬಾಕ್ಸ್ ಆಫೀಸ್​ ಕೊಳ್ಳೆ ಹೊಡೆದಿದ್ದೆಷ್ಟು ಗೊತ್ತಾ..?

ಚಿರಂಜೀವಿ ಹಾಗೂ ಮೋಹನ್ ಬಾಬು ಅವರು ನಟಿಸಿದ ಬಿಲ್ಲ ರಂಗಾ, ಪಟ್ನಂ ವಚ್ಚಿನ ಪತಿವ್ರತಲು, ಕಿರಾಯಿ ರೌಡಿಲು ಸಿನಿಮಾಗಳು 90 ರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದವು. ಸದ್ಯಕ್ಕೆ ಚಿರಂಜೀವಿ 'ಆಚಾರ್ಯ' ಚಿತ್ರದಲ್ಲಿ ಬ್ಯುಸಿ ಇದ್ದರೆ ಮೋಹನ್ ಬಾಬು 'ಸನ್ ಆಫ್​​​​ ಇಂಡಿಯಾ' ಚಿತ್ರದಲ್ಲಿ ಬ್ಯುಸಿ ಇದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.