ETV Bharat / sitara

ಅಪರೂಪದ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಭಾವುಕರಾದ ಮಾನ್ವಿತಾ

author img

By

Published : Aug 8, 2020, 1:12 PM IST

ತಂದೆ ಜೊತೆ ಇರುವ ಒಂದು ಫೊಟೋ ಕೂಡಾ ನನ್ನ ಬಳಿ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದ ನಟಿ ಮಾನ್ವಿತಾ ಕಾಮತ್​​ಗೆ ಆಕೆ ಸ್ನೇಹಿತರೊಬ್ಬರು ಪೆನ್ಸಿಲ್ ಸ್ಕೆಚ್ ಬರೆದುಕೊಟ್ಟಿದ್ದಾರೆ. ಈ ಫೋಟೋವನ್ನು ತಮ್ಮ ಸೋಷಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡು ಮಾನ್ವಿತಾ ಸಂತೋಷ ವ್ಯಕ್ತಪಡಿಸಿದ್ದಾರೆ.

Manvita kamath s
ಮಾನ್ವಿತಾ ಕಾಮತ್

'ಚೌಕ' ಚಿತ್ರದಲ್ಲಿ ಮಾನ್ವಿತಾ ಕಾಮತ್, ಕಾಶಿನಾಥ್ ಅವರೊಂದಿಗೆ 'ಅಪ್ಪ ಐ ಲವ್​ ಯು ಪಾ' ಎಂದು ಹಾಡಿ ಕುಣಿದಿದ್ದರು. ಇದೀಗ ನಿಜ ಜೀವನದಲ್ಲಿ ಕೂಡಾ ಮಾನ್ವಿತಾ ತಮ್ಮ ತಂದೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಮಾನ್ವಿತಾ ತಂದೆ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಫಾದರ್ಸ್ ಡೇ ಯಂದು ತಮ್ಮ ಹಾಗೂ ಅಪ್ಪನ ಫೋಟೋವನ್ನು ಜೊತೆ ಸೇರಿಸಿ ಆ ನೆನಪನ್ನು ಇನ್ಸ್​​ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದರು. ಆದರೆ ಅಪ್ಪನೊಂದಿಗೆ ಬಾಲ್ಯದಲ್ಲಿ ತೆಗೆಸಿಕೊಂಡ ಯಾವುದೇ ಫೋಟೋ ಇಲ್ಲ ಎಂದು ಮಾನ್ವಿತಾ ಕಾಮತ್ ಅನೇಕ ಬಾರಿ ಬೇಸರ ಮಾಡಿಕೊಂಡಿದ್ದರಂತೆ. ಆದರೆ ಈಗ ಅವರ ಬೇಸರ ಸ್ವಲ್ಪ ಕಡಿಮೆ ಆಗಿದೆಯಂತೆ.

ಮಾನ್ವಿತಾ ಸ್ನೇಹಿತರೊಬ್ಬರು ಅಪ್ಪ-ಮಗಳು ಜೊತೆಗೆ ಇರುವಂತೆ ಒಂದು ಪೆನ್ಸಿಲ್ ಸ್ಕೆಚ್ ಮಾಡಿಕೊಟ್ಟಿದ್ದಾರೆ. ಈ ಫೋಟೋವನ್ನು ಕೂಡಾ ಮಾನ್ವಿತಾ ತಮ್ಮ ಇನ್ಸ್​​​ಟಾಗ್ರಾಮ್​​ನಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಇದೊಂದು ಮಧುರ ಘಳಿಗೆ ಎಂದು ಕೂಡಾ ಹೇಳಿಕೊಂಡಿದ್ದಾರೆ. ಅಲ್ಲದೆ ಪೆನ್ಸಿಲ್​ ಸ್ಕೆಚ್ ಬರೆದ ಸ್ನೇಹಿತನಿಗೂ ಧನ್ಯವಾದ ಅರ್ಪಿಸಿದ್ದಾರೆ.

  • " class="align-text-top noRightClick twitterSection" data="">
ETV Bharat Logo

Copyright © 2024 Ushodaya Enterprises Pvt. Ltd., All Rights Reserved.