ETV Bharat / sitara

ಬಿಗ್​ಬಾಸ್​ - 8: ಕ್ಯಾಪ್ಟನ್ ಆಗಿ ಮಂಜು ಪಾವಗಡ ಆಯ್ಕೆ

author img

By

Published : Apr 3, 2021, 11:10 AM IST

ಈ ವಾರ ಬಿಗ್​ಬಾಸ್ ಮನೆಯ ನಾಯಕತ್ವ ಜವಾಬ್ದಾರಿ ಮಂಜು ಪಾವಗಡ ಹೆಗಲಿಗೆ ಬಿದ್ದಿದೆ, ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಮಂಜು ಪಾವಗಡ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

manju  pavgada selected as captain
ಕ್ಯಾಪ್ಟನ್ ಆಗಿ ಮಂಜು ಪಾವಗಡ

ಈ ವಾರ ಬಿಗ್​ಬಾಸ್ ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಮಂಜು ಪಾವಗಡ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

manju  pavgada selected as captain
ಕ್ಯಾಪ್ಟನ್ ಆಗಿ ಮಂಜು ಪಾವಗಡ

ಮಂಜು ಪಾವಗಡ ಕ್ಯಾಪ್ಟನ್ ಆಗುತ್ತಿದ್ದಂತೆ ಅವರ ತಂದೆಯ ಧ್ವನಿ ಕೇಳಿ ಬಂದಿದೆ. ನೀನು ಕ್ಯಾಪ್ಟನ್ ಆಗಿರುವುದು ನಮಗೆ ಸಂತೋಷ ತಂದಿದೆ ಇದುವರೆಗೂ ಹೇಗೆ ಆಡುತ್ತಿದ್ದಿಯೋ, ಹಾಗೆಯೇ ಆಡು. ಎಲ್ಲರ ಪ್ರೀತಿ ವಿಶ್ವಾಸ ಗಳಿಸು. ನೀನು ಮೂರು ತಿಂಗಳ ಹಿಂದೆ ಬಿದ್ದು ಕೈ ಪೆಟ್ಟು ಮಾಡಿಕೊಂಡಿರುವುದು ತಿಳಿದು‌ ತುಂಬಾ ನೋವಾಯಿತು. ನಾವು ಏನೇ ಆದರೂ ನಿನ್ನ ಜೊತೆ ಇರುತ್ತೇವೆ, ಕಷ್ಟ-ಸುಖ ನೋಡಿಕೊಳ್ಳೋಕೆ ಜೊತೆಗಿರುತ್ತೇವೆ ಎಂದು ಮಂಜು ಪಾವಗಡ ತಂದೆ ಹನುಮಂತ ರಾಯಪ್ಪ ಹೇಳಿದರು.

manju  pavgada selected as captain
ಬಿಗ್​ಬಾಸ್​-8

ಇದಕ್ಕೆ ಭಾವುಕರಾಗಿ ಮಂಜು ನಾನು ನನ್ನ ತಂದೆಯನ್ನು ತಬ್ಬಿ ಕೊಂಡಿಲ್ಲ ಎಂದಿದ್ದಾರೆ. ನಾನು ಏನಿದ್ದರೂ ಅಮ್ಮನ ಹತ್ತಿರ ಮಾತನಾಡುವುದು, ನನ್ನ ತಮ್ಮ ಹಾಗಲ್ಲ ಎಂದು ಮನಸ್ಸು ಬಿಚ್ಚಿ ಮಂಜು ಮಾತನಾಡಿದರು.

manju  pavgada selected as captain
ಕ್ಯಾಪ್ಟನ್ ಆಗಿ ಮಂಜು ಪಾವಗಡ ಆಯ್ಕೆ

ಮತ್ತೊಂದೆಡೆ ವಿಶ್ವ ಹಾಗೂ ಮಂಜು ವೈಲ್ಡ್​ ಕಾರ್ಡ್ ಎಂಟ್ರಿ ಬೇಡ ಎಂದು ಮಾತನಾಡಿಕೊಂಡರು. ನಾವು ಎಲ್ಲರೊಂದಿಗೂ ಇಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಆದರೆ, ವೈಲ್ಡ್​ ಕಾರ್ಡ್ ಎಂಟ್ರಿಯಿಂದ ಎಲ್ಲವೂ ತಲೆಕೆಳಗಾಗುತ್ತದೆ. ‌ ಚಂದ್ರಚೂಡ್ ಸೇರಿದಂತೆ ಯಾರು ಬೇಡ ಎಂಬುದು ನಮ್ಮ ಅಭಿಪ್ರಾಯ ಎಂದು ಮಾತನಾಡಿಕೊಂಡರು. ಆದರೆ ಶುಭ ಪೂಂಜಾ, ಯಾರೇ ಬಂದರೂ ನಾವು ನಮ್ಮ ರೀತಿಯಲ್ಲಿ ಆಡಬೇಕು ಎಂದು ವಿಶ್ವ ಅವರನ್ನು ಸಮಾಧಾನಪಡಿಸಿದರು.

manju  pavgada selected as captain
ಕ್ಯಾಪ್ಟನ್ ಆಗಿ ಮಂಜು ಪಾವಗಡ

ಇವರ ಕಳಪೆ ಪ್ರದರ್ಶನಕ್ಕಾಗಿ ಮತ್ತೊಮ್ಮೆ ಶಂಕರ್ ಅಶ್ವತ್ಥ್ ಅವರು ಜೈಲು ಪಾಲಾಗಿದ್ದಾರೆ. ಮೂಲಗಳ ಪ್ರಕಾರ ಇಂದು ವೀಕೆಂಡ್ ವಿತ್ ಸುದೀಪ್​ ಕಾರ್ಯಕ್ರಮದಲ್ಲಿ ಎಲಿಮಿನೇಷನ್ ನಡೆಯುವುದು ಎನ್ನಲಾಗಿದೆ.

manju  pavgada selected as captain
ಕ್ಯಾಪ್ಟನ್ ಆಗಿ ಮಂಜು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.