ETV Bharat / sitara

KGF: ಚಾಪ್ಟರ್​ 2 ಸಿನಿಮಾದಿಂದ ಹೊಸ ಮಾಹಿತಿ; ಕಾದು ಕುಳಿತಿರುವ ಸಿನಿ ರಸಿಕರಿಗೆ ಖುಷಿ ವಿಚಾರ ಹಂಚಿಕೊಂಡ ಚಿತ್ರ ತಂಡ

author img

By

Published : Mar 3, 2022, 1:10 PM IST

ಬಹುನಿರೀಕ್ಷಿತ ಯಶ್​ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಚಿತ್ರದ ಟ್ರೇರಲ್ ಬಿಡುಗಡೆಗಾಗಿ ಕಾದು ಕುಳಿತಿರುವ ಸಿನಿ ರಸಿಕರಿಗೆ ಖುಷಿ ವಿಚಾರವೊಂದನ್ನು ತಿಳಿಸಿದೆ.

KGF Chapter 2 movie trailer will be released on March 27
KGF Chapter 2 movie trailer will be released on March 27

ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್​ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲೇ ಇದೆ. ನಿರ್ಮಾಣದ ಹೊಣೆಹೊತ್ತಿಕೊಂಡಿರುವ ಹೊಂಬಾಳೆ ಫಿಲ್ಸ್ಮ್​ ಸಂಸ್ಥೆಯಿಂದ ಇಂದು ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಚಿತ್ರದ ಟ್ರೇಲರ್​ಗಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಖುಷಿ ವಿಚಾರವೊಂದನ್ನು ತಿಳಿಸಿದೆ.

‘ಕೆಜಿಎಫ್​ 2’ ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡುತ್ತಿರುವ ಚಿತ್ರ. ದೇಶಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದಾರೆ. ಬೇಸತ್ತಿರುವ ಸಿನಿ ರಸಿಕರ ಜೋಶ್​ ಹೆಚ್ಚಿಸಲು ಇದೇ ಮಾ.​ 27ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ಯಶ್‌ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಟ್ರೇಲರ್ ಮಾರ್ಚ್ 27ರಂದು ಸಂಜೆ 6.40ಕ್ಕೆ ರಿಲೀಸ್ ಆಗಲಿದೆ. 'ಯಾವಾಗಲೂ ಕೂಡ ಮಿಂಚು ಬರುವ ಮುನ್ನ ಗುಡುಗು ಬರುತ್ತದೆ..' ಎಂದು ಟ್ರೇಲರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ ಚಿತ್ರತಂಡ. ಟ್ರೇರಲ್​ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆಗೆ ಇದೀಗ ಅಧಿಕೃತ ಉತ್ತರ ಸಿಕ್ಕಿದಂತಾಗಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದ್ದು ಬಿಡುಗಡೆಗಾಗಿಯೂ ಸಹ ಕಾದು ಕುಳಿತಿದ್ದಾರೆ. ಕೊರೊನಾ ಕಾರಣದಿಂದ ಚಿತ್ರದ ಬಿಡುಗಡೆಯನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಹಾಗಾಗಿ ಅಭಿಮಾನಿಗಳು ಬಹಳ ನಿರಾಸೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬಾಲಿವುಡ್​ಗೆ ಮೂರು ಹೊಸ ಮುಖಗಳ ಪರಿಚಯ: 'ಬೇಧಡಕ್​' ಚಿತ್ರದ ಪೋಸ್ಟರ್‌ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.