ETV Bharat / sitara

ಬಿಗ್​ ಬಾಸ್​ ಮನೆಯಲ್ಲಿ ಕಿಂಗ್​ ಆದ ಜೈ ಜಗದೀಶ್​... ಕುರಿಗೆ ಮಂತ್ರಿ ಸ್ಥಾನ

author img

By

Published : Oct 30, 2019, 11:44 AM IST

ಬಿಗ್​ಬಾಸ್​ ಮನೆಯಲ್ಲಿ ಮೂರನೇ ವಾರ ನೀಡಿದ ಕಠಿಣ ಟಾಸ್ಕ್​ ಅನ್ನು ಯಶಸ್ವಿಯಾಗಿ ಪೂರೈಸಿದ ಹಿರಿಯ ನಟ ಜೈ ಜಗದೀಶ್​ ಅವರನ್ನು ರಾಜನಾಗಿ ಪಟ್ಟಾಭಿಷೇಕ ಮಾಡಲಾಗಿದ್ದು, ಕುರಿ ಪ್ರತಾಪ್​ ಅವರನ್ನು ಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಜೈ ಜಗದೀಶ್​ ಕ್ಯಾಪ್ಟನ್

ಬಿಗ್​ಬಾಸ್​ ಮನೆಯಲ್ಲಿ ಮೂರನೇ ವಾರ ನೀಡಿದ ಕಠಿಣ ಟಾಸ್ಕ್​ ಅನ್ನು ಯಶಸ್ವಿಯಾಗಿ ಪೂರೈಸಿದ ಹಿರಿಯ ನಟ ಜೈ ಜಗದೀಶ್​ ಅವರನ್ನು ರಾಜನಾಗಿ ಪಟ್ಟಾಭಿಷೇಕ ಮಾಡಲಾಗಿದ್ದು, ಕುರಿ ಪ್ರತಾಪ್​ ಅವರನ್ನು ಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ಗುರಿಯಿಟ್ಟು ಬೋರ್ಡ್​ಗೆ ಹೊಡೆಯುವ ಹಾಗೂ ಕತ್ತಿಯ ಮೇಲೆ ಬಿಲ್ಲೆಗಳನ್ನು ಜೋಡಿಸುವ ಟಾಸ್ಕ್​ಅನ್ನು ಸ್ಪರ್ಧಿಗಳಿಗೆ ನೀಡಲಾಯಿತು. ಎರಡನೇ ಹಂತದ ಸ್ಪರ್ಧೆಗೆ ವಾಸುಕಿ ವೈಭವ್​, ಜೈ ಜಗದೀಶ್​ ಹಾಗೂ ಶೈನ್​ ಮಾತ್ರ ಆಯ್ಕೆಯಾಗಿದ್ದರು.

jai jagadeesh captain in big boss house
ಮಂತ್ರಿಯಾದ ಕುರಿ!

ಆಯ್ಕೆಯಾಗುವ ದೊರೆಗಾಗಿ ಬಿಗ್ ಬಾಸ್ ಮನೆಯಲ್ಲಿ ಸಿಂಹಾಸನ ಹಾಕಲಾಗಿತ್ತು. ಜೈಜಗದೀಶ್​ಗೆ ವಿಶೇಷ ಸೌಲಭ್ಯ ನೀಡಿರುವ ಬಿಗ್ ಬಾಸ್, ಅವರ ಆಜ್ಞೆಯಂತೆ ಮನೆಯವರು ನಡೆದುಕೊಳ್ಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಹಾಗೂ ಒಳ್ಳೆ ಕೆಲಸ ಮಾಡಿದವರಿಗೆ ಬಹುಮಾನ ಕೂಡ ​ನೀಡಬಹುದು.

ಜೈ ಜಗದೀಶ್​ ಕ್ಯಾಪ್ಟನ್​ ಆದ್ರೆ ಮಂತ್ರಿಯಾಗಿ ಕುರಿಪ್ರತಾಪ್ ಆಯ್ಕೆಯಾಗಿದ್ದು ಸೇನಾಧಿಪತಿಯಾಗಿ ಶೈನ್​ ಶೆಟ್ಟಿ ಹಾಗೂ ಕಿಶನ್ ಇದ್ದಾರೆ. ವಾಸುಕಿ ಹಾಡನ್ನು ಹಾಡಿದರೆ, ಚಂದನಾ ನೃತ್ಯದ ಮೂಲಕ ಜೈ ಜಗದೀಶ್ ಅವರನ್ನು ರಂಜಿಸಿದರು.

  • ರಾಜಾದಿ ರಾಜ, ದೊಡ್ಮನೆ ಧಣಿ ಜೈ ಜಗದೀಶ್ ಮಹಾಪ್ರಭುಗಳಿಗೆ ವಾಸುಕಿಯ ಸ್ವರ ನಮನ! ನೀವೂ ಕೂಡ ಬಹುಪರಾಕ್ ಹೇಳ್ರಪ್ಪಾ!

    ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/dEPHnm1LRv

    — Colors Kannada (@ColorsKannada) October 29, 2019 " class="align-text-top noRightClick twitterSection" data=" ">
Intro:Body:ಮೂರನೇ ವಾರದ ಕ್ಯಾಪ್ಟನ್ ಆಗಿ ಜೈಜಗದೀಶ್ ಮೂರನೇ ತಾತನಾಗಿ ಆಯ್ಕೆಯಾಗಿದ್ದಾರೆ.
ಬಿಗ್ ಬಾಸ್ ನೀಡಿದ ಕತೆಯೊಂದರ ಮೇಲೆ ಬಿಲ್ಲೆಗಳನ್ನು ಜೋಡಿಸಿ ಬ್ಯಾಲೆನ್ಸ್ ಮಾಡುವ ಕಾಸಿನಲ್ಲಿ ಜೈಜಗದೀಶ್ ಕೊನೆತನಕ ಬಿಲ್ಲುಗಳನ್ನು ಕಾಯ್ದುಕೊಳ್ಳುತ್ತಾರೆ ಹೀಗಾಗಿ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಯಿತು.

https://www.facebook.com/102459466602897/posts/1398202180361946/

ಹೊಸ ಕ್ಯಾಪ್ಟನ್ ಹಾಕಿ ಗಾಗಿ ಬಿಗ್ ಬಾಸ್ ಮನೆಯಲ್ಲಿ ಸಿಂಹಾಸನ ಹಾಕಲಾಗಿತ್ತು ಕ್ಯಾಪ್ಟನ್ ಗೆ ವಿಶೇಷ ಸೌಲಭ್ಯ ನೀಡಿರುವ ಬಿಗ್ ಬಾಸ್, ಜೈಜಗದೀಶ್ ಅವರಿಗೆ ಸಿಂಹಾಸನ ನೀಡಿದ್ದು ಅವರ ಆಜ್ಞೆಯಂತೆ ಮನೆಯವರು ನಡೆದುಕೊಳ್ಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಹಾಗೂ ಒಳ್ಳೆ ಕೆಲಸ ಮಾಡಿದವರಿಗೆ ಬಹುಮಾನ ಕೂಡ ನೀಡಬಹುದು.
ಮಂತ್ರಿ ಆಗಿ ಕುರಿಪ್ರತಾಪ್ ಆಯ್ಕೆಯಾಗಿದ್ದು ಸೇನಾಧಿಪತಿಯಾಗಿ ಶೈನ್ ಶೆಟ್ಟಿ ಹಾಗೂ ಕಿಶನ್ ಇದ್ದಾರೆ. ವಾಸುಕಿ ಹಾಡನ್ನು ಹಾಡಿ ಜೈ ಜಗದೀಶ್ ಅವರನ್ನು ರಂಜಿಸುತ್ತಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.