ETV Bharat / sitara

ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಇಂದ್ರಜಿತ್ ಲಂಕೇಶ್​

author img

By

Published : Jan 26, 2021, 12:10 PM IST

ಕನ್ನಡ ಸಿನಿಮಾ ಗಣ್ಯರ ಹೆಸರಿನಲ್ಲಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಪ್ರತಿ ವರ್ಷ ನೀಡುತ್ತಾ ಬಂದಿದ್ದ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯನ್ನು ಈ ವರ್ಷ ನಾಲ್ವರಿಗೆ ನೀಡಲಾಗಿದೆ. ಹಿರಿಯ ನಿರ್ಮಾಪಕ ಎನ್‌. ಕುಮಾರ್‌, ನಿರ್ದೇಶಕ ಇಂದ್ರಜಿತ್ ಲಂಕೇಶ್, ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಹಾಗೂ ಗಾಯಕಿ ಇಂದು ವಿಶ್ವನಾಥ್​​​​​​ಗೆ ಈ ಬಾರಿ ಪ್ರಶಸ್ತಿ ನೀಡಲಾಗಿದೆ.

Indrajit Lankesh
ಇಂದ್ರಜಿತ್ ಲಂಕೇಶ್​

ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿರುವ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರನ್ನು ಗುರುತಿಸಿ, ರಾಘವೇಂದ್ರ ಚಿತ್ರವಾಣಿ ಸಂಸ್ಥೆ ವತಿಯಿಂದ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದಾರೆ. ಈ ವರ್ಷ ಕೂಡಾ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಎನ್‌. ಕುಮಾರ್‌, ನಿರ್ದೇಶಕ ಇಂದ್ರಜಿತ್ ಲಂಕೇಶ್, ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಹಾಗೂ ಗಾಯಕಿ ಇಂದು ವಿಶ್ವನಾಥ್​​​​​​ಗೆ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಈ ಪ್ರಶಸ್ತಿ ನೀಡಲಾಯಿತ್ತು.

ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸಮಾರಂಭ

ಈ ಕಾರ್ಯಕ್ರಮಕ್ಕೆ ಎಡಿಜಿಪಿ ಭಾಸ್ಕರ್ ರಾವ್ ಕೂಡಾ ಭೇಟಿ ನೀಡಿ ಪ್ರಶಸ್ತಿ ಪಡೆದವರಿಗೆ ಶುಭ ಕೋರಿದರು.ಇದರ ಜೊತೆಗೆ ಕರ್ನಾಟಕ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹಾಗೂ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷೆ ಆಗಿರುವ ತಾರಾ ಅನುರಾಧಾ ಕೂಡಾ ಆಗಮಿಸಿ ಈ ಸಂಸ್ಥೆಯ ಜೊತೆಗಿನ ಒಡನಾಟವನ್ನು ಕೊಂಡಾಡಿದರು. ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44 ನೇ ವಾರ್ಷಿಕೋತ್ಸವ ಒಂದು ಕಡೆಯಾದ್ರೆ, ಈ ಚಿತ್ರವಾಣಿ ಸಂಸ್ಥೆಯ ಸ್ಥಾಪಕ ದಿವಂಗತ ಡಿ.ವಿ. ಸುಧೀಂದ್ರ ಅವರ ಹುಟ್ಟು ಹಬ್ಬ.ಈ ದಿನ ಡಾ. ರಾಜ್‌ ಕುಮಾರ್‌ ಹೆಸರಿನ ಪ್ರಶಸ್ತಿಯನ್ನು ಹೆಸರಾಂತ ಗಾಯಕಿ ಶ್ರೀಮತಿ ಇಂದು ವಿಶ್ವನಾಥ್​​​​​​​​​​​​​​ಗೆ ನೀಡಲಾಯಿತು. ಇನ್ನು ಡಾ ವಿಷ್ಣುವರ್ಧನ್ ಸಂಬಂಧಿ ದಿವಂಗತ ಆರ್​​​. ಶೇಷಾದ್ರಿ ಪ್ರಶಸ್ತಿಯನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್​​​ಗೆ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣ್ಯರು ಈ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Raghavendra Chitravani award
ಪ್ರಶಸ್ತಿ ಸ್ವೀಕರಿಸಿದ ಗಣ್ಯರು

ಇದನ್ನೂ ಓದಿ: ಸಂಪ್ರದಾಯಬದ್ಧ ಕಾಲದಲ್ಲಿ ಬಿಕಿನಿ ಧರಿಸಿದ್ದ ನಟಿ ಶರ್ಮಿಳಾ.. ಈ ಫೋಟೋ ಎವರ್‌ಗ್ರೀನ್‌..

ನನಗೆ ಈ ಪ್ರಶಸ್ತಿ ನೀಡಿರುವುದು ಬಹಳ ಖುಷಿಯ ವಿಚಾರ. ಈ ಸಂಸ್ಥೆ ಜೊತೆ ಬಹಳ ವರ್ಷಗಳ ಒಡನಾಡವಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಹಿರಿಯ ನಿರ್ಮಾಪಕ ಎನ್​​​. ‌ಕುಮಾರ್ ಮಾತನಾಡಿ, ಚಿತ್ರರಂಗದ ಸಾಧನೆ ಮಾಡಿರುವ ಪ್ರತಿಭೆಗಳನ್ನು ಗುರುತಿಸಿ, ಈ ಪ್ರಶಸ್ತಿ ಕೊಡುತ್ತಿರುವುದು ಸಂತೋಷದ ವಿಚಾರ ಅಂದರು. ಇಂದು ವಿಶ್ವನಾಥ್ ಹಾಗೂ ನಿರ್ದೇಶಕ ಬಾಬು ಕೃಷ್ಣಮೂರ್ತಿ ಮಾತನಾಡಿ, ತೆರೆ ಹಿಂದೆ ಸರಿದಿರುವ ನಮ್ಮಂಥವರಿಗೆ ಈ ಪ್ರಶಸ್ತಿ ಕೊಡುತ್ತಿರುವುದು ಹೆಮ್ಮೆ ಅಂದರು.ಇನ್ನು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್ ಮಾತನಾಡಿ, "ಪ್ರತಿ ವರ್ಷ 11 ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ನಾಲ್ಕು ಪ್ರಶಸ್ತಿಗಳನ್ನು ಮಾತ್ರ ನೀಡುತ್ತಿದ್ದೇವೆ. ಮುಂದಿನ ವರ್ಷ ಎಲ್ಲಾ ಹತೋಟಿಗೆ ಬರಲಿದ್ದು 11 ಪ್ರಶಸ್ತಿಗಳನ್ನು ನೀಡಲಿದ್ದೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.