ETV Bharat / sitara

ಇಂದು ಇಂಡಿಯನ್ ಫಿಲ್ಮ್​​ ಮೇಕರ್ಸ್ ಅಸೋಸಿಯೇಷನ್​​​ಗೆ ಚಾಲನೆ

author img

By

Published : Jul 27, 2020, 12:14 PM IST

Updated : Jul 27, 2020, 12:48 PM IST

ಬೆಂಗಳೂರಿನ ಎಸ್​​ಆರ್​ವಿ ಸಭಾಂಗಣದಲ್ಲಿ ಇಂದು ಪ್ರೊ. ದೊಡ್ಡರಂಗೇಗೌಡ ಅವರ ಸಾರಥ್ಯದಲ್ಲಿ ಇಂಡಿಯನ್ ಫಿಲ್ಮ್​ ಮೇಕರ್ಸ್ ಅಸೋಸಿಯೇಷನ್​​​ಗೆ ಚಾಲನೆಯಾಗಲಿದೆ. ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

IFMA start today
ದೊಡ್ಡರಂಗೇಗೌಡ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಸಲಹೆಯಂತೆ ಭಾರತ ಚಿತ್ರರಂಗದ ಪ್ರಮುಖವಾದ ಸಮಸ್ಯೆಗಳನ್ನು ಬಗೆಹರಿಸುವ ಉದ್ಧೇಶದಿಂದ ಇಂದು ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್ ಸ್ಥಾಪನೆ ಆಗುತ್ತಿದೆ. ಇಂದು ಸಂಜೆ 4 ಗಂಟೆಗೆ ಇದು ಉದ್ಘಾಟನೆಯಾಗಲಿದೆ.

IFMA start today
ಸುಧೀಂದ್ರ ವೆಂಕಟೇಶ್

ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿ, ಪದ್ಮಶ್ರೀ ಪ್ರೊ. ದೊಡ್ಡರಂಗೇಗೌಡ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಎಸ್​​​ಆರ್​ವಿ ಸಭಾಂಗಣದಲ್ಲಿ ಇಂದು ಸಂಜೆ ಐಎಫ್​​​​​​​​​ಎಂಎ ಚಾಲನೆ ಆಗುತ್ತಿದೆ. ಹಿಂದುಳಿದ ವರ್ಗದ ನೇತಾರ, ಡಾ. ಬಿ.ಆರ್​. ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ. ಮೂರ್ತಿ, ಖ್ಯಾತ ನಟರು, ನಿರ್ಮಾಪಕರು ಕರ್ನಾಟಕದ ಶಾಖೆಯ ಮುಂಚೂಣಿಯಲ್ಲಿ ಇರುತ್ತಾರೆ ಎನ್ನಲಾಗಿದೆ.

IFMA start today
ಇಂಡಿಯನ್ ಫಿಲ್ಮ್​​ ಮೇಕರ್ಸ್ ಅಸೋಸಿಯೇಷನ್​​​

ಐಎಫ್​​​​​​​​​ಎಂಎ ಸಂಸ್ಥೆಯ ವೆಬ್ ಸೈಟ್ ಕೂಡಾ ಇಂದೇ ಉದ್ಘಾಟನೆ ಆಗಲಿದೆ. ಇಂದಿನ ಸಮಾರಂಭದಲ್ಲಿ ಪ್ರೊ. ದೊಡ್ಡರಂಗೇಗೌಡರ ಜೊತೆಗೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್, ಡಿಎಸ್​​ಪಿ ಎಸ್​​​​.ಕೆ. ಉಮೇಶ್ ಹಾಗೂ ಇನ್ನಿತರರು ಹಾಜರಿರುತ್ತಾರೆ.

IFMA start today
ವಿ. ನಾಗೇಂದ್ರ ಪ್ರಸಾದ್

ಲಾಕ್​ ಡೌನ್ ಆರಂಭವಾದಾಗಿನಿಂದ ನಿರ್ಮಾಪಕರ ಸಂಘ, ವಾಣಿ ಮಂಡಳಿಯಿಂದ ಬೆರಳೆಣಿಕೆಯಷ್ಟು ಪತ್ರಿಕಾಗೋಷ್ಠಿ ನಡೆದಿದೆ. ಇದನ್ನು ಹೊರತು ಪಡಿಸಿದರೆ ಬಹಳ ದಿನಗಳ ನಂತರ ಆರಂಭವಾಗುತ್ತಿರುವ ಮೊದಲ ಪ್ರತಿಕಾಗೋಷ್ಠಿ ಇದು. 45 ವರ್ಷಗಳಲ್ಲಿ ಸುಮಾರು 2500 ಕನ್ನಡ ಚಿತ್ರಗಳಿಗೆ ಪಿಆರ್​ಒ ಆಗಿ ಕೆಲಸ ಮಾಡುತ್ತಿರುವ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಈ ಸುದ್ದಿಗೋಷ್ಠಿಯನ್ನು ಆಯೋಜಿಸಿದೆ.

IFMA start today
ವಿ. ಮಹೋಹರ್​

ಕೊರೊನಾ ಸಮಸ್ಯೆ ಇರುವುದರಿಂದ ಸುಧೀಂದ್ರ ವೆಂಕಟೇಶ್, ಡಿ.ಎಸ್, ಸುನಿಲ್ ಹಾಗೂ ಡಿ.ಜಿ. ವಾಸು ಸೇರಿ ಎಲ್ಲಾ ಮುನ್ನೆಚರಿಕೆ ಕ್ರಮಗಳ ಬಗ್ಗೆ ವ್ಯವಸ್ಥೆ ಮಾಡಿದ್ದಾರೆ.

IFMA start today
ಪಿ. ಮೂರ್ತಿ
Last Updated :Jul 27, 2020, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.