ಗರುಡ ಗಮನ ವೃಷಭ ವಾಹನ ಸಿನಿಮಾ ಮೆಚ್ಚಿ, ಹಾಡಿ ಹೊಗಳಿದ ತೆಲುಗು ಡೈರೆಕ್ಟರ್​

author img

By

Published : Jan 13, 2022, 4:21 PM IST

Garuda Gamana Vrushabha vahana
ಗರುಡ ಗಮನ ವೃಷಭ ವಾಹನ ಸಿನಿಮಾ ()

ರಾಜ್ ಬಿ. ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ಕಾಂಬಿನೇಷನ್​ನಲ್ಲಿ ಮೂಡಿ ಬಂದಿರುವ ಸಿನಿಮಾ 'ಗರುಡ ಗಮನ ವೃಷಭ ವಾಹನ' ವನ್ನು , ಟಾಲಿವುಡ್ ಖ್ಯಾತ ನಿರ್ಮಾಪಕ ಹಾಗು ನಿರ್ದೇಶಕ ದೇವ ಕಟ್ಟ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲಾ, ಆಸ್ಕರ್ ಅವಾರ್ಡ್ ವಿನ್ನಿಂಗ್ ಮೂವಿ ಎಂದು ಅವರು ಕೊಂಡಾಡಿದ್ದಾರೆ.

ಸ್ಯಾಂಡಲ್​ವುಡ್​​ನಲ್ಲಿ ವಿಭಿನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಜೀ 5ನಲ್ಲಿ ಇಂದಿನಿಂದ ಸ್ಟ್ರೀಮ್ ಆಗಲಿದೆ. ಕಳೆದ‌ ನವೆಂಬರ್ 19ರಂದು ಥಿಯೇಟರ್​ಗೆ ಲಗ್ಗೆ ಇಟ್ಟ ಈ ಸಿನಿಮಾ ನೋಡುಗರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿದೆ.

ಒಂದು ಮೊಟ್ಟೆಯ ಕಥೆ ತರಹದ ಕಾಮಿಡಿ ಸಿನಿಮಾ ಮಾಡಿದ್ದ ರಾಜ್ ಬಿ. ಶೆಟ್ಟಿ, ಇಂಥದ್ದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ ಅವರು ಮಾಡಿದ್ದ ಶಿವ ಪಾತ್ರ ಸಖತ್​​ ಆಗಿ ಮೂಡಿಬಂದಿತ್ತು. ರಾಜ್ ಬಿ. ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ಕಾಂಬಿನೇಷನ್ ನೋಡುಗರಿಗೂ ಸಹ ಇಷ್ಟವಾಗಿತ್ತು. ಇದೀಗ ಈ ಸಿನಿಮಾವನ್ನು‌ ಟಾಲಿವುಡ್ ಖ್ಯಾತ ನಿರ್ಮಾಪಕ ಹಾಗು ನಿರ್ದೇಶಕ ದೇವ ಕಟ್ಟ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲಾ, ಇದು ಆಸ್ಕರ್ ಅವಾರ್ಡ್ ವಿನ್ನಿಂಗ್ ಮೂವಿ ಎಂದು ಅವರು ಬಣ್ಣಿಸಿದ್ದಾರೆ.

ಟಾಲಿವುಡ್ ಸೇರಿದಂತೆ ಬಾಲಿವುಡ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ದೇವ ಕಟ್ಟ 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. 2021ರ ಭಾರತೀಯ ಸಿನಿಮಾಗಳ ಪೈಕಿ ಅತ್ಯುತ್ತಮ ಚಲನಚಿತ್ರ ಗರಡುಗಮನ ವೃಷಭ ವಾಹನ. ನನಗೆ ಆಸ್ಕರ್​ಗೆ ಸಿನಿಮಾ ಆಯ್ಕೆ ಮಾಡುವ ಪವರ್ ಇದ್ದಿದ್ದರೇ ಭಾರತದಿಂದ ಈ ಸಿನಿಮಾವನ್ನು ಆಯ್ಕೆ‌ ಮಾಡುತ್ತಿದ್ದೆ. ಗರುಡ ಗಮನ ವೃಷಭ ವಾಹನ ಸಿನಿಮಾ‌‌ವನ್ನು ನನ್ನ ಸ್ನೇಹಿತರ ಜೊತೆ ನೋಡಿದೆ.

ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಸಿಂಗಲ್​ ಆಗಿ ಸನ್ನಿ ಎಂಜಾಯ್​.. ಜಲಕನ್ಯೆ ಎನ್ನಲು ಅವಳ ಪೋಸ್ಟ್​ಗಳೇ ಸಾಕು!

ಈ ಸಿನಿಮಾದ ಫಿಲ್ಮಂ ಮೇಕಿಂಗ್ ಅದ್ಭುತವಾಗಿದೆ. ಸಿನಿಮಾ‌ ತುಂಬಾ ಇಷ್ಟ ಆಯಿತು. ಮತ್ತೆ ಕೆಲ ದಿನಗಳ ನಂತರ ಥಿಯೇಟರ್​ಗೆ ಹೋದಾಗ ಸಿನಿಮಾ‌ ಇರಲಿಲ್ಲ. ಹೀಗಾಗಿ ಬೇಸರ ಆಯ್ತು. ಈಗ ಜೀ 5 ಫ್ಲಾಟ್ ಫಾರ್ಮ್​ನಲ್ಲಿ‌ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ ಬಿ ಶೆಟ್ಟಿ ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಇಷ್ಟು ಆಗುತ್ತೆ, ಮಿಸ್ ಮಾಡ್ದೇ ಎಲ್ಲರೂ ನೋಡಿ‌ ಎಂದಿದ್ದಾರೆ.

ಸದ್ಯ ಜೀ5ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸಿದ್ದ ಭಜರಂಗಿ 2 ಸಿನಿಮಾ, ಒಳ್ಳೆಯ ಪ್ರಶಂಸೆ ಪಡೆದುಕೊಂಡಿದೆ. ಹಾಗೆಯೇ, ರವಿಚಂದ್ರನ್ ಅಭಿನಯದ ಕನ್ನಡಿಗ ಕೂಡ ಸಖತ್​​ ಸೌಂಡ್​​ ಮಾಡಿದೆ. ಈಗ ಗರುಡ ಗಮನ ವೃಷಭ ವಾಹನ ಸಿನಿಮಾವೂ ಜೀ5 ಸೇರಿಕೊಂಡಿದ್ದು, ಪ್ರತಿ‌ ಪ್ರೇಕ್ಷಕನ ಮನೆ ಮನ ತಲುಪಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.