ETV Bharat / sitara

Puneeth No More: ಅಪ್ಪು ಫೋಟೋ ಟ್ವಿಟರ್​ Profile Pic ಮಾಡಿಕೊಂಡ ನಿರ್ದೇಶಕ ರಿಷಬ್​ ಶೆಟ್ಟಿ, ನಟಿ ಖುಷ್ಬೂ

author img

By

Published : Oct 29, 2021, 4:31 PM IST

Updated : Oct 29, 2021, 5:47 PM IST

ಅಪ್ಪು ಅಗಲಿಕೆಗೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಚಿತ್ರರಂಗದ ಗಣ್ಯರು ಪುನೀತ್​ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಈ ಮಧ್ಯೆ ಅಪ್ಪು ಬಾಲ್ಯದ ಫೋಟೋವೊಂದನ್ನು ತಮ್ಮ ಟ್ವಿಟರ್​ Profile Pic ಆಗಿ ನಿರ್ದೇಶಕ ರಿಷಬ್​ ಶೆಟ್ಟಿ ಬದಲಿಸಿದ್ದಾರೆ.

ಅಪ್ಪು ಫೋಟೋ ಟ್ವಿಟರ್​ ProfilePic ಮಾಡಿಕೊಂಡ ನಿರ್ದೇಶಕ ರಿಷಬ್​ ಶೆಟ್ಟಿ, ನಟಿ ಖುಷ್ಬೂ
ಅಪ್ಪು ಫೋಟೋ ಟ್ವಿಟರ್​ ProfilePic ಮಾಡಿಕೊಂಡ ನಿರ್ದೇಶಕ ರಿಷಬ್​ ಶೆಟ್ಟಿ, ನಟಿ ಖುಷ್ಬೂ

ಬೆಂಗಳೂರು: ಇಂದು ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್​ ಮಾಡುವ ವೇಳೆ ನಟ ಪುನೀತ್​ ರಾಜ್​ಕುಮಾರ್​ಗೆ ಹೃದಯಘಾತ ಸಂಭವಿಸಿತ್ತು. ಬಳಿಕ ವಿಕ್ರಂ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಸೌತ್​ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ಪುನೀತ್ ರಾಜ್​ಕುಮಾರ್​ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಟ್ವಿಟರ್​ Profile Pic ಬದಲಿಸಿದ ರಿಷಬ್ ಶೆಟ್ಟಿ:

ಅಪ್ಪು ಅಗಲಿಕೆ ತುಂಬಲಾರದ ನಷ್ಟವಾಗಿದ್ದು, ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಚಿತ್ರರಂಗದ ಗಣ್ಯರು ಪುನೀತ್​ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಈ ಮಧ್ಯೆ ಅಪ್ಪು ಬಾಲ್ಯದ ಫೋಟೋವೊಂದನ್ನು ತಮ್ಮ ಟ್ವಿಟರ್​ Profile Pic ಆಗಿ ನಿರ್ದೇಶಕ ರಿಷಬ್​ ಶೆಟ್ಟಿ ಬದಲಿಸಿದ್ದಾರೆ.

ಅಲ್ಲದೇ ಪುನೀತ್​ ಜತೆಗಿನ ಕೆಲವು ಅಪರೂಪದ ಕ್ಷಣಗಳನ್ನು ಹಂಚಿಕೊಂಡಿರುವ ಅವರು, ಏನೂ ಹೇಳದೇ ತಮ್ಮ ಮನದಾಳದ ದುಃಖವನ್ನು ಮೌನವಾಗಿಯೇ ವ್ಯಕ್ತಪಡಿಸಿದ್ದಾರೆ.

ಅಪ್ಪು ಜತೆ ಕಳೆದ ಸಮಯ ಮೆಲುಕು ಹಾಕಿದ ಜಗ್ಗೇಶ್​:

ವಾರದ ಹಿಂದೆ ಮಲ್ಲೇಶ್ವರಕ್ಕೆ ಬಂದಿರುವೆ ಬಾ ಅಣ್ಣ ಎಂದು ಕರೆದು1 ಗಂಟೆ ಸಮಯ ಕಳೆದ ಆತ್ಮೀಯ ತಮ್ಮ ಪುನೀತ ಇಂದಿಲ್ಲ ಎಂದರೆ ಎಂಥ ದುರ್ವಿಧಿ. ಕೋಟ್ಯಂತರ ಅಭಿಮಾನಿಗಳು ಅವರ ಮನೆಯವರಿಗೆ ಈ ನೋವು ಭರಿಸುವ ಶಕ್ತಿ ಆ ದೇವರೇ ನೀಡಬೇಕು! ಕನ್ನಡ ಚಿತ್ರರಂಗದ ಅನರ್ಘ್ಯರತ್ನ ಹೇಳದೇ ಕೇಳದೆ ನಿರ್ಗಮಿಸಿ ಅಪ್ಪ - ಅಮ್ಮನ ಮಡಿಲು ಸೇರಿತು. ನಿಮ್ಮಆತ್ಮಕ್ಕೆ ಚಿರಶಾಂತಿ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

  • ವಾರದ ಹಿಂದೆ ಮಲ್ಲೇಶ್ವರಕ್ಕೆ ಬಂದಿರುವೆ ಬಾಅಣ್ಣ ಎಂದು ಕರೆದು1ಘಂಟೆ ಸಮಯಕಳೆದ ಆತ್ಮೀಯ ತಮ್ಮ ಪುನೀತ ಇಂದಿಲ್ಲಾ ಎಂದರೆ ಎಂಥ ದುರ್ವಿಧಿ! ಕೋಟ್ಯಾಂತರ ಅಭಿಮಾನಿಗಳು ಅವರ ಮನೆಯವರಿಗೆ ಈನೋವು ಬರಿಸುವ ಶಕ್ತಿ ಆದೇವರೆ ನೀಡಬೇಕು!ಕನ್ನಡ ಚಿತ್ರರಂಗದ ಅನರ್ಘ್ಯರತ್ನ ಹೇಳದೆಕೇಳದೆ ನಿರ್ಗಮಿಸಿ ಅಪ್ಪಅಮ್ಮನ ಮಡಿಲು ಸೇರಿತು!ನಿಮ್ಮಆತ್ಮಕ್ಕೆ
    ಚಿರಶಾಂತಿ😭😭 pic.twitter.com/V8rxFcXYNA

    — ನವರಸನಾಯಕ ಜಗ್ಗೇಶ್ (@Jaggesh2) October 29, 2021 " class="align-text-top noRightClick twitterSection" data=" ">

ಟ್ವಿಟರ್​ Profile Pic ಬದಲಿಸಿ ಸಂತಾಪ ಸೂಚಿಸಿರುವ ನಟಿ ಖುಷ್ಬೂ:

ಅಪ್ಪು, ನೀನು ನನಗೆ ತಿಳಿದಿರುವ ರತ್ನ. ನನಗೆ ಈ ಸುದ್ದಿಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೋಗಬೇಡ ಅಪ್ಪು.. ಹಿಂತಿರುಗಿ ಬಾ.. ದಯವಿಟ್ಟು ಹಿಂತಿರುಗಿ ಬಾ.. ದಯವಿಟ್ಟು ಎಂದು ನಟಿ ಖುಷ್ಬೂ ಟ್ವೀಟ್​ ಮಾಡಿದ್ದು, ತಮ್ಮ ಟ್ವಿಟರ್ ಖಾತೆಗೆ ಪುನೀತ್​ ಫೋಟೋವನ್ನ Profile Pic ಆಗಿ ಬದಲಿಸಿದ್ದಾರೆ.

ಡಾ.ರಾಜ್​ಕುಮಾರ್ ಮತ್ತು ಪುನೀತ್
ಡಾ.ರಾಜ್​ಕುಮಾರ್ ಮತ್ತು ಪುನೀತ್

ಕೆಲವೊಮ್ಮೆ ನಾವು ಆ ಕ್ಷಣಕ್ಕೆ ಬೆಲೆ ಕೊಡುವುದಿಲ್ಲ, ಅದು ಹೋಗುವವರೆಗೂ.. ಇದನ್ನು ಗ್ರಹಿಸಲು ಸಾಧ್ಯವಿಲ್ಲ. ನಿಮ್ಮ ನಮ್ರತೆ, ನಿಮ್ಮ ಮಾನವೀಯತೆ, ನಿಮ್ಮ ಡೌನ್ ಟು ಅರ್ಥ್ ವರ್ತನೆ, ನಿಮ್ಮ ಜೀವನ ಪ್ರೀತಿ ಯಶಸ್ವಿಯಾಗಲು ಬಯಸುವವರಿಗೆ ಪಾಠವಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ನಿಮ್ಮ ನಗು ಎಂದಿಗೂ ಜೀವಂತ:

ನಿಮ್ಮ ಮಗುವಿನ ಮನಸ್ಸು, ನಿಮ್ಮ ನಗು ಎಂದಿಗೂ ಜೀವಂತ, ಇಷ್ಟು ಬೇಗ ನಮ್ಮಿಂದ ನಿಮ್ಮನ್ನು ದೂರ ಮಾಡಿದ ಆ ದೇವರಿಗೆ ನನ್ನ ವಿರೋದವಿರಲಿ. You’ll be missed forever

ಪುನೀತ್ ಜತೆ ದುನಿಯಾ ವಿಜಿ ಮತ್ತು ಪ್ರೇಮ್
ಪುನೀತ್ ಜತೆ ದುನಿಯಾ ವಿಜಿ ಮತ್ತು ಪ್ರೇಮ್

ನಟ ದುನಿಯಾ ವಿಜಯ್ ಸಂತಾಪ:

ನಟ ಪುನೀತ್​ ರಾಜ್​ಕುಮಾರ್​ ಜತೆಗಿನ ಫೋಟೋ ಹಂಚಿಕೊಂಡಿರುವ ನಟ ದುನಿಯಾ ವಿಜಯ್, ಮೌನವಾಗಿಯೇ ಸಂತಾಪ ಸೂಚಿಸಿದ್ದಾರೆ.

ಆ ನಗುವನ್ನು ಮರೆಯಲಾಗದು:

"ಅಪ್ಪು.. ಯಾವಾಗಲೂ ಆ ನಗುವನ್ನು ಮರೆಯಲಾಗದು! ಓಂ ಶಾಂತಿ" ಎಂದು ನಟ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

RIP ಎಂದು ಹೇಳಿ ಮುಗಿಸಲಾಗದು:

ಭಾವನೆಗಳು ಕೆಲವು ವೈಯಕ್ತಿಕ ಅವುಗಳನ್ನು ಪದಗಳಲ್ಲಿ ಹೇಳಲಾಗದು. RIP ಎಂದು ಹೇಳಿ ಮುಗಿಸಲಾಗದು. ದೇಹ ಮನಸ್ಸಿಗೂ ಮೀರಿದ್ದು ಭಾವನೆ. ಕೆಲವು ಬಾಂಧವ್ಯ ವರ್ಣನೆಗೂ ಮೀರಿದ್ದು ಎಂದು ನಟಿ ರಮ್ಯಾ ಅಪ್ಪು ಅಗಲಿಕೆಯ ದುಃಖ ತೋಡಿಕೊಂಡಿದ್ದಾರೆ.

ಸಿನಿಮಾ ರಂಗದಲ್ಲಿ ಆತ ನನಗೆ ಅತ್ಯಂತ ಆಪ್ತ ಸ್ನೇಹಿತ. ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು. ಸದಾ ನನ್ನ ನೆನಪಿನಲ್ಲಿ ಎಂದೆಂದೂ ಇರುವಿರಿ ಅಪ್ಪು ಎಂದು ನಟಿ ರಮ್ಯಾ ಸಂತಾಪ ಸೂಚಿಸಿದ್ದಾರೆ.

ರಚಿತಾ ರಾಮ್ ಸಂತಾಪ:

ನಟ ಪುನಿತ್ ರಾಜ್​ಕುಮಾರ್​ ನಿಧನಕ್ಕೆ ಬ್ರೋಕನ್​ ಹಾರ್ಟ್​ ಜತೆಗೆ ಅಪ್ಪು ಫೋಟೋ ಟ್ವೀಟ್​ ಮಾಡುವ ಮೂಲಕ ನಟಿ ರಚಿತಾ ರಾಮ್ ಸಂತಾಪ ಸೂಚಿಸಿದ್ದಾರೆ.

ಓದಿ: ಪುನಿತ್​ ರಾಜ್​​ ಕುಮಾರ್​ ನಿಧನಕ್ಕೆ ಸಂತಾಪ ಸೂಚಿಸಿದ ತೆಲಗು ಚಿತ್ರ ರಂಗದ ಗಣ್ಯರು

Last Updated : Oct 29, 2021, 5:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.