ETV Bharat / sitara

ಹೈದರಾಬಾದ್ ಕೋಟಿಗೊಬ್ಬ-3 ಶೂಟಿಂಗ್ ಅಡ್ಡಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್​​​

author img

By

Published : Jul 24, 2019, 5:10 PM IST

ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ಕೋಟಿಗೊಬ್ಬ-3 ಶೂಟಿಂಗ್ ನಡೆಯುತ್ತಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ಶೂಟಿಂಗ್ ಅಡ್ಡಾಕ್ಕೆ ಭೇಟಿ ನೀಡಿದ್ದಾರೆ. ರವಿ ಸರ್ ಭೇಟಿ ನನಗೆ ನಿಜಕ್ಕೂ ಖುಷಿ ನೀಡಿದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

ಕೋಟಿಗೊಬ್ಬ-3

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್, ಸದ್ಯ ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಭರದಿಂದ ಸಾಗುತ್ತಿದೆ. ಅದ್ದೂರಿ ಬೃಹತ್​ ಸೆಟ್​​​ನಲ್ಲಿ ಲವ್​ ಜೊತೆ ಆ್ಯಕ್ಷನ್ ಸೀನ್​ಗಳ ಶೂಟಿಂಗ್​​ ನಡೆಯುತ್ತಿದೆ.

  • A surprise guest at my place at hyd indeed... Thanks Anna for dropping in.. Its always lovely to see u.
    Many hugs 🤗🤗. pic.twitter.com/7qf2RetYFZ

    — Kichcha Sudeepa (@KicchaSudeep) July 23, 2019 " class="align-text-top noRightClick twitterSection" data=" ">

ಚಿತ್ರದ ಶೂಟಿಂಗ್ ಸ್ಪಾಟ್ ಬಳಿ ಕ್ರೇಜಿಸ್ಟಾರ್ ರವಿಚಂದ್ರನ್ ಭೇಟಿ ನೀಡಿ ಚಿತ್ರತಂಡಕ್ಕೆ ಸರ್ಪ್ರೈಸ್ ನೀಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಟ್ವಿಟ್ಟರ್​​​​​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಹೈದರಾಬಾದ್​ನಲ್ಲಿ ನಾನಿರುವ ಸ್ಥಳಕ್ಕೆ ಸ್ಪೆಷಲ್ ಗೆಸ್ಟ್ ಒಬ್ಬರು ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. ಅವರ ಭೇಟಿ ನಿಜಕ್ಕೂ ಪರಮಾನಂದವಾಯಿತು ಎಂದು ಸುದೀಪ್​​ ಮನದುಂಬಿ ಮಾತನಾಡಿದ್ದಾರೆ. ಕ್ರೇಜಿಸ್ಟಾರ್ ಸುದೀಪ್ ಅವರನ್ನು ಭೇಟಿ ಮಾಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ರವಿಚಂದ್ರನ್ ಕೂಡಾ ಸಿನಿಮಾದಲ್ಲಿ ನಟಿಸಲಿದ್ದಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಹುಟ್ಟಿದೆ.

ಈಗಾಗಲೇ ಶೇಕಡಾ 80 ರಷ್ಟು ಚಿತ್ರೀಕರಣ ಮುಗಿದಿದ್ದು, ಮುಕ್ತಾಯದ ಹಂತಕ್ಕೆ ತಲುಪಿದೆ. ಈ ಹಿಂದೆ ಮಾಣಿಕ್ಯ ಸಿನಿಮಾದಲ್ಲಿ ಸುದೀಪ್ ಮತ್ತು ರವಿಚಂದ್ರನ್ ಒಟ್ಟಿಗೆ ನಟಿಸಿ ಸೂಪರ್ ಜೋಡಿ ಎನಿಸಿಕೊಂಡಿದ್ದರು. ಇದೀಗ ಕೋಟಿಗೊಬ್ಬ-3 ನಲ್ಲೂ ಇವರಿಬ್ಬರು ಒಂದಾದ್ರೂ ಅಚ್ಚರಿ ಪಡಬೇಕಾಗಿಲ್ಲ. ಚಿತ್ರಕ್ಕೆ ಶಿವಕಾರ್ತಿಕ್ ನಿರ್ದೇಶನವಿದ್ದು ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ.

Intro:ಕೋಟಿಗೊಬ್ಬ-3 ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಸರ್ ಪ್ರೈಸ್ ಕೊಟ್ಟ ಶೋ ಮ್ಯಾನ್!!

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್, ಸದ್ಯ ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಭರದಿಂದ ಸಾಗ್ತಿದೆ. ಅದ್ಧೂರಿಯಾಗಿರೋ ಬೃಹತ್​ ಸೆಟ್​​​ನಲ್ಲಿ ಲವ್​ ಜೊತೆಯಲ್ಲಿ ಆಕ್ಷನ್ ಸೀನ್​ಗಳ ಶೂಟ್​ ನಡೀತಿದೆ.ಇದೀಗ ಚಿತ್ರದ ಸೆಟ್​ಗೆ ಕನ್ನಡದ ಶೋ ಮ್ಯಾನ್ ಕ್ರೇಜಿಸ್ಟಾರ್ ರವಿಚಂದ್ರನ್​ , ಕೋಟಿಗೊಬ್ಬ-3 ಚಿತ್ರದ ಶೂಟಿಂಗ್ ಸ್ಪಾಟ್ ಗೆ ಸರ್ ಪ್ರೈಸ್ ವಿಜೀಟ್ ಮಾಡಿದ್ದಾರೆ. ಈ ಬಗ್ಗೆ ಸುದೀಪ್ ಟ್ವಿಟರ್​​​​​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಹೈದರಾಬಾದ್​ನಲ್ಲಿ ನಾನಿರುವ ಸ್ಥಳಕ್ಕೆ ಸ್ಪೆಷಲ್ ಗೆಸ್ಟ್ ಒಬ್ಬರು ಸರ್ಪ್ರೈಸ್​ ವಿಸಿಟ್ ಕೊಟ್ಟಿದ್ದಾರೆ. ಅವರ ಭೇಟಿ ನಿಜಕ್ಕೂ ಪರಮಾನಂದವಾಯಿತು ಅಂತಾ ಸುದೀಪ್​​ ಮನದುಂಬಿ ಮಾತನಾಡಿದ್ದಾರೆ. ಸದ್ಯ ಭೇಟಿ ನೀಡಿರೋದು ಚಿತ್ರ, ರವಿಚಂದ್ರನ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ಅನ್ನೋದು ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದೆ. ಈಗಾಗಲೇ ಚಿತ್ರದ ಶೇ.80ರಷ್ಟು ಭಾಗ ಶೂಟಿಂಗ್ ಕಂಪ್ಲೀಟ್ ಆಗಿದ್ದು ಶೂಟಿಂಗ್ ಮುಕ್ತಾಯದ ಹಂತಕ್ಕೆ ತಲುಪಿದೆ.
Body:ಈ ಹಿಂದೆ ಮಾಣಿಕ್ಯ ಸಿನಿಮಾದಲ್ಲಿ ಸುದೀಪ್ ಮತ್ತು ರವಿಚಂದ್ರನ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿ ಸೂಪರ್ ಡೂಪರ್ ಜೋಡಿ ಎನಿಸಿಕೊಂಡಿದ್ರು. ಇದೀಗ ಕೋಟಿಗೊಬ್ಬ-3 ನಲ್ಲೂ ಒಂದಾದ್ರೂ ಅಚ್ಚರಿ ಪಡಬೇಕಾಗಿಲ್ಲ. ಚಿತ್ರಕ್ಕೆ ಶಿವಕಾರ್ತಿಕ್ ನಿರ್ದೇಶನವಿದ್ದು ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆConclusion:ರವಿಕುಮಾರ್ ಎಂಕೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.