ETV Bharat / sitara

ಬುದ್ಧಿವಂತನ ಈ ಲುಕ್​ ಯಾವ ಚಿತ್ರದ್ದು ಗೊತ್ತಾ?

author img

By

Published : May 13, 2020, 11:30 AM IST

Updated : May 13, 2020, 12:39 PM IST

ಬುದ್ಧಿವಂತ 2 ಚಿತ್ರ ಈ ಹಿಂದಿನ ಚಿತ್ರದ ಮುಂದುವರೆದ ಭಾಗವಲ್ಲ. ಇದೊಂದು ಮೈಂಡ್​ ಗೇಮ್ ಚಿತ್ರ, ಹೆಜ್ಜೆ ಹೆಜ್ಜೆಗೂ ಕುತೂಹಲ ಕಟ್ಟಿಕೊಡಲಾಗಿದೆ.

Buddhivantha 2 cinema poster release
ಸೂಪರ್​ ಸ್ಟಾರ್​ ಉಪೇಂದ್ರ

ಕನ್ನಡ ಚಿತ್ರ ರಂಗದ ಬುದ್ಧಿವಂತ ಅಂದ್ರೆ ಅದು ಉಪೇಂದ್ರ. ಇವರ ಸಿನಿಮಾನ ದೃಷ್ಟಿಕೋನವೇ ಇವರ ಬುದ್ಧಿವಂತಿಕೆ ಮಟ್ಟವನ್ನು ತೋರಿಸುತ್ತದೆ. ಈಗ ಬುದ್ಧಿವಂತ 2 ಜನರ ಮುಂದೆ ಬರಲು ಸಿದ್ಧವಾಗುತ್ತಿದೆ.

12 ವರ್ಷಗಳ ಬಳಿಕ ಬುದ್ಧಿವಂತ 2 ಚಿತ್ರ 78 ದಿವಸಗಳ ಚಿತ್ರೀಕರಣ ಮುಗಿಸಿಕೊಂಡು ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಹಾಡಿನ ಭಾಗವನ್ನು ಕತಾರ್ ಹಾಗು ಮಲೇಷ್ಯಾದಲ್ಲಿ ಚಿತ್ರೀಕರಣ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಕೊರೊನಾದಿಂದ ವಿದೇಶಿ ಚಿತ್ರೀಕರಣವನ್ನು ಕೈಬಿಡಲಾಗಿದೆ.

Buddhivantha 2 cinema poster release
ಸೂಪರ್​ ಸ್ಟಾರ್​ ಉಪೇಂದ್ರ

ಬುದ್ಧಿವಂತ 2 ಚಿತ್ರ ಈ ಹಿಂದಿನ ಚಿತ್ರದ ಮುಂದುವರಿದ ಭಾಗವಲ್ಲ. ಇದೊಂದು ಮೈಂಡ್​ ಗೇಮ್ ಚಿತ್ರ, ಹೆಜ್ಜೆ ಹೆಜ್ಜೆಗೂ ಕುತೂಹಲ ಕಟ್ಟಿಕೊಡಲಾಗಿದೆ. ಸಿನಿಮಾ. ಪ್ರೇಕ್ಷಕ ಸುಲಭವಾಗಿ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಬುದ್ಧಿವಂತ 2 ಚಿತ್ರವನ್ನು ಸಿದ್ದ ಮಾಡಿದ್ದಾರೆ ನಿರ್ದೇಶಕ ಭದ್ರಾವತಿ ಜಯರಾಂ.

ಬುದ್ಧಿವಂತ 2 ಚಿತ್ರದಲ್ಲಿ ಉಪೇಂದ್ರ ಅವರ ಸ್ಟೈಲ್, ಮಾತಿನ ಶೈಲಿ ವಿಶೇಷವಾಗಿರಲಿದೆ. ಮೇಘನಾ ರಾಜ್ ಹಾಗೂ ಸೋನಲ್ ಮೊಂಟೆರಿ ನಾಯಕಿಯರು. ಚಂದನವನಕ್ಕೆ ಹೊಸ ಖಳ ನಟನ ಪ್ರವೇಶ ಆಗುತ್ತಿದೆ. ಆ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ. ಪೋಷಕ ಪಾತ್ರಗಳಲ್ಲಿ ರಾಜೇಶ್ ನಟರಂಗ, ಪ್ರೇರಣ, ಕಡ್ಡಿಪುಡಿ ಚಂದ್ರು ಹಾಗೂ ಇತರರು ಇದ್ದಾರೆ.

Last Updated : May 13, 2020, 12:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.