ETV Bharat / sitara

ಬಿಗ್​​ಬಾಸ್​​-8: ನಕ್ಷತ್ರ ಟಾಸ್ಕ್‌ ವೇಳೆ ದಿವ್ಯಾ ಉರುಡುಗ ಕೈ ಬೆರಳಿಗೆ ಗಾಯ

author img

By

Published : Jul 13, 2021, 4:05 PM IST

ಬಿಗ್​​ಬಾಸ್ ನೀಡಿದ್ದ ನಕ್ಷತ್ರ ಅಂಟಿಸುವ ಟಾಸ್ಕ್ ವೇಳೆ ಮನೆಯ ಕಿಟಕಿಯ ಗಾಜಿಗೆ ಕೈ ಹೊಡೆದು ದಿವ್ಯ ಉರುಡುಗ ಗಾಯಗೊಂಡಿದ್ದು, ಟಾಸ್ಕ್​ಗಳಲ್ಲಿ ಅವರು ಭಾಗವಹಿಸಿಲ್ಲ.

bigboss divya uruduga injured
ಬಿಗ್​​ಬಾಸ್​​-8

ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ದಿವ್ಯ ಉರುಡುಗ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ, ಚೆಂಡಾಟ ಟಾಸ್ಕ್​​ನಲ್ಲಿ ಅವರು ಭಾಗವಹಿಸಿಲ್ಲ.

ನಿನ್ನೆ ಬಿಗ್​​ಬಾಸ್ ನೀಡಿದ್ದ ನಕ್ಷತ್ರ ಅಂಟಿಸುವ ಟಾಸ್ಕ್ ವೇಳೆ ಬೆರಳುಗಳು ಹಾಗೂ ಅಂಗೈ ಭಾಗದಲ್ಲಿ ಗಾಯವಾಗಿದ್ದು, ತಕ್ಷಣವೇ ಪ್ರಥಮ ಚಿಕಿತ್ಸೆಗೆ ಕನ್​ಫೆಷನ್​ ರೂಮ್​ಗೆ ಕರೆದುಕೊಂಡು ಹೋಗಿ ಬ್ಯಾಂಡೇಜ್​ ಹಾಕಲಾಯಿತು. ಹೀಗಾಗಿ, ಇಂದಿನ ಎಪಿಸೋಡ್​ನಲ್ಲಿ ಪ್ರಸಾರವಾಗುತ್ತಿರುವ ಚೆಂಡಾಟ ಟಾಸ್ಕ್‌ನಲ್ಲಿ ದಿವ್ಯ ಉರುಡುಗ ಪಾಲ್ಗೊಂಡಿಲ್ಲ.

ಟಾಸ್ಕ್ ಏನು?

ಈ ಟಾಸ್ಕ್​ ಪ್ರಕಾರ, ಪ್ರತಿ ತಂಡದ ಒಬ್ಬ ಸದಸ್ಯ ಜಾಕೆಟ್​ ಹಾಕಬೇಕು. ಅವರಿಗೆ ಎದುರಾಳಿ ತಂಡದವರು ನಕ್ಷತ್ರ ಅಂಟಿಸಬೇಕು. ಈ ವೇಳೆ ಜಾಕೆಟ್ ಹಾಕಿಕೊಂಡಿದ್ದ ದಿವ್ಯಾ ಮತ್ತೊಂದು ತಂಡದಿಂದ ತಪ್ಪಿಸಿಕೊಂಡು ಓಡುತ್ತಿದ್ದರು. ಆಗ ಓಡುವ ಭರದಲ್ಲಿ ಕಿಟಕಿಗೆ ಕೈ ತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.