ETV Bharat / sitara

ಬಿಗ್​ಬಾಸ್​ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರಕ್ಕೆ... ಯಾಕೆ!?

author img

By

Published : Oct 19, 2019, 12:02 PM IST

ಮನೆಯ 18 ಸದಸ್ಯರಲ್ಲಿ ಮೊತ್ತೊಬ್ಬ ಸದಸ್ಯ ಮನೆಯಿಂದ​ ಹೊರಗೆ ಹೋಗುವಂತೆ ಬಿಗ್​ಬಾಸ್​ ಸೂಚಿಸಿದ್ದಾರೆ. ಹೌದು, ಡ್ಯಾನ್ಸರ್​ ಕಿಶನ್​​ಗೆ ಜಾಂಡೀಸ್​ ಇರುವ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ.

ಕಿಶನ್​

ಬಿಗ್​ ಮನೆಗೆ ಸ್ಪರ್ಧಿಗಳು ಹೋಗಿ ಇನ್ನು ಒಂದು ವಾರವೂ ಕಂಪ್ಲೀಟ್​ ಆಗಿಲ್ಲ. ಆದ್ರೆ ಇಬ್ಬರು ಸದಸ್ಯರು ಅನಾರೋಗ್ಯದ ಕಾರಣ ದೊಡ್ಡ ಮನೆಯಿಂದ ಹೊರಗೆ ಹೋಗಬೇಕಾಗಿದೆ.

ಬಿಗ್​​ಬಾಸ್​ ಮನೆಗೆ ಹೋದ ಮೊದಲ ದಿನವೇ ಲೋ ಶುಗರ್​ ಕಾರಣಕ್ಕೆ ರವಿ ಬೆಳಗೆರೆ ಆಸ್ಪತ್ರೆಗೆ ತೆರಳುವ ಕಾರಣ ಮನೆಯಿಂದ ಹೊರ ನಡೆಯಬೇಕಾಯಿತು. ನಂತ್ರ ದೊಡ್ಡ ಮನೆಗೆ ವಾಪಸ್​ ಆಗಿದ್ದು, ಈ ಶನಿವಾರದವರೆಗೆ ಗೆಸ್ಟ್​​ ಆಗಿ ಇರುವುದು ಹಳೆಯ ವಿಚಾರ.

ಸದ್ಯ 18 ಸದಸ್ಯರಲ್ಲಿ ಮೊತ್ತೊಬ್ಬ ಸದಸ್ಯನಿಗೆ ಮನೆಯಿಂದ​ ಹೊರಗೆ ಹೋಗಲು ಬಿಗ್​ ಬಾಸ್​ ಸೂಚಿಸಿದ್ದಾರೆ. ಹೌದು, ಡ್ಯಾನ್ಸರ್​ ಕಿಶನ್​​ಗೆ ಜಾಂಡೀಸ್​ ಇರುವ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕಾಯಿಲೆ ಉಲ್ಬಣವಾದ್ರೆ ಕಿಶನ್​​ಗೆ ಬಿಗ್​ ಬಾಸ್​ ಮನೆಯಲ್ಲಿ ಆಟವಾಡಲು ಸಾಧ್ಯವಾಗದೇ ಇರಬಹುದು.

ಇನ್ನೊಂದು ವಿಚಾರ ಅಂದ್ರೆ ಈ ವಾರ ಕಿಶನ್​ ನಾಮಿನೇಟ್​ ಆಗಿರಲಿಲ್ಲ. ತಮ್ಮ ಆಟಗಳನ್ನು ಸೇಫ್​ ಆಗಿಯೇ ಮುಗಿಸಿರುವ ಕಿಶನ್​​ ನಾಮಿನೇಟ್​​ ಜಾಲದಿಂದ ತಪ್ಪಿಸಿಕೊಂಡಿದ್ರು. ಇನ್ನು ಇಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮವಿದ್ದು, ದೊಡ್ಡ ಮನೆಯಿಂದ ಯಾರೆಲ್ಲ​ ಹೋಗ್ತಾರೆ, ಯಾರೆಲ್ಲ ಉಳಿತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Intro:Body:ಆಸ್ಪತ್ರೆಗೆ ಹೋದ್ರು ಕಿಶನ್
ಕನ್ಫೆಷನ್ ರೂಮಿಗೆ ಕಿಶನ್ ಅವರನ್ನು ಕರೆದ ಬಿಗ್ ಬಾಸ್‌, ನಿಮಗೆ ಜಾಂಡೀಸ್ ಇದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ಬಿಗ್ ಬಾಸ್ ಹೇಳಿದರು. ಇಲ್ಲಿರುವ ಕಪ್ಪು ಪಟ್ಟಿ ಯನ್ನು ಕಣ್ಣಿಗೆ ಹಾಕಿಕೊಂಡು ಬರುವಂತೆ ಬಿಗ್ ಬಾಸ್ ಆದೇಶಿಸಿದರು.
ಬಳಿಕ, ತಂದೆ_ತಾಯಿ ಬಗ್ಗೆ ಮಾತನಾಡುವುದನ್ನು ಇಂದೂ ಕೂಡ ಕೆಲ ಸದಸ್ಯರು ಮುಂದುವರೆಸಿದರು. ವಾಸುಕಿ ವೈಭವ್ ರಾಮ ರಾಮ ರೇ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಮ್ಮ ತಂದೆ ನಿಧನರಾದದನ್ನು ವಿವರಿಸುತ್ತಾ ಗದ್ಘದಿತರಾದರು.. ನೋವು ತಡೆಯಲಾಗದೆ ಮನೆಯೊಳಗೆ ಹೋಗಿ ಕಣ್ಣೀರು ಹಾಕಿದರು.
https://www.facebook.com/102459466602897/posts/1385542014961296/
ಹಾಗೆಯೇ, ಪ್ರಿಯಾಂಕ ತಮ್ಮ ಮನೆಯ ಗೃಹಪ್ರವೇಶದ ಹಿಂದಿನ ದಿನ ತಮ್ಮ ತಂದೆಯನ್ನು ಕಳೆದುಕೊಂಡ ಸನ್ನಿವೇಶವನ್ನು ವಿವರಿಸುತ್ತಾ ಕಣ್ಣೀರಿಟ್ಟರು.
ದೀಪಿಕಾ ಮಾತನಾಡಿ, ನಾನು ತಂದೆಯನ್ನು ಕಳೆದುಕೊಂಡಿದ್ದೇನೆ. ಆದರೆ, ಎಮೊಷನಲ್ ಆಗಲು ಇಷ್ಟಪಡುವುದಿಲ್ಲ. ನನಗೆ ಹೆಚ್ಚಿನ ಗೆಳತಿಯರಿಲ್ಲ. ರಿಸರ್ವ್ ನಾನು‌ ನನಗೆ ನನ್ನ ತಾಯಿಯೇ ಎಲ್ಲಾ ಎಂದರು.

https://www.facebook.com/102459466602897/posts/1385542818294549/
ಇನ್ನೂ ಗುಣಚೀಲ ಟಾಸ್ಕ್ ನಲ್ಲಿ ಹಳದಿ ಗುಂಪಿನ ಸದಸ್ಯರು ಆಡಿದರು. ಅದರಲ್ಲಿ ಗುರುಲಿಂಗಸ್ವಾಮಿ ಗೆದ್ದರು. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.