ETV Bharat / sitara

ನಟಿ ಆರೋಹಿ ಜೊತೆ ಈಟಿವಿ ಭಾರತ​ ಚಿಟ್​​​ಚಾಟ್​...ದೃಶ್ಯ-2 ಚಿತ್ರದ ಬಗ್ಗೆ ಏನೆಲ್ಲ ಹೇಳಿದ್ರು!

author img

By

Published : Aug 24, 2021, 6:14 PM IST

ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ದೃಶ್ಯ-2 ಚಿತ್ರದಲ್ಲಿ ನಟಿ ಆರೋಹಿ ನಟನೆ ಮಾಡಿದ್ದು, ಇದರಲ್ಲಿನ ತಮ್ಮ ಅನುಭವದ ಬಗ್ಗೆ ಮಾತನಾಡಿದ್ದಾರೆ.

Actor Arohinarayan chitchat
Actor Arohinarayan chitchat

ಕ್ರೇಜಿಸ್ಟಾರ್​ ಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ ಚಿತ್ರದಲ್ಲಿ ಮಗಳ ಪಾತ್ರದಲ್ಲಿ ಗಮನ ಸೆಳೆದಿರುವ ನಟಿ ಆರೋಹಿ ನಾರಾಯಣ್​ ಈಗಾಗಲೇ ಭೀಮಸೇನ ನಳಮಹಾರಾಜ ಹಾಗೂ ಶಿವಾಜಿ ಸುರತ್ಕಲ್ ಚಿತ್ರದಲ್ಲಿ ನಟನೆ ಮಾಡಿ ಭರವಸೆ ಮೂಡಿಸಿದ್ದಾರೆ. ಇದೀಗ ದೃಶ್ಯ 2 ಸಿನಿಮಾದಲ್ಲಿ ಮತ್ತೆ ರವಿಚಂದ್ರನ್ ಮಗಳಾಗಿ ನಟಿಸುತ್ತಿದ್ದಾರೆ.

ಬಹುತೇಕ ಸಿನಿಮಾ ಚಿತ್ರೀಕರಣ ಮುಗಿಸಿರುವ ದೃಶ್ಯ 2 ಸಿನಿಮಾದ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿರುವ ನಟಿ ಆರೋಹಿ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.

ನಟಿ ಆರೋಹಿ ಜೊತೆ ಈಟಿವಿ ಭಾರತ​ ಚಿಟ್​ಚಾಟ್

ಮೊದಲ ದೃಶ್ಯ ಸಿನಿಮಾಗೂ, ದೃಶ್ಯ-2 ಸಿನಿಮಾಗೂ ಬಹಳ ವ್ಯತ್ಯಾಸವಿದೆ. ಪಾರ್ಟ್​​ ಒನ್​ ಚಿತ್ರದಲ್ಲಿ ನಾನು ಯಾವುದೇ ರೀತಿಯ ನಟನಾ ಸ್ಕೂಲ್​ಗೆ ಸೇರಿಕೊಳ್ಳದೇ ಆ್ಯಕ್ಟ್​ ಮಾಡಿದ್ದೇನು. ಆದರೆ, ದೃಶ್ಯ ಪಾರ್ಟ್-2 ನಲ್ಲಿ ನಟನೆ ಬಗ್ಗೆ ಸಾಕಷ್ಟು ಕಲಿತಿದ್ದೇನೆ ಎಂದಿದ್ದಾರೆ.

ದೃಶ್ಯ-2 ಚಿತ್ರದಲ್ಲಿ ರವಿಚಂದ್ರನ್, ನಿರ್ದೇಶಕ ಪಿ ವಾಸು, ನಟಿ ನವ್ಯಾ ನಾಯರ್ ಅವರಿಂದ ಸಾಕಷ್ಟು ವಿಚಾರ ಕಲಿತುಕೊಂಡಿದ್ದೇನೆ. ರವಿಚಂದ್ರನ್ ಸರ್​ ಅವರನ್ನ ನಾನು ಮೂರು ಶೇಡ್​ನಲ್ಲಿ ನೋಡಿದ್ದೀ‌ನಿ. ನಟನಾಗಿ, ನಿರ್ದೇಶಕನಾಗಿ, ತಂದೆಯಾಗಿ ರವಿ ಸರ್​​ ಅವರನ್ನ ನೋಡಿರುವ ನಾನೇ ಲಕ್ಕಿ ಎಂದು ಆರೋಹಿ ಹೇಳಿದ್ದಾರೆ.

ಇದೇ ವೇಳೆ, ರವಿಚಂದ್ರನ್​ ನಟನೆ ಮಾಡಿರುವ ಸಿಪಾಯಿ, ಕನಸುಗಾರ ಸಿನಿಮಾ ಅಂದರೆ ನನ್ನಗೆ ಅಚ್ಚುಮೆಚ್ಚು. ಇದರ ಜೊತೆಗೆ ದೃಶ್ಯ-2 ಸಿನಿಮಾದಲ್ಲಿ ರವಿಚಂದ್ರನ್ ಅಮೋಘವಾಗಿ ಅಭಿನಯ ಮಾಡಿದ್ದಾರೆಂದು ಆರೋಹಿ ಹೇಳಿಕೊಂಡರು.

ನಿರ್ದೇಶಕ ಪಿ. ವಾಸು ಸರ್ ನೋಡಿದಾಗ, ಭಯ, ಭಕ್ತಿ ಶುರುವಾಗುತ್ತೆ. ನನಗೆ ವಿದ್ಯೆ ಕಲಿಸಿದ ಗುರುಗಳನ್ನ ಬಿಟ್ಟರೆ, ಪಿ. ವಾಸು ಸರ್ ಅವರನ್ನ ನೋಡಿದರೆ ತುಂಬಾ ಗೌರವ ಭಾವನೆ ಮೂಡುತ್ತದೆ ಎಂದು ಆರೋಹಿ ಹೇಳಿಕೊಂಡಿದ್ದಾರೆ.

ನನಗೆ ಚಿಕ್ಕ ವಯಸ್ಸಿನಿಂದಲೂ ಅನಂತ್ ನಾಗ್ ಸರ್ ಅಂದರೆ ಅಚ್ಚುಮೆಚ್ಚು, ನನಗೆ ಅವರ ಮೇಲೆ ಸಣ್ಣ ವಯಸ್ಸಿನಿಂದಲೂ ಕ್ರಶ್ ಆಗಿತ್ತು ಎಂದು ಆರೋಹಿ ತನ್ನ ಫೇವರಿಟ್ ಹೀರೋ ಬಗ್ಗೆ ಮನದಾಳ ಬಿಚ್ಚಿಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.