6 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 3D ಸಿನಿಮಾ 'ಸಾಲ್ಮನ್'

author img

By

Published : May 25, 2020, 2:59 PM IST

3D movie Salmon release in 6 languages
6 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 3D ಸಿನಿಮಾ 'ಸಾಲ್ಮನ್' ()

ಶಲೀಲ್ ಕಲೂರ್ ನಿರ್ದೇಶಿಸಿರುವ 3ಡಿ ಸಿನಿಮಾ ಸಾಲ್ಮನ್​ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿ ಒಟ್ಟು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ.

ದಕ್ಷಿಣ ಭಾರತದ ಪ್ರತಿಭಾನ್ವಿತ ನಿರ್ದೇಶಕ ಎಂದೇ ಖ್ಯಾತಿಯಾಗಿರುವ ಶಲೀಲ್ ಕಲೂರ್ ನಿರ್ದೇಶಿಸಿರುವ 3ಡಿ ಸಿನಿಮಾ ಸಾಲ್ಮನ್​ ಆರು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ.

3D movie Salmon release in 6 languages
6 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 3D ಸಿನಿಮಾ 'ಸಾಲ್ಮನ್'
3D movie Salmon release in 6 languages
6 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 3D ಸಿನಿಮಾ 'ಸಾಲ್ಮನ್'

ಖ್ಯಾತ ಗಾಯಕರಾದ ಜೇಸುದಾಸ್ ಅವರ ಪುತ್ರ ವಿಜಯ್ ಜೇಸುದಾಸ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಇದೊಂದು ರೊಮ್ಯಾಂಟಿಕ್ ಸಸ್ಪೆನ್ಸ್ ಚಿತ್ರವಾಗಿದೆ. ಸಾಲ್ಮನ್​ ಚಿತ್ರವನ್ನ ಆಕರ್ಷಕ ತಾಣಗಳಾದ ಕುಲ-ಮನಾಲಿ, ರಾಮೋಜಿ ಫಿಲ್ಮ್​ ಸಿಟಿ, ದುಬೈ, ಮಲೇಷ್ಯಾ ಮುಂತಾದ ಕಡೆ ಚಿತ್ರೀಕರಿಸಲಾಗಿದೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲೂ ತೆರೆಕಾಣಲಿದೆ. ಎಂ.ಜೆ.ಎಸ್. ಮೀಡಿಯಾ ಬ್ಯಾನರ್ ಈ ಚಿತ್ರವನ್ನು ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಡಾ. ಟಿ.ಎನ್.ವಿನೀತ್ ಭಟ್, ಶಾಜು ಥಾಮಸ್, ಜೋಸ್.ಡಿ. ಪೇಕಾಟ್ಟಿಲ್ ಮತ್ತು ಜಾಯಿಸ್.ಟಿ. ಪೇಕಾಟ್ಟಿಲ್ ಇದರ ನಿರ್ಮಾಪಕರಾಗಿದ್ದಾರೆ.

3D movie Salmon release in 6 languages
6 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 3D ಸಿನಿಮಾ 'ಸಾಲ್ಮನ್'
3D movie Salmon release in 6 languages
6 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 3D ಸಿನಿಮಾ 'ಸಾಲ್ಮನ್'

ಹುಟ್ಟಿದ ತಕ್ಷಣವೇ ಅನಾಥವಾಗುವ ವೈಶಿಷ್ಟ್ಯತೆಯನ್ನು ಹೊಂದಿರುವ ಸಾಲ್ಮನ್ ಮೀನಿನ ಹೆಸರನ್ನು ಈ ಚಿತ್ರಕ್ಕೆ ಇಡಲಾಗಿದ್ದು, ಅದು ತನ್ನ ಬದುಕಿನಲ್ಲಿ ಎದುರಾಗುವ ಪ್ರತಿಕೂಲ ಪರಿಸ್ಥಿತಿಗಳನ್ನು ದಾಟಿ ಹಲವಾರು ಉಪಖಂಡ ಪ್ರದೇಶಗಳನ್ನು ಹೇಗೆ ಸೇರುತ್ತದೆಯೋ, ಅದೇ ರೀತಿ ಕಥಾನಾಯಕನ ಜೀವನದ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಘಟನಾವಳಿಗಳೇ ಈ ಸಿನಿಮಾದ ಕಥಾವಸ್ತುವಾಗಿದೆ. ಅಲ್ಲದೆ, ದುಬೈನಲ್ಲಿ ತನ್ನ ಕುಟುಂಬ ಸಮೇತ ನೆಲೆಸಿ ಒಮ್ಮೆ ಹುಟ್ಟೂರಿಗೆ ಆಗಮಿಸಿದ ವೇಳೆ ಅನಿರೀಕ್ಷಿತವಾಗಿ ನಡೆಯುವ ದಾರುಣ ಸಾವು, ಆ ಬಳಿಕ ಅನಾವರಣಗೊಳ್ಳುವ ಆತ್ಮದ ಹಿನ್ನೆಲೆಯು ಈ ಚಿತ್ರದ ಕಥಾಹಂದರವಾಗಿದೆ.

ಚಿತ್ರದಲ್ಲಿ ರಾಹುಲ್ ಮೆನನ್ ಕ್ಯಾಮರಾ ನಿರ್ವಹಿಸಿದ್ದಾರೆ. ಇನ್ನು,ಜೀಮೋನ್ ಪಲ್ಲೇಲಿ 3 ಡಿ ಸ್ಟೀರಿಯೋಸ್ಕಾಪಿಕ್ ಜವಾಬ್ದಾರಿಯನ್ನೂ ಹೊತ್ತಿದ್ದು, ಸದ್ಯದಲ್ಲೇ ಬಿಡುಗಡೆಗೆ ಸಿದ್ಧವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.