ETV Bharat / sitara

ವಿಡಿಯೋ: ಅಮ್ಮನ ಹಸ್ತಾಕ್ಷರವನ್ನೇ 'ಟ್ಯಾಟೂ' ಹಾಕಿಸಿಕೊಂಡ ನಟಿ ಜಾಹ್ನವಿ

author img

By

Published : Oct 8, 2021, 4:34 PM IST

Updated : Oct 8, 2021, 4:50 PM IST

ನಟಿ ಜಾಹ್ನವಿಗೆ ಅಮ್ಮ ಶ್ರೀದೇವಿ ಅಂದ್ರೆ ತುಂಬಾ ಇಷ್ಟ. ದಿಢೀರ್​​​​​​​​ ಮೃತಪಟ್ಟ ತಾಯಿಯನ್ನು ನಟಿ ಜಾಹ್ನವಿ ಕಪೂರ್​ ಹಾಗೂ ಖುಷಿ ಕಪೂರ್​ ತುಂಬಾ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಇದನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳುತ್ತಿರುತ್ತಾರೆ..

Janhvi Kapoor gets tattoo of Sridevi's handwritten note
ನಟಿ ಜಾಹ್ನವಿ ಟ್ಯಾಟೂ ಹಾಕಿಸಿಕೊಂಡಿರುವುದು

ಮನಸ್ಸಿಗೆ ತುಂಬಾ ಹತ್ತಿರವಾದವರನ್ನು ಅಷ್ಟು ಸುಲಭವಾಗಿ ಮರೆಯೋದಕ್ಕೆ ಸಾಧ್ಯವಾಗಲ್ಲ. ಹೀಗಾಗಿಯೇ, ಕೆಲವರು ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳಲು, ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ 'ಟ್ಯಾಟೂ' ಮೊರೆ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದು ಕೇವಲ ಫ್ಯಾಷನ್​ ಅನ್ನೋದಕ್ಕಿಂತ ಭಾವನಾತ್ಮಕತೆಯ ಸಂಕೇತವಾಗಿ ಜನಜನಿತವಾಗುತ್ತಿದೆ. ಇದೀಗ ಬಾಲಿವುಡ್​ ನಟಿ ಜಾಹ್ನವಿ ಕಪೂರ್​ ಕೂಡಾ ಇಂಥದ್ದೇ ಕೆಲಸ ಮಾಡಿದ್ದಾರೆ.

ನಟಿ ಜಾಹ್ನವಿ ಕಪೂರ್

ನಟಿ ಜಾಹ್ನವಿಗೆ ಅಮ್ಮ ಶ್ರೀದೇವಿ ಅಂದ್ರೆ ತುಂಬಾ ಇಷ್ಟ. ದಿಢೀರ್​​ನೇ ಮೃತಪಟ್ಟ ತಾಯಿಯನ್ನು ನಟಿ ಜಾಹ್ನವಿ ಕಪೂರ್​ ಹಾಗೂ ಖುಷಿ ಕಪೂರ್​ ತುಂಬಾ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಇದನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಅಮ್ಮನ ನೆನಪನ್ನು ಸದಾ ಹಸಿರಾಗಿಸುವ ಪ್ರಯತ್ನಕ್ಕೆ ಕೈ ಹಾಕಿರುವ ನಟಿ ಜಾಹ್ನವಿ ಅವರು 'ಟ್ಯಾಟೂ' ಮೊರೆ ಹೋಗಿದ್ದಾರೆ. 'ಐ ಲವ್​ ಯೂ ಮೈ ಲಬ್ಬು' ಎಂಬ ಅಮ್ಮಳ ಹಸ್ತಾಕ್ಷರವನ್ನೇ ತನ್ನ ಕೈಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಅಮ್ಮನ ನೆನಪನ್ನು ಭದ್ರಪಡಿಸಿಕೊಂಡಿದ್ದಾರೆ.

'ಐ ಲವ್​ ಯೂ ಮೈ ಲಬ್ಬು, ಯು ಆರ್​ ದಿ ಬೆಸ್ಟ್​ ಬೇಬಿ ಇನ್​ ದಿ ವರ್ಲ್ಡ್​' ಎಂದು ದಿವಂಗತ ನಟಿ ಶ್ರೀದೇವಿ ಅವರು ಮಗಳಿಗಾಗಿ ತಮ್ಮ ಹಸ್ತಾಕ್ಷರದಲ್ಲಿ ಬರೆದುಕೊಂಡಿದ್ದರು. ಇದನ್ನು ಈ ಹಿಂದೆ ಜಾಹ್ನವಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ 'ಮಿಸ್ ಯೂ' ಎಂದು ಬರೆದುಕೊಂಡಿದ್ದರು. ಇದೀಗ ಅದನ್ನೇ ತಮ್ಮ ಕೈಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೇ, ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

ಓದಿ: ಧಾರ್ಮಿಕವಾಗಿ ಏನೇ ಮಾಡಿದ್ರೂ ಪತಿ ನಿಕ್‌ ಜೋನಾಸ್‌ ಸಂಪೂರ್ಣ ಬೆಂ'ಬಲ' - ನಟಿ ಪ್ರಿಯಾಂಕಾ ಚೋಪ್ರಾ

Last Updated :Oct 8, 2021, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.