ETV Bharat / sitara

"ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾನೆ": ವಿವಾದಾತ್ಮಕ ಹೇಳಿಕೆ ನೀಡಿದ​ ನಟಿ ಶ್ವೇತಾ ತಿವಾರಿ

author img

By

Published : Jan 27, 2022, 2:07 PM IST

ವೆಬ್ ಸರಣಿ ಪ್ರಚಾರದ ವೇಳೆ ನಟಿ ಶ್ವೇತಾ ತಿವಾರಿ ನೀಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ತನಿಖೆ ನಡೆಸಲು ಭೋಪಾಲ್ ಪೊಲೀಸ್ ಕಮಿಷನರ್​ಗೆ ಮಧ್ಯಪ್ರದೇಶದ ಗೃಹ ಸಚಿವರು ಸೂಚನೆ ನೀಡಿದ್ದಾರೆ.

Shweta Tiwari
Shweta Tiwari

ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ "ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾನೆ" ಎಂಬ ಹೇಳಿಕೆಯನ್ನು ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನು ಖಂಡಿಸಿರುವ ಮಧ್ಯಪ್ರದೇಶದ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದಾರೆ.

ಮಹಾಭಾರತ ಧಾರಾವಾಹಿಯಲ್ಲಿ ಭಗವಾನ್ ಕೃಷ್ಣಾ ಖ್ಯಾತಿ ಸೌರಭ್ ರಾಜ್ ಜೈನ್ ಜೊತೆ ಫ್ಯಾಷನ್ ಸಂಬಂಧಿತ ವೆಬ್ ಸರಣಿಯೊಂದರಲ್ಲಿ ಶ್ವೇತಾ ತಿವಾರಿ ನಟಿಸಿದ್ದು, ಮಧ್ಯಪ್ರದೇಶದ ಭೋಪಾಲ್​ನಲ್ಲಿ ಇತ್ತೀಚೆಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಶ್ವೇತಾ, "ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾನೆ" (ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೇ) ಎಂದು ಮಾತಿನ ಭರದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ದೇವರ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಕ್ಕೆ ಅನೇಕರು ಇದರ ವಿರುದ್ಧ ಕಿಡಿಕಾರಿದ್ದಾರೆ.

ವೆಬ್ ಸರಣಿ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ​ ನಟಿ ಶ್ವೇತಾ ತಿವಾರಿ

ಇದನ್ನೂ ಓದಿ: ಸೈಫ್​-ಅಮೃತಾ ಮಗನೊಂದಿಗೆ ಶ್ವೇತಾ ತಿವಾರಿ ಮಗಳು : ಕ್ಯಾಮೆರಾ ನೋಡಿ ಮುಖ ಮುಚ್ಚಿಕೊಂಡ ಪಲಕ್

ಇದನ್ನು ತೀವ್ರವಾಗಿ ಖಂಡಿಸಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಇದು ಆಕ್ಷೇಪಾರ್ಹ ಹೇಳಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ 24 ಗಂಟೆಗಳ ಒಳಗೆ ವರದಿಯನ್ನು ಸಲ್ಲಿಸಲು ಭೋಪಾಲ್ ಪೊಲೀಸ್ ಕಮಿಷನರ್​ಗೆ ಸೂಚನೆ ನೀಡಿದ್ದೇನೆ. ವರದಿ ಸಲ್ಲಿಸಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Shweta Tiwari
ಶ್ವೇತಾ ತಿವಾರಿ

ಅನೇಕ ಟಿವಿ ಶೋಗಳು, ಧಾರಾವಾಹಿಗಳು ಹಾಗೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ಶ್ವೇತಾ ತಿವಾರಿ ಹಿಂದಿಯ ಬಿಗ್​ಬಾಸ್​-4ರ ವಿಜೇತೆ ಕೂಡಾ ಆಗಿದ್ದಾರೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.