ETV Bharat / sitara

'ಅಂಥ ಕೆಲಸ ಮಾಡಿದರೆ ಇದೇ ಗತಿ ಬರುತ್ತೆ'- ಟ್ರೋಲಿಗರ ಬಾಯಿಗೆ ಸಿಕ್ಕ ರಾಜ್ ​ಕುಂದ್ರಾ ಹೊಸ ಅವತಾರ

author img

By

Published : Mar 16, 2022, 10:06 AM IST

ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಪ್ರಕರಣದಲ್ಲಿ ಸಿಲುಕಿರುವ ರಾಜ್ ​ಕುಂದ್ರಾ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ರಾಜ್​ ಕುಂದ್ರಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.

raj kundra new look
ರಾಜ್ ​ಕುಂದ್ರಾರ ಹೊಸ ಅವತಾರ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ​ಕುಂದ್ರಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಈ ಅವತಾರ ಕಂಡ ನೆಟ್ಟಿಗರು ರಾಜ್​ ಕುಂದ್ರಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪದ ಮೇಲೆ ರಾಜ್ ​ಕುಂದ್ರಾ ಜೈಲು ಪಾಲಾಗಿದ್ದರು. ಕೆಲ ಸಮಯದ ಹಿಂದೆ ಜಾಮೀನಿನ ಮೇಲೆ ಹೊರಬಂದಿರುವ ಕುಂದ್ರಾ ಸಾಮಾಜಿಕವಾಗಿ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಕ್ಯಾಮರಾ ಕಣ್ಣಿಗೆ ಬೀಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ರಾಜ್ ​ಕುಂದ್ರಾ.

ಇತ್ತೀಚೆಗೆ ಮುಂಬೈನ ಮೂವಿ ಥಿಯೇಟರ್​ಗೆ ರಾಜ್ ​ಕುಂದ್ರಾ ತಮ್ಮ ಕೆಲ ಕುಟುಂಬಸ್ಥರೊಂದಿಗೆ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇವರು ತಮ್ಮ ಮುಖ ಮುಚ್ಚುವಂತಹ ಬ್ಲ್ಯಾಕ್ ಜಾಕೆಟ್​ ಧರಿಸಿದ್ದರು, ಮುಖ ಸಂಪೂರ್ಣವಾಗಿ ಮುಚ್ಚಿದ್ದು ಅದಕ್ಕೆ ಬ್ಲ್ಯಾಕ್​ ಸನ್ ಗ್ಲಾಸ್ ಹಾಕಿದ್ದಾರೆ. ಈ ಪೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದ್ದು, ಕುಂದ್ರಾ ಟ್ರೋಲಿಗರ ಬಾಯಿಗೆ ಸಿಕ್ಕಿಬಿದ್ದಂತಾಗಿದೆ.

ಇದನ್ನೂ ಓದಿ: ಒಟಿಟಿಗೆ ಎಂಟ್ರಿ ಕೊಟ್ಟ ಬಾಲಿವುಡ್​ ಬಾದ್​ಶಾ: ಶೀಘ್ರದಲ್ಲೇ ಅದ್ಭುತ ನಡೆಯುತ್ತೆ ಎಂದ ಶಾರುಖ್

ಅಂಥ ಕೆಲಸ ಮಾಡಿದರೆ ಇದೇ ಗತಿ ಬರುವುದು ಎಂದು ಒಬ್ಬರು ಟ್ರೋಲ್​ ಮಾಡಿದ್ದರೆ, ಮುಖ ತೋರಿಸಲು ಯೋಗ್ಯತೆ ಇಲ್ಲದ ಕಾರಣ ಇಂತಹ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ. ಒಟ್ಟಾರೆ ರಾಜ್ ​ಕುಂದ್ರಾ ಅವರನ್ನು ಟ್ರೋಲಿಗರು ಕಾಮೆಂಟ್​ಗಳ ಮೂಲಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.