ETV Bharat / sitara

ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದ ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌: ನಿಯಮ ಉಲ್ಲಂಘನೆ ಆರೋಪ

author img

By

Published : Dec 20, 2021, 6:30 PM IST

Updated : Dec 20, 2021, 6:45 PM IST

ಬಾಲಿವುಡ್ ನಟಿ ಸಾರಾ ಅಲಿ ಖಾನ್ ವಿಶ್ವವಿಖ್ಯಾತ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಂದಿ ಹಾಲ್‌ ಮೂಲಕ ಅವರು ಮಹಾಕಾಳಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ, ದೇವಸ್ಥಾನದ ಆಡಳಿತ ಮಂಡಳಿ, ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.

sarali_mahakal
ಉಜ್ಜಯಿನಿ ಮಹಾಕಾಳಿ ದರ್ಶನ ಪಡೆದ ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌; ನಿಯಮ ಉಲ್ಲಂಘನೆ ಆರೋಪ

ಉಜ್ಜಯಿನಿ(ಮದ್ಯಪ್ರದೇಶ): ರಾಜಕಾರಣಿಗಳು, ಸೆಲೆಬ್ರೆಟಿಗಳು ಸೇರಿದಂತೆ ಎಲ್ಲ ವಿಐಪಿಗಳು ಆಗಾಗ ಉಜ್ಜಿಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ದೇವರ ದರ್ಶನ ಪಡೆಯುತ್ತಲೇ ಇರುತ್ತಾರೆ. ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ನಿನ್ನೆ ಸಂಜೆ ಮಹಾಕಾಳಿ ದೇವಾಲಯಕ್ಕೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದಿದ್ದಾರೆ.

ಸಂಜೆಯ ಆರತಿಯಲ್ಲಿ ಭಾಗವಹಿಸಿದ್ದ ಸಾರಾ, ಇಡೀ ಕಾರ್ಯಕ್ರಮ ಮುಗಿಯುವವರೆಗೆ ದೇವಾಲಯದಲ್ಲೇ ಇದ್ದರು. ಬಳಿಕ ಅಲ್ಲಿಂದ ಇಂದೋರ್‌ಗೆ ವಾಪಸ್‌ ಆಗಿದ್ದಾರೆ. ಇಂದೋರ್‌ನಲ್ಲಿ ನಡೆಯುತ್ತಿದ್ದ ಸೈಫ್‌ ಅಲಿಖಾನ್‌ ನಟನೆಯ ಚಿತ್ರದ ಶೂಟಿಂಗ್‌ಗೆ ಬಂದಿದ್ದಾಗ ಸಾರಾ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳಿಂದ ನಿಯಮ ಉಲ್ಲಂಘನೆ ಆರೋಪ

ನಂದಿ ಹಾಲ್‌ನಿಂದ ದೇವಿ ದರ್ಶನ ಪಡೆಯಲು ಸಾರಾ ಅಲಿ ಖಾನ್‌ಗೆ ದೇವಸ್ಥಾನದ ಆಡಳಿತ ಮಂಡಳಿ, ಅಧಿಕಾರಿ ಅವಕಾಶ ನೀಡಿದ್ದಾರೆ. ಅವರಿಗೆ ಸಂಪೂರ್ಣ ಸೌಲಭ್ಯಗಳನ್ನು ನೀಡಿ ಮಹಾಕಾಳಿ ದೇವಾಲಯದಲ್ಲಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಭಾನುವಾರ ಜನಸಂದಣಿ ಹೆಚ್ಚಿದ್ದರಿಂದ ಬ್ಯಾರಿಕೇಡ್‌ ಹಾಕಿ ಎಲ್ಲರಿಗೂ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬ್ಯಾರಿಕೇಡ್‌ ಹಾಕಿದ್ದ ಮೊದಲ ಸಾಲಿನಲ್ಲಿ ವಿಐಪಿಗಳಿಗೆ ದರ್ಶನದ ಅವಕಾಶ ಕಲ್ಪಿಸಲಾಗಿತ್ತು. ಸಂಜೆ ಆರತಿಯ ಸಮಯದಲ್ಲಿ ಸಾರಾ ಅಲಿ ಆಗಮಿಸಿದಾಗ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ನಂದಿ ಸಭಾಂಗಣದಿಂದ ದರ್ಶನ ಕೊಡಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪನಾಮಾ ಪೇಪರ್ಸ್ ಲೀಕ್​ ಪ್ರಕರಣ: ಐಶ್ವರ್ಯಾ ರೈ ಬಚ್ಚನ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್, ವಿಚಾರಣೆಗೆ ಹಾಜರು

Last Updated : Dec 20, 2021, 6:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.