ETV Bharat / sitara

ಕೊನೆಗೂ ಪ್ರಿಯತಮನ ಬಗ್ಗೆ ಬಾಯ್ಬಿಟ್ಟ ನಟಿ ರಾಕುಲ್​ ಪ್ರೀತ್​ ಸಿಂಗ್!... ಯಾರವನು?

author img

By

Published : Nov 22, 2021, 2:17 PM IST

ನಟಿ ರಾಕುಲ್​ ಪ್ರೀತ್​ ಸಿಂಗ್ (Actress Rakul preet singh) ಕೊನೆಗೂ ತಮ್ಮ ಪ್ರಿಯತಮನ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅವರ ಮತ್ತು ನಟ - ನಿರ್ಮಾಪಕ ಜಾಕಿ ಭಗ್ನಾನಿ (Actor/producer Jackky Bhagnani)ಮಧ್ಯೆ ಹಲವು ದಿನಗಳಿಂದ ನಡೆಯುತ್ತಿದ್ದ ಗುಸುಗುಸು ಸುದ್ದಿಗಳಿಗೆ ಕೊನೆಗೂ ರಾಕುಲ್​ ಷರಾ ಬರೆದಿದ್ದಾರೆ.

rakul preet singh
ನಟಿ ರಾಕುಲ್​ ಪ್ರೀತ್​ ಸಿಂಗ್

ಹೈದರಾಬಾದ್(ತೆಲಂಗಾಣ): ಬಾಲಿವುಡ್​ನ ಬ್ಯುಸಿ ನಟಿಯರಲ್ಲಿ ಒಬ್ಬರಾದ ರಾಕುಲ್​ ಪ್ರೀತ್​ ಸಿಂಗ್​ (Actress Rakul preet singh) ಕೊನೆಗೂ ತಮ್ಮ ಪ್ರಿಯತಮನ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅವರ ಮತ್ತು ನಟ - ನಿರ್ಮಾಪಕ ಜಾಕಿ ಭಗ್ನಾನಿ(Actor/producer Jackky Bhagnani) ಮಧ್ಯೆ ಹಲವು ದಿನಗಳಿಂದ ನಡೆಯುತ್ತಿದ್ದ ಗುಸುಗುಸು ಸುದ್ದಿಗಳಿಗೆ ಕೊನೆಗೂ ರಾಕುಲ್​ ಷರಾ ಬರೆದಿದ್ದಾರೆ.

ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ರಾಕುಲ್​, ನನ್ನ ವೈಯಕ್ತಿಕ ಜೀವನದ ಬಗ್ಗೆ ಬೇರೆಯವರು ಕೆಟ್ಟದಾಗಿ ಬಿಂಬಿಸುವ ಮೊದಲು ನಾನೇ ಈ ವಿಷಯವನ್ನು ಹಂಚಿಕೊಳ್ಳುತ್ತೇನೆ. ಸದ್ಯ ನಾನು ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಡೇಟಿಂಗ್​ (Dating with Jackky Bhagnani) ಮಾಡುತ್ತಿದ್ದೇನೆ. ಈ ವಿಷಯವನ್ನು ಹಂಚಿಕೊಳ್ಳಲು ಖುಷಿಯಾಗುತ್ತದೆ. ಕಾರಣ ನನ್ನ ಜೀವನ ಸುಂದರವಾಗಿಡಲು ಬಯಸುತ್ತೇನೆ ಎಂದಿದ್ದಾರೆ.

ಮದುವೆ ಯಾವಾಗ ಎಂಬ ಪ್ರಶ್ನೆಗೆ, ಈ ಬಗ್ಗೆ ನಾನು ಇನ್ನೂ ಯೋಚಿಸಿಲ್ಲ. ಅದು ಘಟಿಸಿದಾಗ ನಾನೇ ಬಹಿರಂಗಪಡಿಸುತ್ತೇನೆ. ಸದ್ಯಕ್ಕೆ ನಾನು ವೃತ್ತಿ ಜೀವನದ ಮೇಲೆ ಗಮನ ಹರಿಸಿದ್ದೇನೆ ಎಂದು ಮದುವೆ ಆಲೋಚನೆ ಸದ್ಯಕ್ಕಿಲ್ಲ ಎಂದಿದ್ದಾರೆ.

ಕಳೆದ ತಿಂಗಳು ನಡೆದ ರಾಕುಲ್​ರ ಜನ್ಮದಿನದಂದು ಜಾಕಿ ಭಗ್ನಾನಿ ಕಾಣಿಸಿಕೊಂಡ ಬಳಿಕ ಇಬ್ಬರ ಮಧ್ಯೆ ಏನೋ ನಡೀತಿದೆ ಎಂಬ ಸುದ್ದಿ ಬಾಲಿವುಡ್​ನಲ್ಲಿ ಹರಿದಾಡಿತ್ತು. ಇನ್ನು ನಟಿ ರಾಕುಲ್​ ಪ್ರೀತ್​ ಸಿಂಗ್​, ಆಯುಷ್ಮಾನ್​ ಖುರ್ರಾನ್​ರ ಜೊತೆಗೆ 'ಡಾಕ್ಟರ್​ ಜೀ' ಸಿನಿಮಾದಲ್ಲಿ, ಕಾಂಡೋಮ್​ ಕಥೆಯಾಧಾರಿತ 'ಛತ್ರಿವಾಲಾ', ಅಜಯ್​ ದೇವಗನ್​ರ 'ಥ್ಯಾಂಕ್​ ಗಾಡ್​' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.