ETV Bharat / sitara

ಕುಂದ್ರಾ ಮಾಡಿದ್ದು ಪ್ರಚೋದಕ ಚಿತ್ರಗಳು,ಅಶ್ಲೀಲ ಸಿನಿಮಾಗಳಲ್ಲ: ಪತಿಯ ಮುಗ್ಧತೆ ಬಗ್ಗೆ ಪತ್ನಿಯ ಹೇಳಿಕೆ

author img

By

Published : Jul 24, 2021, 6:07 PM IST

Updated : Jul 25, 2021, 12:33 PM IST

ಉದ್ಯಮಿ ರಾಜ್​ ಕುಂದ್ರಾ ಮುಗ್ಧ. ಅವರ ಹೆಸರನ್ನು ಪ್ರಕರಣದಲ್ಲಿ ವಿನಾ ಕಾರಣ ಸೇರಿಸಲಾಗಿದೆ. ಇದೊಂದು ಪಿತೂರಿ. ಲಂಡನ್ ಮೂಲದ ಅವರ ಸಂಬಂಧಿ ಪ್ರದೀಪ್​ ಭಕ್ಷಿ ಇದರ ನಿರ್ಮಾಣದಾತ. ಇನ್ನು ಇದರಲ್ಲಿ ಯಾವ ರೀತಿಯ ಕಂಟೆಂಟ್​ ಇರುತ್ತದೆ ಎಂಬುವುದು ಕೂಡ ನನಗೆ ತಿಳಿದಿಲ್ಲ ಎಂದು ನಟಿ ಶಿಲ್ಪಾ ಶೆಟ್ಟಿ ಪೊಲೀಸರ ಮುಂದೆ ತಮ್ಮ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

Raj Kundra pornography case
ಅಶ್ಲೀಲ ಸಿನಿಮಾಗಳ ನಿರ್ಮಾಣ ಪ್ರಕರಣ

ಹೈದ್ರಾಬಾದ್​: ಅಶ್ಲೀಲ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್​ ​ ಪೊಲೀಸರು ಉದ್ಯಮಿ ರಾಜ್​ ಕುಂದ್ರಾ ಅವರ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಪ್ರಕರಣದ ಹೆಚ್ಚಿನ ಮಾಹಿತಿಗಾಗಿ ರಾಜ್​ ಕುಂದ್ರಾ ಅವರ ಪತ್ನಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರನ್ನು ಪೊಲೀಸರು ಇಂದು ವಿಚಾರಣೆಗೊಳಪಡಿಸಿದರು. ಈ ವೇಳೆ ನಟಿ ಶಿಲ್ಪಾ ಶೆಟ್ಟಿ ಪೊಲೀಸರ ಮುಂದೆ ಹಲವು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

Raj Kundra pornography case
ಅಶ್ಲೀಲ ಸಿನಿಮಾಗಳ ನಿರ್ಮಾಣ ಪ್ರಕರಣ

ರಾಜ್​ ಕುಂದ್ರಾ ಅವರ ಹಾಟ್​ಶಾಟ್ಸ್​​ ಆ್ಯಪ್​ ಬಗ್ಗೆ ನನಗೇನೂ ಗೊತ್ತಿಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದರಲ್ಲಿ ಯಾವ ರೀತಿ ಕಂಟೆಂಟ್​ ಇರುತ್ತದೆ ಎಂಬುದು ಕೂಡ ನನಗೆ ತಿಳಿದಿಲ್ಲ. ಆದರೆ, ಅವುಗಳು ಅಶ್ಲೀಲ ಸಿನಿಮಾಗಳಲ್ಲ ಅನ್ನೋದನ್ನು ಮಾತ್ರ ನಾನು ಖಚಿತವಾಗಿ ಹೇಳಬಲ್ಲೆ.

  • Shilpa Shetty said that she wasn't aware of the exact content of HotShots. She claimed that she has nothing to do with HotShots. She mentioned that erotica is different from porn & her husband Raj Kundra wasn't involved in producing porn content: Mumbai Police Sources

    (File pic) pic.twitter.com/zNJSdzD4U7

    — ANI (@ANI) July 24, 2021 " class="align-text-top noRightClick twitterSection" data=" ">

ಕಾರಣ ಅವರು ನಿರ್ಮಾಣ ಮಾಡಿದ್ದು ಕಾಮೋದ್ರೇಕದ ಚಿತ್ರಗಳು. ಎರಡಕ್ಕೂ ಬಹಳ ವ್ಯತ್ಯಾಸಗಳಿವೆ. ಹಾಗಾಗಿ ನನ್ನ ಗಂಡ ನಿರಪರಾಧಿ. ಹಾಟ್​ಶಾಟ್ಸ್ ಆ್ಯಪ್​ಅನ್ನು ಲಂಡನ್ ಮೂಲದ ನನ್ನ ಪತಿ ರಾಜ್​​ ಕುಂದ್ರಾ ಅವರ ಸಂಬಂಧಿ ಪ್ರದೀಪ್​ ಭಕ್ಷಿ ನಡೆಸುತ್ತಿದ್ದಾರೆ. ಇದರಲ್ಲಿ ರಾಜ್ ​​ಕುಂದ್ರಾ ಅವರ ಯಾವುದೇ ಪಾತ್ರವಿಲ್ಲ. ಅನಗತ್ಯವಾಗಿ ನನ್ನ ಪತಿಯ ಹೆಸರನ್ನು ಇದರಲ್ಲಿ ತಳುಕು ಹಾಕಲಾಗಿದೆ. ಇದೊಂದು ಪಿತೂರಿ ಎಂದು ಶಿಲ್ಪಾ ಶೆಟ್ಟಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

Raj Kundra pornography case
ಅಶ್ಲೀಲ ಸಿನಿಮಾಗಳ ನಿರ್ಮಾಣ ಪ್ರಕರಣ

ಇದನ್ನೂ ಓದಿ: ಪ್ರಭಾಸ್, ದೀಪಿಕಾ & ಬಿಗ್ ಬಿ ಅಭಿನಯಿಸುತ್ತಿರುವ ಚಿತ್ರದ ಶೂಟಿಂಗ್​ ಶುರು... ಯಾವುದಾ ಚಿತ್ರ?

ಅಶ್ಲೀಲ ಚಿತ್ರಗಳ ನಿರ್ಮಾಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಸಹವರ್ತಿ ರಿಯಾನ್ ಥೋರ್ಪ್ ಅವರನ್ನು ಜುಲೈ 27 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ತನಿಖೆ ಪ್ರಗತಿ ಹಂತದಲ್ಲಿದೆ. ಪ್ರಕರಣ ಸಂಬಂಧ ರಾಜ್​​ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಅವರ ಮುಂಬೈ ನಿವಾಸಕ್ಕೆ ನಿನ್ನೆ ಭೇಟಿ ನೀಡಿದ್ದ ಕ್ರೈಂ ಬ್ರಾಂಚ್​ ಪೊಲೀಸರು ಸತತ 6 ಗಂಟೆಗಳ ಕಾಲ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

Last Updated : Jul 25, 2021, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.