ETV Bharat / sitara

'ನೀವು ಹೇಗೆ ಹಣ ಸಂಪಾದಿಸುತ್ತೀರಿ'? ರಾಜ್ ಕುಂದ್ರಾ- ಕಪಿಲ್ ಶರ್ಮಾ ಶೋ ವಿಡಿಯೋ ವೈರಲ್

author img

By

Published : Jul 20, 2021, 10:57 AM IST

ಅಶ್ಲೀಲ ಚಿತ್ರ ನಿರ್ಮಿಸಿ ಮೊಬೈಲ್ ಅಪ್ಲಿಕೇಶನ್​ಗಳಲ್ಲಿ ಹರಿಬಿಟ್ಟ ಆರೋಪದಲ್ಲಿ ಬಂಧಿತರಾಗಿರುವ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಭಾಗವಹಿಸಿದ್ದ ಟಿವಿ ಕಾರ್ಯಕ್ರಮದ ಹಳೆಯ ವಿಡಿಯೋ ಒಂದು ಈಗ ವೈರಲ್ ಆಗಿದೆ.

Old video of Kapil Sharma asking Raj Kundra how he earns money goes viral
ಕಪಿಲ್ ಶರ್ಮಾ ಶೋ ವಿಡಿಯೋ ವೈರಲ್

ಹೈದರಾಬಾದ್ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ನಿರ್ಮಿಸಿ ಮೊಬೈಲ್ ಅಪ್ಲಿಕೇಶನ್​ಗಳಲ್ಲಿ ಹರಿಬಿಟ್ಟ ಪ್ರಕರಣದಲ್ಲಿ ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಫೆಬ್ರವರಿಯಲ್ಲೇ ಕೇಸ್ ದಾಖಲಾಗಿತ್ತು ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆ ಹೇಳಿದ್ದಾರೆ.

ರಾಜ್ ಕುಂದ್ರಾ ಬಂಧನವಾಗುತ್ತಿದ್ದಂತೆ, ಅವರು ಹಿಂದಿಯ ಪ್ರಸಿದ್ದ ಕಪಿಲ್ ಶರ್ಮಾ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ರಾಜ್​ಕುಂದ್ರಾ, ಪತ್ನಿ ಶಿಲ್ಪಾಶೆಟ್ಟಿ ಮತ್ತು ಅವರ ಸಹೋದರಿ ಶಮಿತಾ ಶೆಟ್ಟಿ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಕುಂದ್ರಾ ಅವರಿಗೆ, ನೀವು ಶಿಲ್ಪಾ ಜೊತೆ ಶಾಪಿಂಗ್ ಮಾಡ್ತೀರಿ, ತಿರುಗಾಡುತ್ತೀರಿ, ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತೀರಿ ಮತ್ತು ಸುಮ್ಮನೆ ಕೂತು ಫುಟ್ಬಾಲ್ ವೀಕ್ಷಿಸುತ್ತೀರಿ. ಇಷ್ಟೆಲ್ಲಾ ಮಾಡಲು ನಿಮಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸುತ್ತಾರೆ.

  • शिल्पा शेट्टी के पति राज कुंद्रा को क्राइम ब्रांच ने
    अश्लील फिल्में बनाने के आरोप मे किया गिरफ्तार.
    Finally everyone got the right answer of the question asked by kapil sharma on #TheKapilSharmaShow many years ago.#RajKundra #shilpashettykundra #RajKundraArrest pic.twitter.com/TcMFujKiyu

    — Dessie Aussie 🇮🇳🇭🇲 (@DessieAussie) July 19, 2021 " class="align-text-top noRightClick twitterSection" data=" ">

ಈ ವೇಳೆ ಎಲ್ಲರೂ ಬಿದ್ದು ಬಿದ್ದು ನಗುತ್ತಾರೆ. ಆ ಸಂದರ್ಭದಲ್ಲಿ ತಮಾಷೆಗೆ ಕೇಳಿದ ಪ್ರಶ್ನೆ, ಇದೀಗ ಕುಂದ್ರಾ ಹಣ ಗಳಿಸಲು ಅಡ್ಡದಾರಿ ಹಿಡಿದ ಆರೋಪದಲ್ಲಿ ಬಂಧನವಾಗುತ್ತಿದ್ದಂತೆ ವೈರಲ್ ಆಗುತ್ತಿದೆ.

ಓದಿ : ಅಶ್ಲೀಲ ಚಿತ್ರ ನಿರ್ಮಾಣ ಆರೋಪ: ರಾಜ್ ಕುಂದ್ರಾ ಬಳಿಕ ಮತ್ತೊಬ್ಬನ ಬಂಧನ..!

ಬ್ರಿಟಿಷ್-ಇಂಡಿಯನ್ ಬ್ಯುಸಿನೆಸ್ ಮ್ಯಾನ್ ಆಗಿರುವ ರಾಜ್​ಕುಂದ್ರಾ ವಿರುದ್ಧದ ಪ್ರಕರಣದ ತನಿಖೆಯನ್ನು ಮುಂಬೈ ಕ್ರೈಂ ಬ್ರ್ಯಾಂಚ್ ನಡೆಸುತ್ತಿದೆ. ರಾಜ್​ಕುಂದ್ರಾ ವಿರುದ್ಧ ಅಶ್ಲೀಲ ಚಿತ್ರ ನಿರ್ಮಾಣ ಮಾಡಿ ಮೊಬೈಲ್ ಆ್ಯಪ್​ಗಳಲ್ಲಿ ಹರಿಬಿಟ್ಟ ಆರೋಪವಿದೆ. ರಾಜ್ ಕುಂದ್ರಾ ಅವರನ್ನು ನಾವು ಬಂಧಿಸಿದ್ದೇವೆ ಎಂದು ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆ ಹೇಳಿದ್ದಾರೆ.

ಕಳೆದ ತಿಂಗಳು ಸಂದರ್ಶನವೊಂದರಲ್ಲಿ ಮಾತನಾಡಿದ ರಾಜ್​​ಕುಂದ್ರಾ, ತನ್ನ ಮೊದಲ ಪತ್ನಿ ಕವಿತಾ ತನ್ನ ಸಹೋದರಿಯ ಪತಿಯ ಜೊತೆ ಸಂಬಂಧ ಹೊಂದಿದ್ದಳು, ಹಾಗಾಗಿ ಅವಳಿಗೆ ಡಿವೋರ್ಸ್​ ಕೊಟ್ಟೆ ಎಂದು ಹೇಳಿದ್ದರು.

ನನ್ನನ್ನು ಪತಿಯಿಂದ ದೂರ ಮಾಡಲು ಶಿಲ್ಪಾ ಶೆಟ್ಟಿಯೇ ಕಾರಣ ಎಂದು ಕವಿತಾ ಆರೋಪ ಮಾಡಿದ ಬಳಿಕ ಕುಂದ್ರಾ ಈ ರೀತಿಯ ಪ್ರತಿಕ್ರಿಯೆ ಕೊಟ್ಟಿದ್ದರು. ಇದೀಗ ಕುಂದ್ರಾ ವಿರುದ್ಧವೇ ಅಶ್ಲೀಲ ಚಿತ್ರ ನಿರ್ಮಿಸಿದ ಆರೋಪ ಕೇಳಿ ಬಂದಿರುವುದು ವಿಪರ್ಯಾಸ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.