ETV Bharat / sitara

ಈ ಬಾರಿ ಹುಟ್ಟುಹಬ್ಬ ಆಚರಣೆಗೆ ಮನಸ್ಸಿಲ್ಲ...ಮಿಥುನ್ ಚಕ್ರವರ್ತಿ

author img

By

Published : Jun 16, 2020, 1:21 PM IST

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಹುಟ್ಟಿದ ದಿನ ಇಂದು. ದಾದಾ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಮಿಥುನ್ ಚಕ್ರವರ್ತಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಬಾಲಿವುಡ್ ಸ್ನೇಹಿತರು ಬರ್ತ್​ಡೇ ಶುಭ ಕೋರಿದ್ದಾರೆ. ಆದರೆ ಇಂದು ಮಿಥುನ್ ಚಕ್ರವರ್ತಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.

mithun chakraborty birthday
ಮಿಥುನ್ ಚಕ್ರವರ್ತಿ ಹುಟ್ಟುಹಬ್ಬ

ಈ ಬಾರಿ ಕೊರೊನಾ ವೈರಸ್ ಕಾರಣದಿಂದ ಸಿನಿಮಾ ನಟರು ಸರಳವಾಗಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಹಾಗೂ ಮೊನ್ನೆಯಷ್ಟೇ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟ ಕಾರಣ ಆ ಬೇಸರದಿಂದ ಮಿಥುನ್ ಚಕ್ರವರ್ತಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಸಿಲ್ಲವಂತೆ.

'ಈ ವರ್ಷ ಕೊರೊನಾದಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಅಲ್ಲದೆ ನಮ್ಮ ಗೆಳೆಯ ಸುಶಾಂತ್ ಸಿಂಗ್​​​ ರಜಪೂತ್ ಹಠಾತ್ ನಿಧನದಿಂದ ನಮ್ಮ ಕುಟುಂಬ ತಂದೆಯ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದೇವೆ. ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತವಾಗಿರಿ, ಹೊರಗೆ ಬರುವುದನ್ನು ಆದಷ್ಟು ಕಡಿಮೆ ಮಾಡಿ' ಎಂದು ಮಿಥುನ್ ಚಕ್ರವರ್ತಿ ಪುತ್ರ ನಮಾಶಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Mithun Chakraborty
ಮಿಥುನ್ ಚಕ್ರವರ್ತಿ

ಇನ್ನು ಬಹಳ ದಿನಗಳಿಂದ ಡಿಪ್ರೆಷನ್​​ನಲ್ಲಿದ್ದ ಸುಶಾಂತ್ ಸಿಂಗ್ ರಜಪೂತ್ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದು ಈ ಸಂಬಂಧ ಕೂಡಾ ನಮಾಶಿ ಮಾತನಾಡಿದ್ದಾರೆ. 'ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹೆಚ್ಚಾಗಿ ಬೆರೆಯಿರಿ. ಅಗತ್ಯ ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ನಿಮ್ಮ ಸುತ್ತ ಮುತ್ತ ಇರುವ ಎಲ್ಲಾ ವ್ಯಕ್ತಿತ್ವದ ಜನರೊಂದಿಗೆ ಬದುಕುವುದನ್ನು ಕಲಿಯಿರಿ' ಎಂದು ನಮಾಶಿ ಮನವಿ ಮಾಡಿದ್ದಾರೆ.

'ನಿಮಗೆ ಇಷ್ಟ ಇರಲಿ, ಬಿಡಲಿ ನಿಮ್ಮ ಮಾತುಗಳಿಂದ ಇನ್ನೊಬ್ಬರ ಮನಸ್ಸನ್ನು ನೋಯಿಸಬೇಡಿ. ನಿಮಗೆ ಇಷ್ಟವಿಲ್ಲದಿದ್ದರೂ ತಾಳ್ಮೆಯಿಂದ ಎಲ್ಲವನ್ನೂ ಕೇಳಿ, ಅದರಂತೆ ಇತರರನ್ನೂ ಮಾತನಾಡಲು ಬಿಡಿ. ಏಕೆಂದರೆ ಮಾನಸಿಕ ಖಿನ್ನತೆ ದೊಡ್ಡ ಕೊಲೆಗಾರನಿದ್ದಂತೆ. ಆದ್ದರಿಂದ ಎಲ್ಲರ ಭಾವನೆಗಳಿಗೆ ಬೆಲೆ ಕೊಡುವುದನ್ನು ಕಲಿಯಿರಿ' ಎಂದು ನಮಾಶಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮಿಥುನ್ ಚಕ್ರವರ್ತಿ ಪುತ್ರ ನಮಾಶಿ, ರಾಜ್​ಕುಮಾರ್ ಸಂತೋಷಿ ಅವರ ರೊಮ್ಯಾನ್ಸ್ -ಕಾಮಿಡಿ 'ಬ್ಯಾಡ್ ಬಾಯ್' ಚಿತ್ರದ ಮೂಲಕ ಬಾಲಿವುಡ್​​​ಗೆ ಕಾಲಿಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.