ಬಾಡಿ ಬಿಲ್ಡರ್​ ಮನೋಜ್ ನಕಲಿ ಸ್ಟೀರಾಯ್ಡ್​ಗಳನ್ನು ಮಾರುತ್ತಿದ್ದ: ಸಾಹಿಲ್​ ಖಾನ್ ಆರೋಪ

author img

By

Published : Sep 17, 2021, 10:51 AM IST

ಸಾಹಿಲ್​ ಖಾನ್

ಬಾಡಿ ಬಿಲ್ಡರ್​ ಮನೋಜ್​ ಪಾಟೀಲ್​ ನಕಲಿ ಸ್ಟೀರಾಯ್ಡ್​ಗಳನ್ನು ಮಾರಾಟ ಮಾಡುತ್ತಿದ್ದರು ಎಂದು ನಟ ಸಾಹಿಲ್ ಖಾನ್ ಆರೋಪಿಸಿದ್ದಾರೆ.

ಮುಂಬೈ: ನಕಲಿ ಮತ್ತು ಅವಧಿ ಮೀರಿದ ಸ್ಟೀರಾಯ್ಡ್​ಗಳನ್ನು ಮನೋಜ್ ಮಾರಾಟ ಮಾಡುತ್ತಿದ್ದ ಬಗ್ಗೆ ನನಗೆ ಮಾಹಿತಿಯಿದ್ದ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದೇನೆ ಎಂದು ನಟ ಸಾಹಿಲ್​ ಖಾನ್ ಬಹಿರಂಗಪಡಿಸಿದ್ದಾರೆ.

ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್ ಮನೋಜ್ ಪಾಟೀಲ್ ಡೆತ್​ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಡೆತ್​​ ನೋಟ್​​ನಲ್ಲಿ ಬಾಲಿವುಡ್​ ನಟ ಸಾಹಿಲ್ ಖಾನ್ ಮೇಲೆ ಗಂಭೀರವಾದ ಆರೋಪ ಮಾಡಿದ್ದರು.

ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾಹಿಲ್ ಖಾನ್​, ಬಾಡಿ ಬಿಲ್ಡರ್​ ಮನೋಜ್ ಪಾಟೀಲ್​ ಅವರು ರಾಜ್​ ಫೌಜ್ದರ್​​​ ಎಂಬ ಬಾಡಿ ಬಿಲ್ಡರ್​ಗೆ ನಕಲಿ ಮತ್ತು ಅವಧಿ ಮೀರಿದ ಸ್ಟೀರಾಯ್ಡ್​ಗಳನ್ನು ಮಾರುತ್ತಿದ್ದರು. ಆ ಸ್ಟೀರಾಯ್ಡ್​ಗಳ ಬೆಲೆ ಬರೋಬ್ಬರಿ ಎರಡು ಲಕ್ಷ ರೂಪಾಯಿ. ನನಗೆ ಈ ಬಗ್ಗೆ ರಾಜ್​ ಫೌಜ್ದರ್ ಮಾಹಿತಿ ನೀಡಿದ್ದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಿದ್ದೆ ಎಂದರು.

ಇದನ್ನೂ ಓದಿ: ಮಿ.ಇಂಡಿಯಾ ಬಾಡಿ ಬಿಲ್ಡರ್ ಆತ್ಮಹತ್ಯಾ ಯತ್ನ: ಬಾಲಿವುಡ್ ನಟ ಸಾಹಿಲ್ ಖಾನ್ ವಿರುದ್ಧ ಕಿರುಕುಳ ಆರೋಪ

ಮನೋಜ್ ಮಾರಾಟ ಮಾಡಿದ ಎಲ್ಲಾ ಬಿಲ್​ಗಳು ಮತ್ತು ಸ್ಟೀರಾಯ್ಡ್​ಗಳ ದಾಖಲೆಯಿದೆ. ರಾಜ್​ ಫೌಜ್ದರ್​ ದಾಖಲೆಗಳನ್ನು ನೀಡುತ್ತೇನೆ, ಹಣವನ್ನು ಹಿಂದಿರುಗಿಸುವಂತೆ ಕೋರಿದಾಗ ಮನೋಜ್​, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದರು. ನಕಲಿ ಔಷಧ ಮಾರಾಟ ಮಾಡುವುದು ದೊಡ್ಡ ಅಪರಾಧವಾಗಿದೆ. ಈ ಹಿನ್ನೆಲೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದು, ಇದೀಗ ದೂರು ದಾಖಲಿಸುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.