ETV Bharat / sitara

ಬಿಗ್ ಬಾಸ್ 15: ತೇಜಸ್ವಿ - ಕರಣ್ ನಡುವೆ ಭಿನ್ನಾಭಿಪ್ರಾಯ?

author img

By

Published : Dec 29, 2021, 6:41 PM IST

ಹಿಂದಿ ಬಿಗ್ ಬಾಸ್ 15ರಲ್ಲಿ ತೇಜಸ್ವಿ ಮತ್ತು ಕರಣ್ ಕುಂದ್ರಾ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ.

fight between Karan and Tejasswi
ತೇಜಸ್ವಿ-ಕರಣ್ ನಡುವೆ ಭಿನ್ನಾಭಿಪ್ರಾಯ

ಮುಂಬೈ (ಮಹಾರಾಷ್ಟ್ರ): ಹಿಂದಿ ಬಿಗ್ ಬಾಸ್ 15ರ ಹಿಂದಿನ ಸಂಚಿಕೆಯಲ್ಲಿ, ತೇಜಸ್ವಿ ಪ್ರಕಾಶ್ ಅವರನ್ನು ಮದುವೆಯಾಗುವಂತೆ ಕರಣ್ ಕುಂದ್ರಾ ಅವರಿಗೆ ಪ್ರತಿಸ್ಪರ್ಧಿ ರಾಖಿ ಸಾವಂತ್ ಮಾರ್ಗದರ್ಶನ ನೀಡಿದ್ದರು. ಆದರೆ, ಟಾಸ್ಕ್​ವೊಂದರ ವೇಳೆ ವೈಯಕ್ತಿಕ ಆಟಗಳು ಅವರ ಮಧ್ಯೆ ಬಿರುಕು ಮೂಡಿಸಿವೆ.

ತೇಜಸ್ವಿ ತನ್ನತ್ತ ಗಮನ ಹರಿಸುತ್ತಿಲ್ಲ ಎಂದು ಕರಣ್ ಭಾವಿಸಿದ್ದು, ತೇಜಸ್ವಿ ಅವರನ್ನು ದೂರ ಹೋಗುವಂತೆ ಕೇಳಿಕೊಂಡರು. ತೇಜಸ್ವಿ ಅವರು ಕರಣ್ ಜೊತೆ ಮಾತನಾಡಲು ಬಂದಾಗ, ಅವರು ತೇಜಸ್ವಿಗೆ ನಿಮ್ಮ ಸ್ನೇಹಿತರಾದ ನಿಶಾಂತ್ ಭಟ್ ಮತ್ತು ದೇವೋಲೀನಾ ಭಟ್ಟಾಚಾರ್ಯರ ಬಳಿಗೆ ಹೋಗಬಹುದು. ನಮ್ಮಲ್ಲಿ ಚರ್ಚಿಸಲು ಏನೂ ಇಲ್ಲ ಎಂದು ನಾನು ಭಾವಿಸುತ್ತೇನೆ. ನೀವ್ಯಾಕೆ ಇಲ್ಲಿದ್ದೀರಿ? ಎಂದು ಕರಣ್ ಹೇಳಿದರು. ಅದೇಗೆ ಈ ರೀತಿ ಮಾತನಾಡುತ್ತಾರೆ ಎಂದು ತೇಜಸ್ವಿ ಪ್ರತಿಕ್ರಿಯಿಸಿದರು. ಅಲ್ಲದೇ ನೀವು ನನ್ನನ್ನು ಇಲ್ಲಿಂದ ಹೋಗುವಂತೆ ಹೇಳಲು ಎಷ್ಟು ಧೈರ್ಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 'ದಿ ಬಿಗ್ ಪಿಕ್ಚರ್' ಶೋ ಮೂಲಕ ಮನರಂಜಿಸಲಿದ್ದಾರೆ ರಣವೀರ್ ಸಿಂಗ್-ಗೋವಿಂದ

ದಿನದಾಂತ್ಯದಲ್ಲಿ ನನ್ನ ಬಳಿಗೆ ಬರುತ್ತೀರಿ, ಇತರ ಸಮಯ ಬೇರೆಯವರೊಂದಿಗೆ ಹೆಚ್ಚು ಕಾಲ ಕಳೆಯುತ್ತೀರಿ, ಮಲಗುವ ಮುನ್ನ ಅಷ್ಟೇ ನನ್ನ ಬಳಿ ಬಂದು ಮಾತನಾಡುತ್ತೀರಿ, ನನ್ನೊಂದಿಗೆ ಮಾತನಾಡಲು ನಿಮ್ಮಲ್ಲಿ ಸಮಯವಿಲ್ಲ ಎಂದು ಕರಣ್​ ಹೇಳುತ್ತಿದ್ದಂತೆ ತೇಜಸ್ವಿ ಕೋಪಗೊಂಡರು.. ಅಲ್ಲದೇ ಇಲ್ಲಿಂದ ಹೋಗಿ ಎಂದು ಕರಣ್​ ಕಿಡಿ ಕಾರಿದರು. ಮರುದಿನ ಬೆಳಗ್ಗೆ, ತೇಜಸ್ವಿ ಸರಿಯಾಗಿ ಗಮನ ಕೊಡದಿದ್ದರೆ ನನಗಾಗುವುದಿಲ್ಲ ಎಂದು ಸ್ಪರ್ಧಿಗಳೊಂದಿಗೆ ಬೇಸರ ವ್ಯಕ್ತಪಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.