ETV Bharat / sitara

ಬ್ರಹ್ಮಾಸ್ತ್ರ ಬಿಡುಗಡೆ ದಿನಾಂಕ ತಡವಾಗ್ತಿರೋದಕ್ಕೆ ನಿರ್ದೇಶಕ ಅಯಾನ್‌ ಮುಖರ್ಜಿ ಬೇಸರ

author img

By

Published : Dec 3, 2021, 5:26 PM IST

ಲವ್‌ ಬರ್ಡ್ಸ್‌ ರಣಬೀರ್‌ ಕಪೂರ್‌ ಹಾಗೂ ಅಲಿಯಾ ಭಟ್‌ ಜೊತೆಯಾಗಿ ನಟಿಸಿರುವ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆ ದಿನಾಂಕ ತಡವಾಗುತ್ತಿರುವುದಕ್ಕೆ ನಿರ್ದೇಶಕ ಅಯಾನ್‌ ಮುಖರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದ ಫೋಟೋವೊಂದನ್ನು ರಿವೀಲ್‌ ಮಾಡಿ ದಿ ಟೈಮ್‌ ಫೀಲ್ಸ್‌ ರೈಟ್‌ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ..

Ayan Mukerji teases Brahmastra release date with Ranbir's pic, Alia calls it 'Love'
ಬ್ರಹ್ಮಾಸ್ತ್ರ ಬಿಡುಗಡೆ ದಿನಾಂಕ ತಡವಾಗ್ತಿರೋದಕ್ಕೆ ನಿರ್ದೇಶಕ ಅಯಾನ್‌ ಮುಖರ್ಜಿ ಬೇಸರ

ಹೈದರಾಬಾದ್‌: ಬಾಲಿವುಡ್‌ ನಿರ್ದೇಶಕ ಅಯಾನ್‌ ಮುಖರ್ಜಿ ತಮ್ಮ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ಸಿನಿಮಾದಲ್ಲಿನ ನಟ ರಣಬೀರ್ ಕಪೂರ್ ಅವರ ಫೋಟೋವೊಂದನ್ನ ರಿವೀಲ್‌ ಮಾಡಿದ್ದಾರೆ.

ಬ್ರಹ್ಮಾಸ್ತ್ರದ ಇತ್ತೀಚಿನ ಸ್ಟಿಲ್ ಜೊತೆಗೆ ಕೋವಿಡ್‌ನಿಂದಾಗಿ ಒಂದೆರಡು ಬಾರಿ ಚಿತ್ರ ಬಿಡುಗಡೆಯ ದಿನಾಂಕ ಮುಂದೂಡಿಕೆ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಾರದ ಆರಂಭದಲ್ಲಿ ಬ್ರಹ್ಮಾಸ್ತ್ರ ಚಿತ್ರದ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದ ಅಯಾನ್‌, ತನ್ನ ಸ್ನೇಹಿತ ಹಾಗೂ ಚಿತ್ರದ ನಾಯಕ ರಣಬೀರ್ ಅವರ ಆಸಕ್ತಿದಾಯಕ ಫೋಟೋವನ್ನು ಹರಿಬಿಟ್ಟಿದ್ದಾರೆ. ಚಿತ್ರದಲ್ಲಿ ರಣಬೀರ್ ಬೆಂಕಿ ಮುಂದೆ ತನ್ನ ಕೈಯನ್ನು ಮುಂದಕ್ಕೆ ಚಾಚಿದ್ದು, ಮಂತ್ರ ಹಾಕುವಂತೆ ಕಾಣುತ್ತಿದೆ.

ಫೋಟೋವನ್ನು ಜಾಲತಾಣಗಳ ಮೂಲಕ ಹಂಚಿಕೊಂಡಿರುವ ಅವರು, 'ದಿ ಟೈಮ್‌ ಫೀಲ್ಸ್‌ ರೈಟ್‌' ಎರಡೂವರೆ ವರ್ಷಗಳ ಹಿಂದೆ, ನಾನು ಈ ಇನ್‌ಸ್ಟಾದ ಪ್ರಯಾಣವನ್ನು ಪ್ರಾರಂಭಿಸಿದೆ.

ಬ್ರಹ್ಮಾಸ್ತ್ರದ ಬಿಡುಗಡೆಯೊಂದಿಗೆ ಕೆಲವು ತಿಂಗಳುಗಳ ನಂತರ, ಚಲನಚಿತ್ರವನ್ನು ಪರಿಪೂರ್ಣಗೊಳಿಸಲು ನಮಗೆ ಹೆಚ್ಚಿನ ಸಮಯ ಬೇಕಾಯಿತು. ನಂತರ, ನಾನು ಇನ್‌ಸ್ಟಾವನ್ನು ನಿಲ್ಲಿಸುವ ಭಾವನೆ ಮೂಡಿತು. ಜಗತ್ತು ಸ್ವಲ್ಪ ಸಮಯದವರೆಗೆ ನಿಂತುಹೋಯಿತು ಎಂದಿದ್ದಾರೆ.

ಪ್ರತಿ ದಿನವೂ ಬ್ರಹ್ಮಾಸ್ತ್ರ ಆನ್‌ ಆಗುತ್ತದೆ. ಅದಕ್ಕೆ ಬೇಕಾದ ಎಲ್ಲಾ ಪ್ರೀತಿ ಮತ್ತು ಸಮಪರ್ಣೆಯೊಂದಿಗೆ ಬೆಳೆಯುತ್ತಿದ್ದು, ಸಮಯಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಶೀಘ್ರದಲ್ಲೇ ಬ್ರಹ್ಮಾಸ್ತ್ರದ ಸಿನಿಮಾ ಬಿಡುಗಡೆಯ ಅಂತಿಮ ದಿನಾಂಕವನ್ನು ಘೋಷಿಸಲು ನಮ್ಮ ತಂಡ ಸಿದ್ಧವಾಗಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ. ಲವ್‌ ಬರ್ಡ್ಸ್‌ ರಣಬೀರ್‌ ಕಪೂರ್‌ ಹಾಗೂ ಅಲಿಯಾ ಭಟ್‌ ಚಿತ್ರದಲ್ಲಿ ಜೋಡಿಯಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಫ್ಯಾಬ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್​​ ನಟಿಮಣಿಯರ ಹಾಟ್ ಲುಕ್​​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.