ಪೊನ್ನಿಯಿನ್ ಸೆಲ್ವನ್-1.. ಐಶ್ವರ್ಯಾ ರೈ ಬಚ್ಚನ್​, ತ್ರಿಶಾ ಫಸ್ಟ್ ಲುಕ್ ರಿವೀಲ್

author img

By

Published : Mar 3, 2022, 5:58 PM IST

Ponniyin Selvan 1
Ponniyin Selvan 1 ()

ತಮಿಳು ಭಾಷೆಯ ಬಹುನಿರೀಕ್ಷಿತ 'ಪೊನ್ನಿಯಿನ್ ಸೆಲ್ವನ್-1' ಚಿತ್ರದಲ್ಲಿನ ನಟಿಯರಾದ ಐಶ್ವರ್ಯಾ ರೈ ಬಚ್ಚನ್, ತ್ರಿಶಾ, ನಟರಾದ ವಿಕ್ರಮ್, ಜಯಂ ರವಿ, ಕಾರ್ತಿ ಅವರ ಫಸ್ಟ್ ಲುಕ್ ರಿವೀಲ್​ ಆಗಿದೆ.

'ಪೊನ್ನಿಯಿನ್ ಸೆಲ್ವನ್-1' ಅಥವಾ 'PS-I' ಇದು ಮುಂಬರುವ ತಮಿಳು ಭಾಷೆಯ ಬಹುನಿರೀಕ್ಷಿತ ಐತಿಹಾಸಿಕ ಕಾಲ್ಪನಿಕ ಸಿನಿಮಾವಾಗಿದ್ದು, ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಇಂದು ಈ ಸಿನಿಮಾದಲ್ಲಿನ ನಟಿಯರಾದ ಐಶ್ವರ್ಯಾ ರೈ ಬಚ್ಚನ್, ತ್ರಿಶಾ, ನಟರಾದ ವಿಕ್ರಮ್, ಜಯಂ ರವಿ, ಕಾರ್ತಿ ಅವರ ಫಸ್ಟ್ ಲುಕ್ ರಿವೀಲ್​ ಆಗಿದೆ.

Ponniyin Selvan 1
ಐಶ್ವರ್ಯಾ ರೈ ಬಚ್ಚನ್ ಫಸ್ಟ್ ಲುಕ್ ರಿವೀಲ್

ಫಸ್ಟ್ ಲುಕ್ ಪೋಸ್ಟರ್‌ಗಳಲ್ಲಿ ನಂದಿನಿಯಾಗಿ ಐಶ್ವರ್ಯಾ ರೈ ಬಚ್ಚನ್, ಆದಿತ್ಯ ಕರಿಕಾಳನ್ ಆಗಿ ವಿಕ್ರಮ್, ಅರುಲ್ಮೋಳಿ ವರ್ಮನ್ ಆಗಿ ಜಯಂ ರವಿ, ವಂಧಿಯತೇವನ್ ಆಗಿ ಕಾರ್ತಿ ಮತ್ತು ಕುಂದವೈ ಆಗಿ ತ್ರಿಶಾ ಕಾಣಿಸಿಕೊಂಡಿದ್ದಾರೆ. ತಮ್ಮ ಫಸ್ಟ್​ ಲುಕ್​ ಅನ್ನು ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿರುವ ಐಶ್ವರ್ಯಾ, "ಸುವರ್ಣ ಯುಗವು ಸೆಪ್ಟೆಂಬರ್ 30 ರಂದು ಬೆಳ್ಳಿಪರದೆ ಮೇಲೆ ಬರಲಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ವಿಕ್ರಾಂತ್‌ ರೋಣ' ಸಿನಿಮಾದ ಇಂಗ್ಲಿಷ್‌ ಡಬ್ಬಿಂಗ್‌ ಪೂರ್ಣಗೊಳಿಸಿದ ಸುದೀಪ್‌

ಕಲ್ಕಿ ಕೃಷ್ಣಮೂರ್ತಿಯವರ ಜನಪ್ರಿಯ ಐತಿಹಾಸಿಕ ಕಾದಂಬರಿ 'ಪೊನ್ನಿಯಿನ್ ಸೆಲ್ವನ್' ಆಧರಿಸಿದ ಚಿತ್ರ ಇದಾಗಿದ್ದು, ಮಣಿರತ್ನಂ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದು, ರವಿವರ್ಮನ್ ಛಾಯಾಗ್ರಹಣ ಮಾಡಿದ್ದಾರೆ. ಈ ವರ್ಷ ಸೆಪ್ಟೆಂಬರ್ 30 ರಂದು ಈ ಚಿತ್ರ ತೆರೆ ಮೇಲೆ ಬರಲಿದೆ.

Ponniyin Selvan 1
ನಟ ವಿಕ್ರಮ್​ ಫಸ್ಟ್ ಲುಕ್​​
ETV Bharat Logo

Copyright © 2024 Ushodaya Enterprises Pvt. Ltd., All Rights Reserved.