ETV Bharat / science-and-technology

ಕೃತಕ ಬುದ್ಧಿಮತ್ತೆ ಬಳಸಿ ಪರೀಕ್ಷೆಗಳಲ್ಲಿ ನಕಲು: ಇಂಗ್ಲೆಂಡ್​ ವಿವಿಗಳಲ್ಲಿ ತನಿಖೆ, 146 ಮಕ್ಕಳು ತಪ್ಪಿತಸ್ಥರೆಂದು ದೃಢ!

author img

By

Published : Jul 10, 2023, 5:41 PM IST

ಕೃತಕ ಬುದ್ಧಿಮತ್ತೆ ಬಳಸಿ(AI) ಇಂಗ್ಲೆಂಡ್​ನ ಹಲವು ವಿವಿಗಳಲ್ಲಿ ಪರೀಕ್ಷಾ ನಕಲು ಮಾಡಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 377 ವಿದ್ಯಾರ್ಥಿಗಳಲ್ಲಿ 146 ಮಕ್ಕಳು ತಾಂತ್ರಿಕತೆ ಬಳಸಿ ನಕಲು ಮಾಡಿದ್ದು ದೃಢಪಟ್ಟಿದೆ.

ಕೃತಕ ಬುದ್ಧಿಮತ್ತೆ ಬಳಸಿ ಪರೀಕ್ಷೆಗಳಲ್ಲಿ ನಕಲು
ಕೃತಕ ಬುದ್ಧಿಮತ್ತೆ ಬಳಸಿ ಪರೀಕ್ಷೆಗಳಲ್ಲಿ ನಕಲು

ಲಂಡನ್: ಚಾಟ್​ಜಿಪಿಟಿಯಂತಹ ಕೃತಕ ಬುದ್ಧಿಮತ್ತೆಯನ್ನು (AI) ಬಳಸಿಕೊಂಡು ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಇದನ್ನೇ ಬಳಸಿಕೊಂಡು ಮೌಲ್ಯಮಾಪನ ಕೂಡ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ಇಂಗ್ಲೆಂಡ್​ನಲ್ಲಿ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

ವಿಶ್ವವಿದ್ಯಾನಿಲಗಳ ಪರೀಕ್ಷೆಗಳಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕೃತಕಬುದ್ಧಿ ಬಳಸಿ ಪರೀಕ್ಷೆಗಳಲ್ಲಿ ನಕಲು ಮಾಡಿದ್ದಾರೆ. 2022 ರ ಡಿಸೆಂಬರ್​​ನಿಂದ ಸುಮಾರು 48 ಸಂಸ್ಥೆಗಳು ತಮ್ಮ ಪರೀಕ್ಷೆಗಳಲ್ಲಿ ಬಳಕೆಯಾದ ಚಾಟ್​ಜಿಪಿಟಿಯ ಬಗ್ಗೆ ತನಿಖೆ ನಡೆಸುತ್ತಿವೆ. ಮೌಲ್ಯಮಾಪನಗಳಲ್ಲೂ ChatGPT ಅನ್ನು ಬಳಸಿಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. AI ಚಾಟ್‌ಬಾಟ್ ಅನ್ನು ಬಳಸಿದ್ದಕ್ಕಾಗಿ ಕನಿಷ್ಠ 377 ವಿದ್ಯಾರ್ಥಿಗಳ ಮೇಲೆ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ 146 ಮಕ್ಕಳು ತಪ್ಪಿತಸ್ಥರು ಎಂದು ಕಂಡುಬಂದಿದೆ. ಇನ್ನುಳಿದವರ ಮೇಲೆ ತನಿಖೆ ಮುಂದುವರಿದಿದೆ.

ವರದಿಯ ಪ್ರಕಾರ, ಕೆಂಟ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಯಲ್ಲಿ ಚಾಟ್​ಜಿಪಿಟಿ ನಕಲು ಮಾಡಿದ ವಿದ್ಯಾರ್ಥಿಗಳ ಸಂಖ್ಯೆಯು ಅತ್ಯಧಿಕವಾಗಿದೆ. ಅಲ್ಲಿ 47 ವಿದ್ಯಾರ್ಥಿಗಳು ChatGPT ಅಥವಾ ಯಾವುದೇ ಇತರ AI ಚಾಟ್‌ಬಾಟ್ ಅನ್ನು ಬಳಸಿದ್ದಾಗಿ ತಿಳಿದು ಬಂದಿದೆ. ಈ ಆರೋಪ ಪತ್ತೆಗೆ ಕೃತಕ ಬುದ್ಧಿಯಿಂದಲೇ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರುವುದಕ್ಕೆ ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಇನ್ನು, ಲಂಡನ್ ವಿಶ್ವವಿದ್ಯಾನಿಲಯದ ಬಿರ್ಕ್‌ಬೆಕ್‌ ವಿವಿಯಲ್ಲಿ 41 ವಿದ್ಯಾರ್ಥಿಗಳನ್ನು ತನಿಖೆಗೆ ಗುರಿಪಡಿಸಲಾಗಿದೆ. ಇಲ್ಲಿ ಐದು ವಿದ್ಯಾರ್ಥಿಗಳು ತಪ್ಪಿತಸ್ಥರು ಎಂದು ಒಪ್ಪಿಕೊಂಡಿದ್ದಾರೆ. ಹೊಸ ತಂತ್ರಜ್ಞಾನದ ನಕಲು ಆಗಿರುವುದರಿಂದ ಈ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಇಲ್ಲಿಯವರೆಗೆ 35 ವಿದ್ಯಾರ್ಥಿಗಳ ಮೇಲೆ ನಡೆಸಲಾದ ತನಿಖೆಯಲ್ಲಿ 19 ಕ್ಕಿಂತ ಹೆಚ್ಚು ಕೇಸ್​ಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ತನಿಖೆ ಜಾರಿಯಲ್ಲಿದೆ ಎಂಬುದು ವಿವಿಯ ಉವಾಚ.

ಬೆಸ್ಟ್‌ಕಾಲೇಜ್ ಸಮೀಕ್ಷೆಯ ಪ್ರಕಾರ, 51 ಪ್ರತಿಶತ ಕಾಲೇಜು ವಿದ್ಯಾರ್ಥಿಗಳು ಅಸೈನ್‌ಮೆಂಟ್‌ಗಳು ಮತ್ತು ಪರೀಕ್ಷೆಗಳನ್ನು ಪೂರ್ಣಗೊಳಿಸಲು ಚಾಟ್‌ಜಿಪಿಟಿಯಂತಹ AI ಸಾಧನಗಳನ್ನು ಬಳಸುವುದು ಮೋಸ ಅಥವಾ ಕೃತಿಚೌರ್ಯ ಎಂದು ಪರಿಗಣಿಸಲಾಗುತ್ತದೆ. ಐವರು ವಿದ್ಯಾರ್ಥಿಗಳಲ್ಲಿ ಒಬ್ಬರು ಕೃತಕಬುದ್ಧಿಮತ್ತೆ ಸಾಧನವನ್ನು ಹೇಗಾದರೂ ಬಳಸುತ್ತಾರೆ ಎಂದು ಹೇಳಿದೆ.

ಏನಿದು ಚಾಟ್​ಜಿಪಿಟಿ: ಕೃತಕ ಬುದ್ಧಿಮತ್ತೆ (AI) ಎನ್ನುವುದು ಸಾಫ್ಟ್‌ವೇರ್ ಕೋಡೆಡ್ ಹ್ಯೂರಿಸ್ಟಿಕ್ಸ್ ಮೂಲಕ ಮಾನವ ಬುದ್ಧಿಮತ್ತೆಯ ಸಿಮ್ಯುಲೇಶನ್ ಅನ್ನು ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಲೌಡ್ - ಆಧಾರಿತ, ಎಂಟರ್‌ಪ್ರೈಸ್ ಅಪ್ಲಿಕೇಶನ್‌ಗಳಿಂದ ಹಿಡಿದು ಗ್ರಾಹಕ ಅಪ್ಲಿಕೇಶನ್‌ಗಳು ಮತ್ತು ಎಂಬೆಡೆಡ್ ಫರ್ಮ್‌ವೇರ್ ಎಲ್ಲದರಲ್ಲೂ ಈ ಕೋಡ್ ಪ್ರಚಲಿತವಾಗಿದೆ.

ಕಂಪ್ಯೂಟರ್ ಸೈನ್ಸ್​ನ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳಲ್ಲಿ ಒಂದಾಗಿರುವ ಕೃತಕ ಬುದ್ಧಿಮತ್ತೆ ಬುದ್ಧಿವಂತ ಯಂತ್ರಗಳನ್ನು ತಯಾರಿಸುವ ಮೂಲಕ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲು ಸಿದ್ಧವಾಗಿದೆ. ಕೃತಕ ಬುದ್ಧಿಮತ್ತೆ ಈಗ ನಮ್ಮ ಸುತ್ತಲೂ ಇದೆ. ಇದು ಪ್ರಸ್ತುತ ಸ್ವಯಂ ಚಾಲನಾ ಕಾರುಗಳು, ಚೆಸ್ ಆಡುವುದು, ಪ್ರಮೇಯಗಳನ್ನು ಸಾಬೀತುಪಡಿಸುವುದು, ಸಂಗೀತ ನುಡಿಸುವುದು, ಚಿತ್ರಕಲೆ ಇತ್ಯಾದಿಗಳಂತಹ ಸಾಮಾನ್ಯದಿಂದ ನಿರ್ದಿಷ್ಟವಾದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ.. ಎಚ್ಚರ.., ನಕಲಿ ChatGPT ಆ್ಯಪ್​ ರೆಡಿ ಮಾಡ್ತಿದೆ Android ಮಾಲ್‌ವೇರ್!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.